ಚಿಕ್ಕಮಗಳೂರು-ರಾಜ್ಯದ ರೈತಾಪಿ ವರ್ಗಕ್ಕೆ ಕಂಟಕಪ್ರಾಯವಾಗಿರುವ ಸಚಿವ ಜಮೀರ್ ಅಹ್ಮದ್ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಬಿಜೆಪಿ ನ.ರಾ.ಪುರ ಮಂ ಲಡದ ಪ್ರಧಾನ ಕಾರ್ಯದರ್ಶಿ ವಿನೋದ್ ಬೊಗಸೆ ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು,ಪೂರ್ವಿಕರ ಕಾಲದಿಂದ ಸಾಗುವಳಿ ಮಾಡಿಕೊಂಡಿರುವ ರೈತರ ಜಮೀನನ್ನು ವಕ್ಫ್ ಆಸ್ತಿ ಎಂದು ಮೌಖಿಕ ಆದೇಶ ನೀಡಿರುವ ಜಮೀರ್ ಅಹ್ಮದ್ ಸಚಿವರಾಗಿ ಮುಂದುವರೆಯುವ ನೈತಿಕ ಹಕ್ಕನ್ನು ಕಳೆದು ಕೊಂಡಿದ್ದು, ಸರ್ಕಾರ ಕೂಡಲೇ ಅವರ ರಾಜೀನಾಮೆ ಪಡೆದು ಅನ್ನದಾತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಹೇಳಿದ್ದಾರೆ.
ಧಾರವಾಡ, ವಿಜಯಪುರ ಹಾವೇರಿ ಸೇರಿದಂತೆ ಇದೀಗ ಚಿಕ್ಕಮಗಳೂರು ವಕ್ಫ್ ಬೋರ್ಡ್, ಜಾಮೀಯಾ ಮಸೀದಿ ಅಧ್ಯಕ್ಷರು ಹಲವಾರು ಜಾಗಗಳನ್ನು ವಕ್ಫ್ ಮಂಡಳಿಗೆ ಸಂಬoಧಿಸಿದ್ದು ಎಂದು ಹೇಳಿರುವುದು ಬಹಳಷ್ಟು ಜನರನ್ನು ಚಿಂತೆಗೀಡಾಗುವಂತೆ ಮಾಡಿದೆ.
ಭಾರತೀಯ ಕಾನೂನು ಮತ್ತು ಸಂವಿಧಾನ ಕಾಂಗ್ರೆಸ್ ಪಕ್ಷದ ಆಸ್ತಿ ಎಂಬ ಭ್ರಮೆಯಲ್ಲಿ ಜಮೀರ್ ಅಹ್ಮದ್ ಇದ್ದಂತೆ ಕಾಣುತ್ತಿದೆ.ನೈಜವಾಗಿ ಕಾಂಗ್ರೆಸ್ ಪಕ್ಷಕ್ಕೆ ರೈತರ ಬಗ್ಗೆ ಕೊಂಚವು ಕಾಳಜಿಯಿಲ್ಲ.
ಈ ನಡುವೆ ವಕ್ಫ್ ಸಂಸ್ಥೆ ಬೆಳವಣಿಗೆ ಹೊಂದಬೇಕು ಹಾಗೂ ಸಮಾಜದಲ್ಲಿ ಬಲಿಷ್ಟಗೊಳ್ಳಬೇಕು ಎಂಬ ದೃಷ್ಟಿಯಿಂದ ರೈತರ ಜಮೀನು, ಮಠ-ಮಂದಿರ, ಸರ್ಕಾರಿ ಕಟ್ಟಡಗಳು, ಶಾಲೆಗಳು, ಆಟದ ಮೈದಾನವನ್ನು ವಕ್ಫ್ ಆಸ್ತಿಯೆಂದು ಪರಿಗಣಿಸುತ್ತಿರುವುದು ನಾಚಿಕೇಡಿತನ ಸಂಗತಿ ಎಂದು ಕಿಡಿಕಾರಿದ್ದಾರೆ.
ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರ ವಿಡಿಯೋ ತುಣುಕಿಗೆ ಉತ್ತರ ನೀಡಿ ಸಚಿವರ ರಾಜೀನಾಮೆ ಪಡೆಯಬೇಕು ಮತ್ತು ರಾಜ್ಯದಲ್ಲಿ ವಕ್ಫ್ ಸಂಸ್ಥೆ ರದ್ದುಗೊಳಿಸಬೇಕು ಎಂದು ವಿನೋದ್ ಬೊಗಸೆ ಆಗ್ರಹ ಮಾಡಿದ್ದಾರೆ.