ತುಮಕೂರು:ಕರ್ನಾಟಕ ಕಾರ್ಯನಿರತ ಪತ್ರಿಕಾ ಸಂಪಾದಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದ ಪ್ರಜಾಮನ ಕನ್ನಡ ದಿನಪತ್ರಿಕೆ ಸಂಪಾದಕ ಟಿ.ಎಸ್.ಕೃಷ್ಣಮೂರ್ತಿ ಎಂ.ಎಸ್.ಆಶಾ ದಂಪತಿಗಳನ್ನು ಅವರ ಬಾಲ್ಯ ಸ್ನೇಹಿತರು ನಗರದ ಖಾಸಗಿ ಹೋಟೆಲ್ನಲ್ಲಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮಾತನಾಡಿದ ಬೆಂಗಳೂರಿನ ಕೃಷಿ ಇಲಾಖೆ ಉಪ ಕಾರ್ಯದರ್ಶಿ ಟಿ.ಎನ್.ಅಶೋಕ, ಶಾಲಾ ಅವಧಿಯಿಂದಲೂ ಟಿ.ಎಸ್.ಕೃಷ್ಣಮೂರ್ತಿ ಎಲ್ಲರೊಂದಿಗೆ ಬೆರೆಯುತ್ತಾ ಇಂದು ಜಿಲ್ಲೆಯಲ್ಲಿ ಪತ್ರಿಕಾರಂಗದಲ್ಲಿ ನೂರಾರು ಜನರನ್ನು ಬೆಳೆಸಿದ್ದಾನೆ.ಇಂದು ಅವನಿಗೆ ಸಿಕ್ಕ ಸ್ಥಾನ ಅವನ ಶ್ರಮದಿಂದಲೇ ದಕ್ಕಿದೆ ಎಂದು ಬಣ್ಣಿಸಿದರು.
ಇಂತಹ ಸ್ನೇಹಿತರು ಸಿಗುವುದು ಬಹಳ ಅಪರೂಪ ಅದರಲ್ಲೂ ಕೃಷ್ಣಮೂರ್ತಿಯಂತಹ ಸ್ವಾಭಿಮಾನಿ ವ್ಯಕ್ತಿ ಇತರರಿಗೆ ಮಾದರಿಯಾಗಿದ್ದಾರೆ.ಪತ್ರಿಕಾರಂಗದಲ್ಲಷ್ಟೇ ಅಲ್ಲ ಸಿನಿಮಾ ರಂಗದಲ್ಲೂ ಸಹ ನಿರ್ದೇಶಕನಾಗಿ ಕೆಲಸ ಮಾಡುತ್ತಿರುವುದು ನಮಗೆ ಸಂತಸ ತಂದಿದೆ ಎಂದರು.
ಸ್ನೇಹಿತೆ ಗೀತಾ ಮಾತನಾಡಿ, ಟಿ.ಎಸ್.ಕೃಷ್ಣಮೂರ್ತಿ ಎಲ್ಲಾ ಕ್ಷೇತ್ರಗಳಲ್ಲು ತನ್ನ ಛಾಪು ಮೂಡಿಸಿಕೊಂಡಿದ್ದಾರೆ ಇನ್ನಷ್ಟು ಉತ್ತುಂಗಕ್ಕೆ ಬೆಳೆಯಲಿ ಹಲವು ಪ್ರಶಸ್ತಿಗಳನ್ನು ಪಡೆದ ಇವರು ಸಾಮಾನ್ಯರ ರೀತಿ ಎಲ್ಲರೊಂದಿಗೆ ಬೆರೆಯುವುದು ಅವರ ಸರಳತೆಗೆ ಸಾಕ್ಷಿ.ಇಂತಹ ಸರಳ ಸಜ್ಜನಿಕೆಯ ವ್ಯಕ್ತಿ ನಮಗೆ ಸ್ನೇಹಿತನಾಗಿರುವುದು ನಮ್ಮ ಪುಣ್ಯ ಎಂದರು.
ಪೊಲೀಸ್ ಇಲಾಖೆಯ ರಂಗನಾಥ ಮಾತನಾಡಿ, ಕಾಲೇಜು ದಿನಗಳ ತಮ್ಮ ಒಡನಾಟವನ್ನು ಹಂಚಿಕೊoಡರು.
ಸುನೀತಾ, ಪ್ರಮೀಳಾ, ಜೋನಿಗರಹಳ್ಳಿ ರಂಗನಾಥ ಅವರು ತಮ್ಮ ಸ್ನೇಹದ ಸಂತಸದ ಕಷ್ಟದ ಕ್ಷಣಗಳೆರಡನ್ನು ಹಂಚಿಕೊಂಡರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಟಿ.ಎಸ್.ಕೃಷ್ಣಮೂರ್ತಿ ಬಂಧು-ಬಳಗಕ್ಕಿoತ ಮಿಗಿಲಾದ ಸ್ನೇಹಿತರು ಸಿಕ್ಕಿರುವುದು ನನ್ನ ಪಾಲಿಗೆ ಒಂದು ವರ.ಕಷ್ಟ ಕಾಲದಲ್ಲೂ ನನ್ನ ಜೊತೆ ನಿಂತು ಇಂದು ನನ್ನ ಏಳ್ಗೆಯನ್ನು ಕಂಡು ಸಂತೋಷಪಡುವ ಇಂತಹ ಸ್ನೇಹಿತರು ಎಲ್ಲರಿಗೂ ಸಿಗುವಂತಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಟಿ.ಶಿವಕುಮಾರ, ಉಮಾದೇವಿ, ಸೌಭಾಗ್ಯ, ಪೂರ್ಣಿಮಾ, ರಾಜೇಶ್ವರಿ, ಉಮೇಶ್, ನಾಗೇಂದ್ರ, ರಂಗನಾಥ ಜೋನಿಗರಹಳ್ಳಿ, ಅಂಜನ್ ಇನ್ನೂ ಹಲವರು ಭಾಗವಹಿಸಿದ್ದರು.