ತಿಪಟೂರು-ನೆಮ್ಮದಿಯ ಜೀವನ ನಡೆಸಲು ಎಲ್ಲರಿಗೂ ಕಾನೂನು ಅಗತ್ಯ ಎಂದು ತಿಪಟೂರಿನ ಕೆಎಲ್ಎ ಕಾನೂನು ಕಾಲೇಜಿನ ಪ್ರಾಧ್ಯಾಪಕರಾದ ಎಚ್.ಎನ್. ಪ್ರಸನ್ನ ಅವರು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣ ಶಾಸ್ತ್ರ,ರೆಡ್ ರಿಬ್ಬನ್, ಎನ್ಎಸ್ಎಸ್, ಕೌಶಲ್ಯ ಪಥ ಘಟಕ ಮತ್ತು ಕೆಎಲ್ಎ ಕಾನೂನು ಕಾಲೇಜಿನ ವತಿಯಿಂದ ಉಚಿತ ಕಾನೂನು ಅರಿವು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂವಿಧಾನದಲ್ಲಿರುವ ಎಲ್ಲಾ ಕಾನೂನುಗಳನ್ನು ತಿಳಿದುಕೊಳ್ಳಲು ಪ್ರತಿಯೊಬ್ಬರಿಗೂ ಸಾಧ್ಯವಿಲ್ಲ.ಅದರೆ ಪ್ರತಿನಿತ್ಯ ಚಟುವಟಿಕೆಗೆ ಮತ್ತು ವ್ಯವಹಾರಕ್ಕಾಗಿ ಕಾನೂನು ಅರಿವು ಎಲ್ಲರಿಗೂ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.
ಹಣದ ತೊಂದರೆ ಇರುವವರು ಉಚಿತ ಕಾನೂನಿನ ನೆರವನ್ನು ಪಡೆಯಬಹುದು ಎಂದು ಉಚಿತ ಕಾನೂನಿನ ಬಗ್ಗೆ ವಿವರವಾಗಿ ಪ್ರಸನ್ನ ಅವರು ವಿವರವಾಗಿ ಮಾಹಿತಿ ಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಂಶುಪಾಲರಾದ ರಮೇಶ್ ಎಚ್.ಜಿ. ಮಾತನಾಡಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ತಮ್ಮ ಹಕ್ಕುಗಳು ಮತ್ತು ಕಾನೂನು ಅರಿವು ಹೊಂದುವುದು ಅಗತ್ಯ ಎಂದರು.
ಘಟಕದ ಸಂಚಲಕರು ಹಾಗೂ ವಾಣಿಜ್ಯ ಮತ್ತು ನಿರ್ವಹಣ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಪಕರಾದ ನಾಗರಾಜು. ಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಕಾನೂನು ಉಲ್ಲಂಘನೆಯಾದಾಗ ಮತ್ತು ಅಶಾಂತಿ ಉಂಟಾದಾಗ ವಿದ್ಯಾರ್ಥಿಗಳು ಕಾನೂನು ಪಾಲಿಸಿ ಸಾಮಾಜಿಕ ಬದಲಾವಣೆಗೆ ಕಾರಣರಾಗಬೇಕು ಎಂದು ಸಲಹೆ ನೀಡಿದರು.
ಕೌಶಲ್ಯ ಪಥ ಘಟಕದ ಸಂಚಲಕರಾದ ಅನುಪ್ರಸಾದ್. ಕೆ.ಆರ್ ಅವರು ನಿರೂಪಿಸಿದರು,ಪ್ರಾಧ್ಯಪಕರಾದ ಡಾ. ಎಚ್.ಸಿ. ಸರಸ, ಭಾರತಿ. ವೈ.ಕೆ, ವಿರುಪಾಕ್ಷ, ಪುನಿತ್ ಮತ್ತಿತರು
ಉಪಸ್ಥಿತರಿದ್ದರು.