ಕೆ.ಆರ್.ಪೇಟೆ-ಜಿಲ್ಲೆಯ ಸಾಂಸ್ಕೃತಿಕ ಮತ್ತು ಸಾಹಿತ್ಯ ಪರ ಸಂಘಟನೆಯಾದ ಪ್ರತಿಷ್ಟಿತ ಮಂಡ್ಯ ಕರ್ನಾಟಕ ಸಂಘವು ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಕೆ.ಆರ್.ಪೇಟೆಯ ಇಬ್ಬರು ಪ್ರತಿಭಾನ್ವಿತರು ಆಯ್ಕೆಯಾಗಿದ್ದಾರೆ.
ಕಳೆದ ಮೂರು ದಶಕಗಳಿಂದ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡು ಕತೆ, ಕವಿತೆ. ಪ್ರವಾಸಿ ಲೇಖನ, ಸ್ಥಳ ಮತ್ತು ವ್ಯಕ್ತಿ ಪರಿಚಯದಂತಹ ವೈವಿದ್ಯಮಯ 20ಕ್ಕೂ ಅಧಿಕ ಸೃಜನಶೀಲ ಕೃತಿಗಳನ್ನು ಬರೆಯುವ ಮೂಲಕ ಅಂಕಣಕಾರರಾಗಿಯೂ ಹೆಸರಾಗಿರುವ ತೆಂಡೇಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಾಹಿತಿಗಳಾದ ಬಲ್ಲೇನಹಳ್ಳಿ ಮಂಜುನಾಥ್ ಅವರು ಈ ಬಾರಿಯ ಸಾಹಿತ್ಯ ಕ್ಷೇತ್ರದ ಪ್ರಶಸ್ತಿಗೆ, ಕೊರಟೀಕೆರೆ ಲಕ್ಷ್ಮಮ್ಮ ರಾಮೇಗೌಡ ಸ್ಮಾರಕ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ರಾದ ಪ್ರೊ.ಜಯಪ್ರಕಾಶ್ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
ಕಿಕ್ಕೇರಿಯ ಕೆಪಿಎಸ್ ಶಾಲೆಯ ಸಂಗೀತ ಶಿಕ್ಷಕ,ಕಲಾವಿದ ಶ್ರೀಕಾಂತ್ ಚಿಮ್ಮಲ್ ಅವರ ಸಂಗೀತ ಕ್ಷೇತ್ರದ ಸಾಧನೆ ಗುರುತಿಸಿ ಲಕ್ಷ್ಮಮ್ಮ ಶಿವನಂಜೇಗೌಡ ಸ್ಮಾರಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದಿರುವ ಅವರು,ಪ್ರಶಸ್ತಿ ಪ್ರದಾನ ಸಮಾರಂಭವು ನ.11 ರ ಸೋಮವಾರ ಸಂಜೆ 4ಕ್ಕೆ ಮಂಡ್ಯ ನಗರದ ಪಿಇಎಸ್ ಕಾಲೇಜಿನ ವಿವೇಕಾನಂದ ರಂಗಮಂದಿರದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರತಿಷ್ಠಿತ ಕರ್ನಾಟಕ ಸಂಘದ 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ಸಂಗೀತ ಶಿಕ್ಷಕ ಶ್ರೀಕಾಂತ್ ಚಿಮ್ಮಲ್ ಅವರನ್ನು ಶಾಸಕ ಹೆಚ್.ಟಿ.ಮಂಜು, ರಾಜ್ಯ ಆರ್.ಟಿ.ಓ. ಅಧಿಕಾರಿಗಳ ಸಂಘದ ಅಧ್ಯಕ್ಷ ಆರ್.ಟಿ.ಓ. ಮಲ್ಲಿಕಾರ್ಜುನ್, ಮನ್ ಮುಲ್ ನಿರ್ದೇಶಕ ಡಾಲು ರವಿ, ಸಮಾಜ ಸೇವಕ ವಿಜಯ್ ರಾಮೇಗೌಡ, ಸೇರಿದಂತೆ ತಾಲ್ಲೂಕಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
——————–ಶ್ರೀನಿವಾಸ್ ಕೆ ರ್ ಪೇಟೆ