ಮೂಡಿಗೆರೆ-ಗೋಣಿಬೀಡು-ಥ್ರೋಬಾಲ್ ಕ್ರೀಡಾಪಟು ಸುಪ್ರಿತಾ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಮೂಡಿಗೆರೆ:ಗ್ರಾಮೀಣ ಭಾಗದ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವುದು ಸುಲಭದ ಮಾತಲ್ಲ,ಅಂತೆಯೇ ಇಂತಹ ದೊಡ್ಡ ಸಾಧನೆ ಮಾಡುವುದು ಅಸಾಧ್ಯವೂ ಅಲ್ಲ ಎಂದು ಮಲೆನಾಡಿನ
ಯುವತಿ ಗೋಣೀಬೀಡು ಸಮೀಪದ ಹೊಸಪುರದ ಶ್ರೀನಿವಾಸ್ ಮತ್ತು ಗಾಯತ್ರಿ ದಂಪತಿಗಳ ಪುತ್ರಿ
ಹೆಚ್.ಎಸ್.ಸುಪ್ರಿತಾ ತೋರಿಸಿಕೊಟ್ಟಿದ್ದಾರೆ.

ಮೈಸೂರಿನ ಮರಿಮಲ್ಲಪ್ಪ ಕಾಲೇಜಿನ ದ್ವಿತೀಯ ಪಿಯುಸಿ ವಿಧ್ಯಾರ್ಥಿನಿಯಾಗಿರುವ ಸುಪ್ರಿತಾ ಅವರು ಥ್ರೋಬಾಲ್ ಕ್ರೀಡಾಪಟುವಾಗಿದ್ದು ರಾಜ್ಯ,ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದು ಪ್ರಸ್ತುತ ನೇಪಾಳದಲ್ಲಿ ನಡೆಯುತ್ತಿರುವ ಇಂಡೋ-ನೇಪಾಳ್ ಚಾಂಪಿಯನ್‌ಶಿಪ್ ಪoದ್ಯಕ್ಕೆ ಶನಿವಾರ ತೆರಳಿದ್ದಾರೆ.ಕಾಲೇಜು ವಿಧ್ಯಾಭ್ಯಾಸದ ಜೊತೆಗೆ ಥ್ರೋಬಾಲ್ ಕ್ರೀಡೆಯಲ್ಲಿ ಸಾಕಷ್ಟು ಪಂದ್ಯವನ್ನಾಡಿ ಮೊದಲು ನ್ಯಾಷನಲ್ಸ್ ಥ್ರೋಬಾಲ್ ಅಸೋಸಿಯೇಷನ್,ಹಿಮಾಚಲ್ ಪ್ರದೇಶ ನಡೆಸಿಕೊಟ್ಟ ಜೂನಿಯರ್ ನ್ಯಾಷನಲ್ ಚಾಂಪಿಯನ್‌ಶಿಪ್ ನಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ.

ಹಿಮಾಚಲ್ ಪ್ರದೇಶದಲ್ಲಿ ಮೇ ೧೨ ರಿಂದ ೧೪ರವರೆಗೆ ನಡೆದ ಜೂನಿಯರ್ ಥ್ರೋಬಾಲ್ ಚಾಂಪಿಯನ್‌ಶಿಪ್‌ನಲ್ಲಿ ರಜತಪದಕವನ್ನು ತಮ್ಮದಾಗಿರಿಸಿಕೊಂಡಿದ್ದಾರೆ.ಹೈದರಾಬಾದಿನ ವರ್ಲ್ಡ್ ಅಂಡ್ ಡೀಡ್ ಎಜುಕೇಶನ್ ಅಕಾಡೆಮಿ
ತೆಲಂಗಾಣದಲ್ಲಿ ನಡೆಸಿದ ಸೀನಿಯರ್ ನ್ಯಾಷನಲ್ ಥ್ರೋಭಾಲ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾಟರ್ ಫೈನಲ್ ನಲ್ಲಿ ಸೋಲು
ಅನುಭವಿಸಿ ಪಂದ್ಯ ಭಾಗವಹಿಸುವಿಕೆಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.ಮಲೇಷ್ಯಾದಲ್ಲಿ ಸೆ.೧೬ರಿಂದ ೩ ದಿನ
ನಡೆಯಲಿರುವ ಅಂತರರಾಷ್ಟಿಯ ಏಶಿಯನ್ ಥ್ರೋಬಾಲ್ ಚಾಂಪಿಯನ್ ಶಿಪ್ ೨೦೨೪ರ ಪಂದ್ಯಕ್ಕೆ ಸುಪ್ರಿತಾ ಸೇರಿದಂತೆ ಬಾರತದ ೯ ಕ್ರೀಡಾಪಟುಗಳ ತಂಡ ಪ್ರವಾಸ ಕೈಗೊಳ್ಳಲಿದೆ.

———————————–ವರದಿ: ವಿಜಯಕುಮಾರ್.ಮೂಡಿಗೆರೆ

Leave a Reply

Your email address will not be published. Required fields are marked *

× How can I help you?