ಆಲೂರು-ನೀವೃತ್ತ ನೌಕರರ ಬೇಡಿಕೆಗಳ ಈಡೇರಿಕೆಗೆ ಆಗ್ರಹ-ಇಲ್ಲವಾದಲ್ಲಿ ಪ್ರತಿಭಟನೆ ಅನಿವಾರ್ಯವೆಂದ ಅಧ್ಯಕ್ಷ ಸಿ.ಎಚ್ ರಾಮಚಂದ್ರ

ಆಲೂರು-80 ವರ್ಷ ಮೇಲ್ಪಟ್ಟ ನಿವೃತ್ತ ನೌಕರರಿಗೆ ಮೆದುಮೇಹ ಮತ್ತು ರಕ್ತದೊತ್ತಡ ಪರೀಕ್ಷೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು.ಆದರೆ ಈ ಬಾರಿ ವಿಶೇಷವಾಗಿ ಕೆಲವು ನಿವೃತ್ತ ನೌಕರರನ್ನು ಗುರುತಿಸಿ ಅವರನ್ನ ಗೌರವಿಸಬೇಕು ಎನ್ನುವ ಪದಾಧಿಕಾರಿಗಳ ತೀರ್ಮಾನದಂತೆ ಈ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾ ಗಿದೆಯೆಂದು ಆಲೂರು ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಚ್ ರಾಮಚಂದ್ರ ತಿಳಿಸಿದರು.

ಅವರು ಪಟ್ಟಣದ ಕ.ಸಾ.ಪ ಭವನದಲ್ಲಿ ನಡೆದ ನೀವೃತ್ತ ನೌಕರರ ಸನ್ಮಾನ ಸಭೆಯಲ್ಲಿ ಅಧ್ಯಕ್ಷೀಯ ಭಾಷಣ ಮಾಡುತ್ತ ಈ ಮಾಹಿತಿ ನೀಡಿದರು.

ನಿವೃತ್ತ ನೌಕರರ ಹಾಗೂ ಕುಟುಂಬಗಳಿಗೆ ಹಲವು ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿತ್ತು.ಆದರೆ ಇದುವರೆಗೂ ಅವನ್ನು ಈಡೇರಿಸುವ ಬಗ್ಗೆ ಸರಕಾರ ಕ್ರಮ ಕೈಗೊಂಡಿಲ್ಲ.ನೀವೃತ್ತ ನೌಕರರು ತಮ್ಮ ನೀವೃತ್ತಿ ಜೀವನವನ್ನು ನೆಮ್ಮದಿಯಿಂದ ಕಳೆಯುವಂತೆ ನೋಡಿಕೊಳ್ಳುವುದು ಅವರನ್ನು ದುಡಿಸಿಕೊಂಡ ಸರಕಾರಗಳ ಕರ್ತವ್ಯವಾಗಿರುತ್ತದೆ.ಆದಷ್ಟು ಶೀಘ್ರ ಸರಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದರು.

ಸರ್ಕಾರಿ ನಿವೃತ್ತ ನೌಕರರ ರಾಜ್ಯ ಪರಿಷತ್ ಸದಸ್ಯ ಹರಿಂದ್ರ ಮಾತನಾಡಿ, ಸರ್ಕಾರದ ವಿವಿಧ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ನಮಗೆ ವೈದ್ಯಕೀಯ ಸೇವೆ ಸೇರಿದಂತೆ ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯಲಾಗಿದೆ. ಆದರೆ ಇದುವರೆಗೂ ನಮ್ಮ ಯಾವ ಬೇಡಿಕೆಗಳು ಈಡೇರಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸಭೆ ಸೇರಿ ತಮ್ಮ ಹಕ್ಕು ಪಡೆಯಲು ಹೋರಾಟ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಹತ್ತಕ್ಕೂ ಹೆಚ್ಚು ನಿವೃತ್ತ ನೌಕರರಿಗೆ ಶಾಲು ಹೊದಿಸಿ ಹಾರ ಹಾಕಿ ಗೌರವಿಸಲಾಯಿತು.

ನಿವೃತ್ತ ನೌಕರರಾದ ಎ.ಟಿ.ಮಂಜುನಾಥ್, ಕೃಷ್ಣೇಗೌಡ, ಕೆ.ಸಿ.ರಾಜಯ್ಯ, ಹಾನಬಾಳ್ ಸಂತೋಷ, ಶಂಕ್ರಮ್ಮ,ರುದ್ರೇಗೌಡ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

—————-ಧರ್ಶನ ಕೆರೇಹಳ್ಳಿ

Leave a Reply

Your email address will not be published. Required fields are marked *

× How can I help you?