ಹೊಳೆನರಸೀಪುರ-ವಕ್ಫ್ ಬೋರ್ಡ್ ವಿರುದ್ಧ ಬೀದಿಗಿಳಿದ ಬಿ.ಜೆ.ಪಿ-ರೈತ ಸಂಘ-ಮುಸ್ಲಿಂ ಓಲೈಕೆ ಬಿಡಿ ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ

ಹೊಳೆನರಸೀಪುರ-ಕರ್ನಾಟಕದ ರೈತರ ಜಮೀನು,ಮಠ,ಮಂದಿರಗಳ ಆಸ್ತಿಯನ್ನು ವಕ್ಫ್ ಬೋರ್ಡ್ ಗೆ ನೀಡಿ ಕರ್ನಾಟಕವನ್ನು ಮುಸ್ಲಿಂ ರಾಜ್ಯವನ್ನಾಗಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹಮದ್ ಅವರು ಮುಂದಾಗಿದ್ದಾರೆ ಎಂದು ಬಿ.ಜೆ.ಪಿ ಜಿಲ್ಲಾ ಮುಖಂಡ ಅಮಿತ್ ಆರೋಪ ಮಾಡಿದರು.

ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಸಮೀಪ ಸಂಘಟಿತರಾದ ಬಿ.ಜೆ.ಪಿ ಹಾಗೂ ರೈತ ಸಂಘದ ಕಾರ್ಯಕರ್ತರು ಎತ್ತಿನ ಗಾಡಿ ಹಾಗೂ ಟ್ರಾಕ್ಟರ್ ಗಳ ಜೊತೆಯಲ್ಲಿ ಗಾಂಧೀ ವೃತ್ತಕ್ಕೆ ಬಂದು ವಕ್ಫ್ ಬೋರ್ಡ್ ಹಾಗು ರಾಜ್ಯಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಈಗಾಗಲೇ ರಾಜ್ಯದ ಅನೇಕ ಜಿಲ್ಲೆಗಳ ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಾಗಿದೆ.ಇದನ್ನು ಖಂಡಿಸಿ ಬಿ.ಜೆ.ಪಿ ರಾಜ್ಯಾಧ್ಯಂತ ಹೋರಾಟ ನಡೆಸುತ್ತಿದೆ.ನಮ್ಮ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಿ ರೈತರ, ಮಠ,ಮಂದಿರಗಳ ಆಸ್ತಿಯನ್ನು ಅವರವರಿಗೇ ಉಳಿಸಲು ಸಹಕರಿಸಿ ಎಂದು ಅಮಿತ್ ಮನವಿ ಮಾಡಿದರು.

ಸಿದ್ದರಾಮಯ್ಯ ತಮ್ಮ ಕುರ್ಚಿಯನ್ನು ಭದ್ರ ಪಡಿಸಿಕೊಳ್ಳಲು ಮುಸ್ಲಿಂ ಸಮುದಾಯದ ಓಲೈಕೆಗೆ ರೈತರ ಆಸ್ತಿ ಗಳನ್ನು ವಕ್ಫ್ ಬೋರ್ಡ್ ಗೆ ನೀಡುತ್ತಿದ್ದಾರೆ. ಅವರ ಆ ಕನಸ್ಸು ಎಂದಿಗೂ ಈಡೇರಲು ಸಾಧ್ಯವೇ ಇಲ್ಲ.ರೈತರು ತಮ್ಮ ಜಮೀನು ಉಳಿಸಿಕೊಳ್ಳಲು ಯಾವುದೇ ತ್ಯಾಗಕ್ಕೂ ಸಿದ್ದರಾಗುತ್ತಾರೆ.ರಾಜ್ಯದಲ್ಲಿ ರೈತರು, ಹಿಂದುಗಳು ರೊಚ್ಚಿಗೇಳುವ ಮುನ್ನ ಪಹಣಿಯಲ್ಲಿನ ವಕ್ಫ್ ಬೋರ್ಡ್ ಎಂಬ ಪದವನ್ನು ತೆಗೆಸಿ ಎಂದು ಗುಡುಗಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಹಿಂದುಗಳು ಆತಂಕದಲ್ಲಿದ್ದಾರೆ. ಈ ಆತಂಕ, ಆಕ್ರೋಷಕ್ಕೆ ಬದಲಾಗುವ ಮುನ್ನ ನಿಮ್ಮ ನಿಲುವನ್ನು ಬದಲಿಸಿ ಎಂದು ಕಾಂಗ್ರೆಸ್ ಸರಕಾರಕ್ಕೆ ಎಚ್ಚರಿಕೆಯನ್ನು ಕೊಟ್ಟರು.

ಗಾಂಧೀವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ,ತಹಶೀಲ್ದಾರ್ ಕೆಚೇರಿಗೆ ತೆರಳಿ ಮನವಿ ಸಲ್ಲಿಸಿಸಲಾಯಿತು.
.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ನಮ್ಮ ತಾಲ್ಲೂಕಿನ ಯಾವುದೇ ಪಹಣಿಯಲ್ಲಿ ಏನೂ ವ್ಯತ್ಯಾಸ ಆಗಿಲ್ಲ. ಮುಂದೇನಾದವರು ಬದಲಾವಣೆ ಆಗಬೇಕು ಎಂಬ ಸೂಚನೆ ಬಂದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದರು.

ಶ್ರೀ ಪತಿ, ಮೈಲಾರಯ್ಯ, ಯೋಗಾನರಸಿಂಹ, ಸುರೇಶ್ ಬಾಬು, ದೀಪು, ಹೇಮಂತ್, ಮೋಹನ್, ಅನೂಪ್, ಪ್ರಜ್ವಲ್, ಕುಮಾರ್, ರಮಾ, ನಾಗಮ್ಮ. ಸೌಮ್ಯ, ಬೀಚೇನಹಳ್ಳಿ ಚಂದ್ರಶೇಖರ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

—————-ವಸಂತ್ ಕುಮಾರ್

Leave a Reply

Your email address will not be published. Required fields are marked *

× How can I help you?