ಮಂಡ್ಯ-ನಗರದ ಪತ್ರಿಕಾ ಭವನದಲ್ಲಿ ವೈಸಿಡಬ್ಲ್ಯೂ ಬಿಗ್ ಮಾರ್ಟ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಡಾ.ಶಂಕರೇಗೌಡ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು,ನಾವು ಮಾತನಾಡುವ ಭಾಷೆಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು.ಪ್ರತಿಯೊಬ್ಬ ಮನುಷ್ಯ ಇಲ್ಲಿ ಕನ್ನಡವನ್ನು ಕಲಿಯಬೇಕು.ಅರ್ಥವಾಗದ ಭಾಷೆಯಲ್ಲಿ ವ್ಯವಹಾರ ಮಾಡುವುದರಿಂದ ವ್ಯಾಪಾರ ವಹಿವಾಟು ಕಷ್ಟವಾಗುತ್ತದೆ ಎಂದರು.
ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹೆಚ್.ಕೆ.ರಾಮು ಮಾತನಾಡಿ,ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಯಾವುದಾದರೂ ಭಾಷೆ ಇದ್ದರೆ ಅದು ಕನ್ನಡ ಭಾಷೆ,ಕುವೆಂಪು ಅವರ ಆದರ್ಶದಂತೆ ನಮ್ಮ ಕನ್ನಡ ಭಾಷೆಯನ್ನು ಇನ್ನಷ್ಟು ಗಟ್ಟಿಗೊಳಿಸಿ ಎಲ್ಲಾ ಭಾಗದಲ್ಲೂ ಸಹ ನಮ್ಮ ಮಾತೃಭಾಷೆ ಕನ್ನಡವನ್ನ ಬಳಸುವಂತಹ ಶಕ್ತಿ ಮೈಗೂಡಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಗಣ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ.ಪ್ರಶಾಂತ್ , ವಕೀಲರಾದ ಜೆ.ರಾಮಯ್ಯ , ವೈಸಿಡಬ್ಲ್ಯೂ ಬಿಗ್ ಮಾರ್ಟ್ ನಿರ್ದೇಶಕರುಗಳಾದ ರಮೇಶ್ ಜೆ ಗೌಡ , ಪುಟ್ಟರಾಜು ಇದ್ದರು.