ಚಿಕ್ಕಮಗಳೂರು-ಜಿಲ್ಲೆಯ ಸಹಕಾರ ಸಂಘಗಳ ನೌಕರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಕಾರ ಸಂಘವನ್ನು ಸ್ಥಾಪಿಸಿ ಅನೇಕ ಸವಲತ್ತುಗಳನ್ನು ಒದಗಿಸಲು ಮುಂದಾಗಿದ್ದೇವೆ ಎಂದು ಡಿಸಿಸಿ ಬ್ಯಾಂಕ್ ಮತ್ತು ಫ್ಯಾಕ್ಸ್ ನೌಕರರ ಸಹಕಾರ ಸಂಘದ ಅಧ್ಯಕ್ಷ ವೆಂಕಟಸುಬ್ಬಯ್ಯ ಹೇಳಿದರು.
ನಗರದ ಹನಮಂತಪ್ಪ ವೃತ್ತದ ಸಮೀಪ ಟಿಎಪಿಸಿಎಂಎಸ್ ಕಟ್ಟಡದ ಮೊದಲ ಮಹಡಿಯಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮತ್ತು ಸಹಕಾರ ಸಂಘಗಳ ನೌಕರರ ಸಹಕಾರ ಸಂಘದ ನೂತನ ಕಚೇರಿಯನ್ನು ಶುಕ್ರವಾರ ಪ್ರಾರಂಭಿಸಿ ಅವರು ಮಾತನಾಡಿದರು.
ಈಗಾಗಲೇ ಸಂಘದಲ್ಲಿ 420ಕ್ಕೂ ಹೆಚ್ಚು ಸದಸ್ಯರ ಬಲವನ್ನು ಹೊಂದಿದ್ದು ಸುಮಾರು ಎಂಟು ಲಕ್ಷ ರೂ.ಗಳ ಷೇರನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಸದಸ್ಯತ್ವ ಅಭಿಯಾನ ಸಂಬoಧ ಜಿಲ್ಲೆಯಾದ್ಯಂತ ಪದಾಧಿಕಾರಿಗಳು ಸಂಚರಿಸಿ ಸಹಕಾರ ಸಂಘದ ನೌಕರರನ್ನು ನೋಂದಾಯಿಸಲಾಗುವುದು ಎಂದರು.
ನೌಕರರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಸಲುವಾಗಿ ಈ ಸಂಘವನ್ನು ಸ್ಥಾಪಿಸಲಾಗಿದೆ. ಮುಂಬರುವ ತಿಂಗಳೊಳಗೆ ಸದಸ್ಯರುಗಳಿಂದ ಠೇವಣಿ ಸಂಗ್ರಹಿಸಿ, ಸದಸ್ಯರುಗಳಿಗೆ ಸಾಲಸೌಲಭ್ಯವನ್ನು ವಿತರಿಸಲಾಗುವುದು.ಜೊತೆಗೆ ನೌಕರರ ಕ್ಷೇಮಾಭಿವೃದ್ದಿಗೆ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ವಿ.ಮನೋಹರ್, ಟಿ.ಜಿ.ಮಹಾದೇವಪ್ಪ, ನಿರ್ದೇಶಕರು ಗಳಾದ ನಾಗರಾಜ್, ಎಸ್.ಎಂ.ಬಸವರಾಜ್, ಡಿ.ಕಾಟೇಗೌಡ, ಬಿ.ಎನ್.ಕುಟ್ಟಪ್ಪ, ಹೆಚ್.ಎ.ಗಜೇಂದ್ರ, ಹೆಚ್. ಡಿ.ರಮೇಶ್, ಅನಿಲ್‌ಕುಮಾರ್, ಪ್ರಶಾಂತ್, ಗಂಗಾಧರ್ ನಾಯ್ಕ್, ಮೋಹನ್, ರವಿಚಂದ್ರ, ತ್ರಿವೇಣಿ, ಪೂರ್ಣಿಮಾ, ಅಜಿತ್, ವೃತ್ತಿಪರ ನಿರ್ದೇಶಕ ಡಿ.ಪಿ.ಲೋಕೇಗೌಡ ಉಪಸ್ಥಿತರಿದ್ದರು.
————--ಸುರೇಶ್