ಮೂಡಿಗೆರೆ;ಅನಾಥರಾಗಿ ಪಟ್ಟಣದಲ್ಲಿ ತಿರುಗುತ್ತ ಭಿಕ್ಷೆ ಬೇಡಿ ಬದುಕುತಿದ್ದ ಶಿವರಾಜ್ ಎಂಬ ನಿರ್ಗತಿಕ ವ್ಯಕ್ತಿಯೊಬ್ಬರಿಗೆ ಆಟೋಚಾಲಕರು ಆಸರೆಯಾಗಿದ್ದಾರೆ.
ಎಲ್ಲೆಂದರಲ್ಲಿ ಮಲಗುತ್ತಾ,ಜನರು ಕೈಎತ್ತಿಕೊಟ್ಟಿದ್ದರಲ್ಲಿ ಹೊಟ್ಟೆತುಬಿಸಿಕೊಂಡು ಯಾರ ಆಸರೆಯೂ ಇಲ್ಲದೆ ಸಂಕಷ್ಟದಲ್ಲಿ ಬದುಕು ನಡೆಸುತ್ತಿದ್ದ ಶಿವರಾಜ್ ನನ್ನು ಆಟೋ ಚಾಲಕರುಗಳಾದ ಅಣ್ಣು,ಪುಟ್ಟಣ್ಣ,ನಾಗರಾಜ್ ಬೆಟ್ಟಗೆರೆ ಹಾಗು ಮೊಹಮ್ಮದ್ ರವರುಗಳು ತಮ್ಮ ಸ್ವಂತ ಖರ್ಚಿನಲ್ಲಿ ಉಡಲು ಬಟ್ಟೆ ಕೊಡಿಸಿ ಚನ್ನರಾಯಪಟ್ಟಣದ ಮಾತೃಭೂಮಿ ಅನಾಥಾಶ್ರಮಕ್ಕೆ ಸೇರಿಸಿ ಬಂದಿದ್ದಾರೆ.
ಈ ಸಮಯದಲ್ಲಿ ಅನಾಥಾಶ್ರಮಕ್ಕೆ ಅಕ್ಕಿ ಹಾಗು ಬೇಳೆ-ಕಾಳುಗಳನ್ನು ದಾನವಾಗಿ ನೀಡಿದ್ದಾರೆ.ಇವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಶೆ ವ್ಯಕ್ತವಾಗಿದೆ.
——————ನೂರ್ ಅಹಮ್ಮದ್