ಕೆ.ಆರ್.ಪೇಟೆ-ರೋಟರಿ ಕ್ಲಬ್ ಅಧ್ಯಕ್ಷರಾಗಿ ಆರ್.ಟಿ.ಓ ಮಲ್ಲಿಕಾರ್ಜುನ್ -ನ.15ರಂದು ಪದಗ್ರಹಣ:ಪೂರ್ವಭಾವಿ ಸಭೆ

ಕೆ.ಆರ್.ಪೇಟೆ-ಇದೇ ನವಂಬರ್ 15ರ ಶುಕ್ರವಾರ ಪಟ್ಟಣದ ಜಯನಗರ ಬಡಾವಣೆಯಲ್ಲಿ ಕೆ.ಆರ್.ಪೇಟೆ ತಾಲ್ಲೂಕು ರೋಟರಿ ಕ್ಲಬ್‌ನ ನೂತನ ಘಟಕ ಅಸ್ತಿತ್ವಕ್ಕೆ ಬರಲಿದೆ.ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ಕಾರ್ಯಾಲಯದಲ್ಲಿ ನಡೆದ ರೋಟರಿ ಕ್ಲಬ್ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ನೂತನ ರೋಟರಿ ಕ್ಲಬ್ ಆರಂಭದ ಬಗ್ಗೆ ತೀರ್ಮಾನಿಸಲಾಯಿತು.

ರೋಟರಿ ಕ್ಲಬ್ ಸೇವಾ ವಿಸ್ತರಣಾ ಘಟಕದ ಮುಖ್ಯಸ್ಥ ಬೆಂಗಳೂರಿನ ತಿರುಮುರುಗನ್ ಮಾತನಾಡಿ, ಜಗತ್ತಿನಲ್ಲಿ ರೋಟರಿ ಸಂಸ್ಥೆಯ ಸೇವಾ ಕಾರ್ಯಗಳನ್ನು ವಿವರಿಸಿದರು.

ಕೆ.ಆರ್.ಪೇಟೆ ಪಟ್ಟಣದಲ್ಲಿ ರೋಟರಿ ಕ್ಲಬ್ ಆಫ್ ಕೆ.ಆರ್.ಪೇಟೆ ಈ ಹಿಂದೆ ಆರಂಭಗೊoಡಿತ್ತಾದರೂ ಕಾರಣಾಂತರಿoದ ಅದು ತನ್ನ ಚಟುವಟಿಕೆ ಮೊಟಕುಗೊಳಿಸಿತ್ತು. ಇದೀಗ ರಾಜ್ಯ ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್ ಸಾರಥ್ಯದಲ್ಲಿ ಪಟ್ಟಣದಲ್ಲಿ ರೋಟರಿ ಸಂಸ್ಥೆ ತನ್ನ ಸೇವಾ ಕಾರ್ಯ ಮರು ಮುಂದುವರಿಸಲು ಸಿದ್ಧವಾಗಿದೆ.

ನೂತನ ಪದಾಧಿಕಾರಿಗಳು

ರೋಟರಿ ಕ್ಲಬ್ ಆಫ್ ಕೆ.ಆರ್.ಪೇಟೆ ಘಟಕದ ನೂತನ ಅಧ್ಯಕ್ಷರಾಗಿ ಆರ್.ಟಿ.ಓ ಮಲ್ಲಿಕಾರ್ಜುನ್, ಕಾರ್ಯದರ್ಶಿಯಾಗಿ ರಂಗನಾಥ್, ಖಜಾಂಚಿಯಾಗಿ ಕೆ.ಎಂ.ಪ್ರಸನ್ನ ಕುಮಾರ್, ಕ್ಲಬ್ ಸೇವಾ ನಿರ್ದೇಕರುಗಳಾಗಿ ಆರ್.ವಾಸು, ಜಯಕೀರ್ತಿ, ಕೆ.ಆರ್.ನೀಲಕಂಠ, ರಂಗಸ್ವಾಮಿ, ಕೆ.ಆರ್.ಯೋಗೇಶ್, ಜಿ.ಎಸ್.ಮಂಜು, ಎಂ.ಎಸ್.ಮಹೇಶ್ ಕುಮಾರ್, ಬಿ.ಎನ್.ಸುಕನ್ಯಾ, ಎಂ.ಕೆ.ಹರಿಚರಣತಿಲಕ್, ಅಲ್ಲಮಪ್ರಭು, ಜಿ.ಕೆ.ಮಹೇಶ್ ಅವರನ್ನು ಆಯ್ಕೆ ಮಾಡಲಾಯಿತು.

ಕೋಲಾರ ರೋಟರಿ ಕ್ಲಬ್ ಅಧ್ಯಕ್ಷ ರಾಮಕೃಷ್ಣ, ಬೆಂಗಳೂರು ರೋಟರಿ ಕ್ಲಬ್ ಅನುಷ್ಟಾನ ಸಮಿತಿಯ ನರ್ಮದಾ, ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್, ಅಕ್ಕಿಹೆಬ್ಬಾಳು ಆರ್.ವಾಸು, ಯಗಚಗುಪ್ಪೆ ಬಸವರಾಜು, ಬಳ್ಳೇಕೆರೆ ಮಂಜುನಾಥ್, ಅಕ್ಕಿಹೆಬ್ಬಾಳು ಮಹೇಶ್‌ನಾಯಕ್, ನಾಟನಹಳ್ಳಿ ಸಾಗರ್, ಪುರುಷೋತ್ತಮ್, ಶಿಕ್ಷಕರಾದ ಭೈರಯ್ಯ, ರಂಗಸ್ವಾಮಿ, ಜಿ.ಎಸ್.ಮಂಜು, ಯೋಗಗುರು ಅಲ್ಲಮಪ್ರಭು, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ಗ್ರಾ.ಪಂ.ಸದಸ್ಯ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್ ಸೇರಿದಂತೆ ಹಲವರು ಪೂರ್ವಬಾವಿ ಸಭೆಯಲ್ಲಿದ್ದರು.

——————–ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?