ಬೇಲೂರು-ಹಾಸನ ಜಿಲ್ಲೆ ಗಮಕ ಸಾಹಿತ್ಯದ ತವರೂರು-ಶಾಲಾ ಕಾಲೇ ಜುಗಳಲ್ಲಿ ಗಮಕ ಕಲೆಯ ಅಧ್ಯಯನಕ್ಕೆ ಸರಕಾರ ಕ್ರಮ ಕೈಗೊಳ್ಳ ಬೇಕು-ಡಾ.ಎ.ವಿ.ಪ್ರಸನ್ನ ಒತ್ತಾಯ

ಬೇಲೂರು-ಹಾಸನ ಜಿಲ್ಲೆ ಗಮಕ ಸಾಹಿತ್ಯದ ತವರೂರಾಗಿದ್ದು ಈ ಭಾಗಗಳಿಂದ ಅನೇಕ ಹಿರಿಯ ಗಮಕ ವಾಗ್ಮಿಗಳು ತಮ್ಮದೇ ಆದ ಪಾಂಡಿತ್ಯ ಹೊಂದಿ ವಾಚನ ಮಾಡುವ ಮೂಲಕ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಅಪಾರ ಕೊಡುಗೆಯನ್ನು ನೀಡಿದ್ದಾರೆ ಎಂದು ಕರ್ನಾಟಕ ಗಮಕ ಕಲಾ ಪರಿಷತ್ತು ಅಧ್ಯಕ್ಷ ಕಲಾಶ್ರೀ ಗಮಕ ರತ್ನಾಕರ ಡಾ. ಎ ವಿ. ಪ್ರಸನ್ನ ಹೇಳಿದರು.

ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪ್ರವಚನ ಮಂದಿರದಲ್ಲಿ ನಡೆದ ಗಮಕ ಕಲೋತ್ಸವ- 2024 ಪಂಚಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ,ಹಲವಾರು ದಶಕಗಳಿಂದ ಹಾಸನ ಜಿಲ್ಲೆ ಗಮಕ ಸಾಹಿತ್ಯಕ್ಕೆ ಗ್ರಾಮಕ್ಕೆ ನೀಡುತ್ತಾ ಬಂದಿದೆ. ತಮಗೆ ತಿಳಿದಂತೆ ಗಮಕ ಮೊದಲ ಕಾರ್ಯಕ್ರಮ 1962 ರಲ್ಲಿ ಬಸವ ಪಟ್ಟಣದಲ್ಲಿ ಜಿಎಸ್ ಕೌಶಿಕ್ ಅವರು ನಡೆಸಿ ಕೊಟ್ಟಿರುತ್ತಾರೆ. ಕವಿ, ಗಮಕಿ, ವಾದಿ, ವಾಗ್ಮಿ ಇವರುಗಳು ಸಾಹಿತ್ಯ ಚತರ್ಮುಖಿರೆಂದೇ ಪ್ರತೀತಿ. ಕವಿಗೆ ಮೊದಲ ಸ್ಥಾನವಾದರೆ ಗಮಕಿಗೆ ಎರಡನೇ ಸ್ಥಾನ. ರಸ ಭಾವ ಗಳಿಗೆ ಅನುಗುಣವಾಗಿ ರಾಗಗಳು ಸೇರಿದರೆ ಸಾಹಿತಸಾಹಿತ್ಯದ ಮೌಲ್ಯ ಹೆಚ್ಚುತ್ತದೆ ಮತ್ತು ಹೃದಯಕ್ಕೆ ಹತ್ತಿರವಾಗುತ್ತದೆ ಎಂದರು.

ಭಾರತೀಯ ಸಂಸ್ಕೃತಿ ಹಿನ್ನೆಲೆಯುಳ್ಳ ಗಮಕ ಕಲೆ ಉಳಿದು ಬೆಳೆಯಲು ಶಾಲಾ ಕಾಲೇಜುಗಳಲ್ಲಿ ಗಮಕ ಕಲೆಯ ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟರೆ ಮುಂದಿನ ಪೀಳಿಗೆಗೆ ಈ ಕಲೆ ಉಳಿಯಲು ಸಾಧ್ಯ . ಇತ್ತೀಚಿನ ದಿನಗಳಲ್ಲಿ ಗಮಕ ಕಲೆ ರಾಜ್ಯದ ಎಲ್ಲೆಡೆ ಪಸರಿಸುತ್ತಿದೆ. ಯಕ್ಷಗಾನಕ್ಕೆ ಹೆಸರಾಗಿರುವ ದಕ್ಷಿಣ ಕನ್ನಡದಲ್ಲಿ ಗಮಕ ಸಾಹಿತ್ಯದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿರುವುದರ ಜೊತೆಗೆ ಉತ್ತರ ಕರ್ನಾಟಕದಲ್ಲೂ ಗಮಕ ಸಾಹಿತ್ಯಕ್ಕೆ ಮಹತ್ವ ದೊರಕುತ್ತಿದೆ. ಬೇಲೂರಿನಂತಹ ಸಣ್ಣ ತಾಲೂಕಿನಲ್ಲೂ ಗಮಕ ಕಲೆಯ ಬಗ್ಗೆ ಆಸಕ್ತಿ ಇರುವವರನ್ನು ಪ್ರೋತ್ಸಾಹಿಸುತ್ತಿರುವ ನವರತ್ನ ಎಸ್ ವಟಿ ಅವರ ಸೇವೆ ಶ್ಲಾಘನೀಯ ಎಂದು ಹೇಳಿದರು.

ಬೆಂಗಳೂರಿನ ಗಮಕ ಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಕಲಾಶ್ರೀ ಸಿ. ವಿ. ಶ್ರೀಮತಿ , ತಾಲೂಕು ಗಮಕ ಕಲಾ ಪರಿಷತ್ತು ಅಧ್ಯಕ್ಷೆ ,ಸೌಮ್ಯಶ್ರೀ ಗಮಕ ವಾಗ್ದೇವಿ ಶಾಲೆಯ ನವರತ್ನ ಎಸ್. ವಟಿ ಆಶಯ ನುಡಿಗಳನ್ನಾಡಿದರು.

ಚೆನ್ನಕೇಶವ ದೇವಾಲಯ ಪ್ರಧಾನ ಅರ್ಚಕ ಬಿ. ಆರ್. ಶ್ರೀನಿವಾಸ ಭಟ್ಟರ್,ಜಿಲ್ಲಾ ಗಮಕ ಕಲಾ ಪರಿಷತ್ ಕಾರ್ಯದರ್ಶಿ ಗಮಕ ವಿದುಷಿ ರುಕ್ಕಿಣಿ ನಾಗೇಂದ್ರ, ಸಾಹಿತಿ ಶ್ರೀವತ್ಸ ಎಸ್ .ವಟಿ, ಕರ್ನಾಟಕ ಗಮಕಕಲಾ ಪರಿಷತ್ತು ಕಾರ್ಯದರ್ಶಿ ದಕ್ಷಿಣಾಮೂರ್ತಿ , ಜಿಲ್ಲಾಧ್ಯಕ್ಷ ಕಲಾಶ್ರೀ ಗಣೇಶ ಉಡುಪ, ಶ್ರೀ ರಾಘವೇಂದ್ರಸ್ವಾಮಿ ಮಠ, ವ್ಯವಸ್ಥಾಪಕ ಸುಧೀಂದ್ರಾಚಾರ್. ಮುದ್ರಕರು ಹಾಗೂ ಕಲಾಪೋಷಕ ಆರ್. ರಾಜು ಇತರರು ಇದ್ದರು.

Leave a Reply

Your email address will not be published. Required fields are marked *

× How can I help you?