ಮೈಸೂರು-ನಗರದ ಸರಸ್ವತಿಪುರಂನಲ್ಲಿರುವ ಜ್ಞಾನೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದಿದ್ದಾರೆ.
ರಾಜ್ಯ ಮಟ್ಟದ ಕ್ರೀಡಾಕೂಟದ ಚೆಸ್ ಸ್ಪರ್ಧೆಯಲ್ಲಿ ಶರದಿ ಶಾಸ್ತ್ರೀ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಮಟ್ಟಕ್ಕೆ ಆಯ್ಕೆಯಾಗಿದ್ದರೆ,ಬಾಸ್ಕೆಟ್ ಬಾಲ್‌ನಲ್ಲಿ ಶ್ಲೋಕ್ ಸಿ.ಗೌಡ ದ್ವಿತೀಯ ಸ್ಥಾನ, ಕಾರ್ತಿಕ್ ಚೆಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿನಿ ಸ್ಪೂರ್ತಿ ಈಜು ಸ್ಪರ್ಧೆಯಲ್ಲಿ 50 ಮೀಟರ್ ಬ್ಯಾಕ್ ಸ್ಟ್ರೋಕ್, 100 ಮೀಟರ್ ಫ್ರೀ ಸ್ಟೈಲ್,ಬಟರ್ ಫ್ಲೈ ನಲ್ಲಿ ಪ್ರಥಮ ಸ್ಥಾನ, ರಿವರ್ ಮಾನ್ಯ ಎಂ. 50 ಮೀಟರ್ ಪ್ರೀ ಸ್ಟೈಲ್ನಲ್ಲಿ ಪ್ರಥಮ ಸ್ಥಾನ, 100 ಮೀಟರ್ ಬ್ರೆಸ್ಟ್ ಸ್ಟ್ರೋಕ್ ಪ್ರಥಮ,100 ಮೀಟರ್ ಫ್ರೀ ಸ್ಟೈಲ್ ದ್ವಿತೀಯ ಸ್ತನಗಳನ್ನು ಪಡೆದಿದ್ದು, ಕರಾಟೆಯಲ್ಲಿ ಅಜಯ್ ಸಿಲಬಂ ಪ್ರಥಮ, ಧಾರ್ಮಿಕ ಗೌಡ ಟೆನ್ನಿಸ್‌ನಲ್ಲಿ ದ್ವಿತೀಯ, ಕಾರ್ತಿಕ್ ಶೆಟ್ಟಿ ಚೆಸ್‌ನಲ್ಲಿ ತೃತೀಯ, ಜೀವಿತ ಕರಾಟೆಯಲ್ಲಿ ತೃತೀಯ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ದೆಗಳಿಗೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟದ ಸಾಂಸ್ಕೃತಿಕ ಮತ್ತು ಸಹಪಠ್ಯ ಸ್ಪರ್ಧೆಗಳಲ್ಲಿ ಚೈತ್ರಾ ವೈ.ಡಿ. ಕನ್ನಡ ಚರ್ಚಾ ಸ್ಪರ್ಧೆ ಪ್ರಥಮ, ಧೃತಿ ಎಂ. ಇಂಗ್ಲೀಷ್ ಚರ್ಚಾ ಸ್ಪರ್ಧೆ ಪ್ರಥಮ, ವೈಭವಿ ಕೆ. ಭಕ್ತಿಗೀತೆ ಪ್ರಥಮ, ಭಾವಗೀತೆ ದ್ವಿತೀಯ, ಕಿರಣ್‌ಕುಮಾರ್ ಎಸ್. ಮತ್ತು ಮಂಜುನಾಥ್ ಎಚ್.ಆರ್. ರಸಪ್ರಶ್ನೆ ಸ್ಪರ್ಧೆ ದ್ವಿತೀಯ, ಕಾವ್ಯಶ್ರೀ ಇಂಗ್ಲೀಷ್ ಚರ್ಚಾ ಸ್ಪರ್ಧೆ ತೃತೀಯ ಸ್ಥಾನ ಪಡೆದು ಮುಂದಿನ ವಿಭಾಗ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ, ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಆಭಿನಂದನೆ ಸಲ್ಲಿಸಿ ಮುಂದಿನ ಸ್ಪರ್ದೆಗಳಲ್ಲೂ ಜಯಶೀಲರಾಗಿ ಬರುವಂತೆ ಹಾರೈಸಿದ್ದಾರೆ.