ಬೇಲೂರು-ಗೆಂಡೇಹಳ್ಳಿ ಭಾಗದಲ್ಲಿ ಬಂದು ಸೇರಿರುವ ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೆಂಡೇಹಳ್ಳಿ ಕಾಫೀ ಬೆಳೆಗಾರರ ಸಂಘ ಆಗ್ರಹಿಸಿದೆ.
ಈ ಸಂಬಂಧ ಕಳ್ಳೇರಿ ಗ್ರಾಮಪಂಚಾಯತಿ ಪಿ.ಡಿ.ಒ ಹಾಗು ಚುನಾಯಿತ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಿರುವ ಸಂಘ,ಶನಿವಾರ ಸಂತೆಯ ಮಸೀದಿ ಬೀದಿ,ಬಳಗುಪ್ಪೆ ಹಾಗು ಬಿರಣಗೋಡುಗಳಲ್ಲಿ ಅಕ್ರಮವಾಗಿ ಅಸ್ಸಾಂ ಮೂಲದವರೆಂದು ಹೇಳಿಕೊಂಡು ಬಹಳಷ್ಟು ಜನ ಪರಭಾಷಿಕರು ಬಾಡಿಗೆಗೆ ಮನೆಗಳನ್ನು ಪಡೆದು ವಾಸಮಾಡುತ್ತಿದ್ದಾರೆ.ಇವರ ಬಳಿ ಆಧಾರ್ ಕಾರ್ಡ್ ಇತ್ಯಾದಿ ಯಾವುದೇ ದಾಖಲೆಗಳು ಇಲ್ಲದಿದ್ದರೂ ಸಹ ತಮ್ಮನ್ನು ಅಸ್ಸಾಂ ಮೂಲದವರು ಎಂದು ಸುಳ್ಳು ಹೇಳಿಕೊಂಡು ಇಲ್ಲಿ ಜೀವನ ನಡೆಸುತ್ತಿದ್ದು ಇವರ ದಾಖಲೆಗಳ ಪರಿಶೀಲನೆ ನಡೆಸಿ ಕ್ರಮ ಗೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಈ ವಲಸಿಗರಿಗೆ ಇತ್ಯಾದಿ ಕಾರಣಕ್ಕೆ ಸ್ಥಳೀಯರು ಬೆಂಬಲ ನೀಡುತ್ತಿದ್ದು,ಗಾಂಜಾ ಅಫೀಮಿನಂತಹ ಸೇವನೆಗಳಲ್ಲಿ ಇವರು ತೊಡಗಿದ್ದಾರೆ ಎಂಬ ಅನುಮಾನಗಳಿದ್ದು ಯಾವುದಾದರು ಘನಘೋರ ಘಟನೆಗಳು ನಡೆಯುವ ಮುನ್ನ ಇವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.
ಕಾಫೀ ತೋಟಗಳಲ್ಲಿ ಕೂಲಿಗಾಗಿ ತೆರಳುವ ಅಕ್ರಮ ವಲಸಿಗರು ಸ್ಥಳೀಯ ಕಾರ್ಮಿಕರನ್ನು ತೋಟದ ಮಾಲೀಕರ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದು ನಿಗದಿಗಿಂತ ಜಾಸ್ತಿ ಕೂಲಿಯನ್ನು ಕೇಳುವಂತೆ ತಲೆಕೆಡಿಸುತ್ತಿದ್ದಾರೆಂದೂ ಆರೋಪಿಸಲಾಗಿದೆ.ಆದಷ್ಟು ಶೀಘ್ರ ಅಕ್ರಮ ವಲಸಿಗರನ್ನು ಯಾವುದೇ ಒತ್ತಡಕ್ಕೂ ಮಣಿಯದೆ ಇಲ್ಲಿಂದ ಹೊರ ಹಾಕುವಂತೆ ಕೋರಲಾಗಿದೆ.
ಈ ಭಾಗದಲ್ಲಿ ಬಹುತೇಕ ಕಡೆಗಳಲ್ಲಿ ಒಂಟಿ ಮನೆಗಳಿವೆ.ಯಾವುದೇ ದಾಖಲಾತಿಗಳಿಲ್ಲದ ಅಕ್ರಮ ವಲಸಿಗರು ಹಣಕ್ಕಾಗಿ ಏನಾದರು ಅನಾಹುತಗಳನ್ನು ಮಾಡಿದರೆ ಯಾರು ಹೊಣೆ.ರಾಜ್ಯದ ಹಲವೆಡೆ ಇವರಿಂದ ನಡೆಯುವ ದುಷ್ಕ್ರತ್ಯಗಳು ದಿನವೂ ವರದಿಯಾಗುತ್ತವೆ.
ಗಾಂಜಾ ಇತ್ಯಾದಿ ಅತ್ಯಂತ ಅಮಲು ಪದಾರ್ಥಗಳನ್ನು ಸೇವಿಸಿ ಲೋಕದ ಪರಿವೆ ಇಲ್ಲದಂತೆ ಬದುಕುವ ಇವರ ಕಾರಣಕ್ಕೆ ಸ್ಥಳೀಯರು ಭಯಭೀತರಾಗಿದ್ದು ಗ್ರಾಮ ಪಂಚಾಯತಿ ಆದಷ್ಟು ಶೀಘ್ರ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು.ಇಲ್ಲದೆ ಹೋದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ.
—————–-ರತನ್-
ಅಧ್ಯಕ್ಷರು ಗೆಂಡೇಹಳ್ಳಿ ಕಾಫೀ ಬೆಳೆಗಾರರ ಸಂಘ
—————-ನೂರ್ ಅಹಮ್ಮದ್