ಹೊಳೆನರಸೀಪುರ:ಪಟ್ಟಣದ ಹೇಮಾವತಿ ನದಿದಡದಲ್ಲಿ ಸುಮಾರು 2.5 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲು, ಪಂಚಲೋಹದ ಅಯ್ಯಪ್ಪ ಸ್ವಾಮಿ ವಿಗ್ರಹವನ್ನು ಇಂದು ತರಲಾಯಿತು.
ಕೇರಳದ ಕೊಚಿನ್ ಜಿಲ್ಲೆಯ ಚಂಗನೂರಿನಲ್ಲಿ ಅಚ್ಚುಹಾಕಿಸಿರುವ ಈ ವಿಗ್ರಹವನ್ನು ಬೆಂಗಳೂರಿನ ಗುರುಸ್ವಾಮಿ ನಟರಾಜ್ ಅವರ ನೇತೃತ್ವದಲ್ಲಿ,ಗುರುಸ್ವಾಮಿ ವಿ.ಆರ್.ಮಣಿಸ್ವಾಮಿ ಅವರ ಜೊತೆಯಲ್ಲಿ ಬುಧವಾರ ಬೆಳಿಗ್ಗೆ ದೇವಾಲಯಕ್ಕೆ ತಂದರು.
ಧರ್ಮಶಾಸ್ತ ಅಯ್ಯಪ್ಪಸ್ವಾಮಿ ಚಾರಿಟಬಲ್ ಟ್ರಸ್ಟಿನ ಸದಸ್ಯರು ಹಾಗೂ ನೂರಾರು ಅಯ್ಯಪ್ಪಸ್ವಾಮಿ ಭಕ್ತರು ಹಾಗು ಮಹಿಳೆಯರು ಅಯ್ಯಪ್ಪನ ವಿಗ್ರಹವನ್ನು ಪುಫ್ಫಾಲಂಕೃತವಾಹನದಲ್ಲಿ ಕೂರಿಸಿ ಮಂಗಳವಾಧ್ಯ ಹಾಗೂ ಪೂರ್ಣಕುಂಭಸ್ವಾಗತ ನೀಡಿದರು.
ನಂತರ ಅಯ್ಯಪ್ಪನ ವಿಗ್ರಹಕ್ಕೆ ಹೇಮಾವತಿ ನದಿದಡದಲ್ಲಿ ತುಪ್ಪ, ಜೇನು, ಪನ್ನೀರು, ಎಳನೀರು, ಹಾಲು ಹಾಗೂ ಬಸ್ಮದ ಅಬೀಷೇಕ ನೆರವೇರಿಸಿ,ಹೇಮಾವತಿ ನದಿಯಲ್ಲಿ ವಿಗ್ರಹತೊಳೆದು ದೇವಾಲಯ ಆವರಣಕ್ಕೆ ತಂದು 20 ಕ್ಕೂ ಹೆಚ್ಚುಬಗೆಯ ಹೂವುಗಳಿಂದ ಅಲಂಕಾರ ಮಾಡಲಾಯಿತು.
ಕೇರಳದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ 30 ಕ್ಕೂ ಹೆಚ್ಚುವರ್ಷಗಳ ಕಾಲ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ವಿ.ಆರ್. ಮಣಿಸ್ವಾಮಿ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಿ ನಂತರ ಅಯ್ಯಪ್ಪ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು.
ಪುರಸಭಾಧ್ಯಕ್ಷ ಕೆ. ಶ್ರೀಧರ್, ಧರ್ಮಶಾಸ್ತ ಅಯ್ಯಪ್ಪಸ್ವಾಮಿ ಚಾರಿಟಬಲ್ ಟ್ರಸ್ಟಿನ ಅಧ್ಯಕ್ಷ ಟಿ. ಶಿವಕುಮಾರ್, ಕಾರ್ಯಧರ್ಶಿ ಸುರೇಶ ಕುಮಾರ್ . ಖಜಾಂಚಿ ಎಚ್.ಎಸ್. ಸುದರ್ಶನ್, ಕೆ.ಆರ್. ಸುದರ್ಶನ್ ಬಾಬು, ಎ.ಆರ್. ರವಿಕುಮಾರ್, ಟ್ರಸ್ಟಿನ ಗುರುಸ್ವಾಮಿಗಳಾದ ಮಹದೇವ್, ಡೈರಿ ಸುರೇಶ್, ರಾಘು, ಕುಮಾರ್, ಎಚ್.ಬಿ. ಈಶ್ವರ್ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಯ್ಯಪ್ಪಸ್ವಾಮಿ ಚಾರಿಟಬಲ್ ಟ್ರಸ್ಟಿನ ಸದಸ್ಯರು ಬೆಂಗಳೂರಿನ ಗುರುಸ್ವಾಮಿ ನಟರಾಜ್ ಮತ್ತು ತಂಡದವರನ್ನು ಸನ್ಮಾನಿಸಿದರು.
ಮುಂದಿನ ವರ್ಷದ ಅಥವಾ ಏಪ್ರಿಲ್ ನಲ್ಲಿ ಲ್ಲಿ ನೂತನ ದೇವಾಲಯದಲ್ಲಿ ಅಯ್ಯಪ್ಪಸ್ವಾಮಿಯನ್ನು ಪ್ರತಿಷ್ಠಾಪಿಸಲು ಉದ್ದೇಶಿಸಲಾಗಿದೆ ಎಂದು ಟ್ರಸ್ಟಿನ ಅಧ್ಯಕ್ಷ ಟಿ. ಶಿವಕುಮಾರ್ ತಿಳಿಸಿದರು.
—————-ವಸಂತ್ ಕುಮಾರ್