ಅರಸೀಕೆರೆ-ಚಂದ್ರಗುಪ್ತ ಮೌರ್ಯ ದ,ಲಿತ ಹೋರಾಟಗಾರರ ಒಕ್ಕೂಟ -ತಾಲೂಕು ಘಟಕ ಅಸ್ತಿತ್ವಕ್ಕೆ-ಅಧ್ಯಕ್ಷರಾಗಿ ವೆಂಕಟೇಶ್ ಜೋಬಿಗೇನ ಹಳ್ಳಿ ಆಯ್ಕೆ

ಅರಸೀಕೆರೆ:ಚಂದ್ರಗುಪ್ತ ಮೌರ್ಯ ದಲಿತ ಹೋರಾಟಗಾರರ ಒಕ್ಕೂಟದ ಅರಸೀಕೆರೆ ತಾಲೂಕು ಘಟಕದ ಉದ್ಘಾಟನೆ ಹಾಗು ಒಕ್ಕೂಟಕ್ಕೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜಿಲ್ಲಾಧ್ಯಕ್ಷ ವಿಜಯಕುಮಾರ ಬಾಗಿವಾಳು ನೇತೃತ್ವದಲ್ಲಿ ನಡೆಯಿತು.

ಒಕ್ಕೂಟದ ತಾಲ್ಲೂಕು ಅಧ್ಯಕ್ಷರಾಗಿ ಸರ್ವಾನುಮತದಿಂದ ವೆಂಕಟೇಶ್ ಜೋಬಿಗೇನಹಳ್ಳಿ ಆಯ್ಕೆಯಾದರೆ,ಮಹಿಳಾ ಘಟಕದ ಅಧ್ಯಕ್ಷರಾಗಿ ರೂಪಾವತಿ ಯಡವನಹಳ್ಳಿ, ಕಾರ್ಯಾ ಧ್ಯಕ್ಷರುಗಳಾಗಿ ಕಿರಣ್ ಕುಮಾರ್ ಮುರುಂಡಿ, ಸುಂದರೇಶ್ ಅರಸೀಕೆರೆ, ರಾಮು ಮುದುಡಿ, ಸದಾನಂದ ತಳಲೂರು, ಪ್ರದೀಪ್ ಕೆ ಎಸ್ ಕಣಕಟ್ಟೆ, ಅಭಿಷೇಕ್ ಕಾಮಸಮುದ್ರ, ಜಗದೀಶ್ ಹಿರಿಯೂರು, ಸಿದ್ದಯ್ಯ ಯಡವನಹಳ್ಳಿ, ಮೋಹನ್ ಕುಮಾರ್ ಬಾಗಿವಾಳು,ಕಾರ್ಯದರ್ಶಿಗಳಾಗಿ ಸಂದೀಪ್ ಮುದ್ದನಹಳ್ಳಿ, ಸುಹಿಲ್ ಅರಸೀಕೆರೆ, ಮಧು ತಳಲೂರು, ನವೀನ್ ಕುಮಾರ್ ಜಿ ಗುಡ್ಡದಕೊಪ್ಪಲು, ಚಂದ್ರಶೇಖರ ಚಿಕ್ಕೂರು, ಕೃಷ್ಣಮೂರ್ತಿ ಬಿ ಆರ್ ಭೈರಗೊಂಡನಹಳ್ಳಿ, ಕಿರಣ್ ಕುಮಾರ್ ಸಿದ್ದರಹಟ್ಟಿ,ಕಣಕಟ್ಟೆ ಹೋಬಳಿ ಅಧ್ಯಕ್ಷರಾಗಿ ಮಹೇಶ್ ಕೆ ಬಿ, ಕಾರ್ಯಧ್ಯಕ್ಷರಾಗಿ ರವೀಶ್ ಕೆ, ಶಿವಕುಮಾರ್ ಕೆ ವಿ,ಗಂಡಸಿ ಹೋಬಳಿ ಅಧ್ಯಕ್ಷರಾಗಿ ಶಶಿ ಕುಮಾರ ಬಿ ಸಿ, ಕಾರ್ಯಾಧ್ಯಕ್ಷರಾಗಿ ಲೋಕೇಶ್ ಡಿ.ಎಂ, ರವಿಕಿರಣ್ ಡಿ ಎನ್, ದಿಲೀಪ್ ಕುಮಾರ ಡಿ ಎಂ, ಯೋಗೇಶ್ ಬಿ ಜೆ ನಿಯುಕ್ತಿಗೊಂಡರು.

ನೂತನ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ವಿಜಯಕುಮಾರ ಬಾಗಿವಾಳು,ನಮ್ಮ ಒಕ್ಕೂಟವು ಜಿಲ್ಲೆಯಲ್ಲಿ ಹಲವಾರು ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದು ಸಂಘಟನೆಯನ್ನು ವಿಸ್ತರಿಸಲು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಕಮಿಟಿಗಳನ್ನು ರಚನೆ ಮಾಡಲಾಗುತ್ತಿದೆ.ಎಸ್.ಸಿ,ಎಸ್. ಟಿ ಸಮುದಾಯದ ಪ್ರತಿಭಾವಂತ, ವಿದ್ಯಾವಂತ ಯುವಕರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡುತ್ತಿದ್ದೇವೆ ಎಂದರು.

ಎಸ್.ಸಿ,ಎಸ್.ಟಿ ಜಾತಿಗಳನ್ನು ಒಳಗೊಂಡಂತೆ ನಾವು ಒಕ್ಕೂಟವನ್ನು ಕಟ್ಟಿದ್ದೇವೆ. ಅದರಂತೆಯೇ ಪದಾಧಿಕಾರಿಗಳನ್ನು ಸಹ ಆಯ್ಕೆ ಮಾಡಿದ್ದೇವೆ. ಆಯ್ಕೆಯಾದ ಪದಾಧಿಕಾರಿಗಳಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಹಲವಾರು ಯೋಜನೆಗಳ ಬಗ್ಗೆ ತರಬೇತಿ ಶಿಬಿರ ಕಾರ್ಯಗಾರವನ್ನು ಆಯೋಜನೆ ಮಾಡಿ ಸಂಘಟನಾತ್ಮಕವಾಗಿ ಸಂವಿಧಾನದ ಆಶಯಗಳಂತೆ ಹೋರಾಟ ಮಾಡಲು ಜಾಗೃತ ಗೊಳಿಸಲಾಗುವುದು.ಆರ್ಥಿಕವಾಗಿ ಸದೃಢ ಗೊಳಿಸಲು ಹಲವಾರು ಕೈಗಾರಿಕೆ ಮತ್ತು ಗುಡಿ ಕೈಗಾರಿಕೆಗಳ ಬಗ್ಗೆ ತರಬೇತಿಯನ್ನು ಸಹ ಕೊಡಿಸಲಾಗುವುದು ಇದರಿಂದ ಸಂಘಟನೆಯನ್ನು ಮಾಡಲು ಅವರಿಗೆ ಸಹಾಯವಾಗುತ್ತದೆ ಎಂದರು.

ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೆ ನಮ್ಮ ಸಂಘಟನೆಯ ಬೆಂಬಲ ಇರುವುದಿಲ್ಲ.ನಿಮ್ಮ ಹೋರಾಟ ಸಂವಿಧಾನಾತ್ಮಕವಾಗಿ ಪ್ರಜಾಸತ್ತಾತ್ಮಕವಾಗಿ ಕಾನೂನಾತ್ಮಕವಾಗಿ ಇರಬೇಕು ಎಂದು ನೂತನ ಪದಾಧಿಕಾರಿಗಳಿಗೆ ಸೂಚನೆಗಳನ್ನು ಕೊಟ್ಟರು.

ಪ್ರಧಾನ ಕಾರ್ಯದರ್ಶಿ ಹರೀಶ್ ಹುಳವಾರೆ ಮಾತನಾಡಿ, ಭಗವಾನ್ ಬುದ್ಧ, ನಾಲ್ವಡಿ ಕೃಷ್ಣರಾಜರ ಆಶಯಗಳಂತೆ ನಾವು ಜಿಲ್ಲೆಯಲ್ಲಿ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಅದೇ ರೀತಿ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳು ಸಹ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಹೋಗಬೇಕು. ನಿಮ್ಮ ಒಳ್ಳೆಯ ಕೆಲಸಗಳಿಗೆ ಜಿಲ್ಲಾ ಕಮಿಟಿಯು ಯಾವಾಗಲೂ ಬೆನ್ನೆಲುಬಾಗಿ ನಿಲುತ್ತದೆ ಎಂದು ಹೇಳಿದರು.

ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಹುಳವರೆ,ಜಿಲ್ಲಾ ಕಾರ್ಯಾಧ್ಯಕ್ಷರಾದ ಕೇಶವಣ್ಣ ಮುಸವತ್ತೂರು,ಜಿಲ್ಲಾ ಕಾರ್ಯದರ್ಶಿಗಳಾದ ಪ್ರಕಾಶ್, ಅಮಿತ್ ತೊಳಲೂರು,ಪುಷ್ಪ ಬಿ ಆರ್, ಹಾಗೂ ಮೂಡಲಗಿರಿ ಜಾಗರವಳ್ಳಿ, ನಾಗೇಶ್ ಕಾಂತರಾಜಪುರ, ಯೋಗೇಶ್ ಶ್ರವಣಬೆಳಗೊಳ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?