ಕೆ.ಆರ್.ಪೇಟೆ-ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕ್(ಪಿ.ಎಲ್.ಡಿ ಬ್ಯಾಂಕ್) ನೂತನ ಅಧ್ಯಕ್ಷರಾಗಿ ಬಂಡಿಹೊಳೆ ಬಿ.ಆರ್. ಶಿವಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಅಧ್ಯಕ್ಷರಾಗಿದ್ದ ರಾಧಾ ಈಶ್ವರಪ್ರಸಾದ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿತ್ತು. ಅಧ್ಯಕ್ಷ ಸ್ಥಾನ ಬಯಸಿ ಬಿ.ಆರ್.ಶಿವಕುಮಾರ್ ಅವರನ್ನು ಬಿಟ್ಟರೆ ಉಳಿದ ಯಾವ ಸದಸ್ಯರು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸದ ಕಾರಣ ನೂತನ ಅಧ್ಯಕ್ಷರಾಗಿ ಬಂಡಿಹೊಳೆ ಶಿವಕುಮಾರ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಪ್ರಕ್ರಿಯೆಯಲ್ಲಿ ಕೆಲಸ ನಿರ್ವಹಿಸಿದ ಚುನಾವಣಾಧಿಕಾರಿ ಭರತ್ ಘೋಷಿಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಆರ್.ಶಿವಕುಮಾರ್ ಅವರನ್ನು ಬ್ಯಾಂಕ್ ನ ಮಾಜಿ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಬ್ಯಾಂಕ್ ನಿರ್ದೇಶಕರು ಹಾಗೂ ನೌಕರರು ಮತ್ತು ಹಿರಿಯ ಮುಖಂಡರು ಅಭಿನಂದಿಸಿದರು.
ಬಳಿಕ ಮಾತನಾಡಿದ ಬ್ಯಾಂಕ್ ಮಾಜಿ ಅಧ್ಯಕ್ಷ ಕಬ್ಬಲಗೆರೆಪುರ ಪುಟ್ಟಸ್ವಾಮಿಗೌಡ ಅಧ್ಯಕ್ಷರಾದವರಿಗೆ ಜವಾಬ್ದಾರಿ ಹೆಚ್ಚಿರುತ್ತದೆ.ಬ್ಯಾಂಕ್ ನ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬ್ಯಾಂಕ್ ಅಭಿವೃದ್ಧಿಗೆ ಶ್ರಮಿಸಬೇಕು.ಈಗಿನ ಅಧ್ಯಕ್ಷರಿಗೆ ಅನೇಕ ಸವಾಲುಗಳು ಅವರ ಮುಂದಿವೆ.ನೂತನವಾಗಿ ನಿರ್ಮಾಣ ವಾಗುತ್ತಿರುವ ಬ್ಯಾಂಕ್ ಕಟ್ಟಡ ಪ್ರಗತಿ ಹಂತದಲ್ಲಿದೆ.ಅದನ್ನು ಪೂರ್ಣಗೊಳಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕಾ ಗುತ್ತದೆ.ತಾಲ್ಲೂಕಿನ ರೈತರಿಗೆ ನೀಡಿರುವ ಸಾಲವನ್ನು ಮರುಪಾವತಿ ಮಾಡಲು ಯೋಜನೆಯನ್ನು ರೂಪಿಸಕೊಳ್ಳಬೇಕು.ನಾವೆಲ್ಲರೂ ನಿಮ್ಮ ಜೊತೆಗೆ ಇರುತ್ತೇವೆ.ಒಟ್ಟಿನಲ್ಲಿ ಬ್ಯಾಂಕ್ ಸರ್ವಾಂಗೀಣ ಅಭಿವೃದ್ಧಿ ಹಾಗೂ ರೈತರ ಹಿತ ಕಾಯಲು ಕಂಕಣಬದ್ದರಾಗಿ ದುಡಿಯುವಂತೆ ನೂತನ ಅಧ್ಯಕ್ಷರಿಗೆ ಕಿವಿ ಮಾತು ಹೇಳಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಂಡಿಹೊಳೆ ಶಿವಕುಮಾರ್ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿ,ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ ನಮ್ಮ ಬ್ಯಾಂಕ್ ನ ಎಲ್ಲಾ ಸದಸ್ಯರಿಗೂ ಅನಂತ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.ನನಗೆ ಕೊಟ್ಟ ಜವಾಬ್ದಾರಿ ಸ್ಥಾನಕ್ಕೆ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಕಾರ್ಯವನ್ನು ನಿರ್ವಹಿಸುತ್ತೇನೆ.ಎಲ್ಲರನ್ನೂ ವಿಶ್ವಾಸಕ್ಕೆ ಪಾತ್ರನಾಗಿ ಉಳಿದಿರುವ ಅವಧಿಯಲ್ಲಿ ಬ್ಯಾಂಕ್ ಅಭಿವೃದ್ಧಿ ಹಾಗೂ ರೈತರ ಬೆನ್ನೆಲುಬಾಗಿ ಪ್ರಾಮಾಣಿಕವಾಗಿ ದುಡಿಯಲು ಪ್ರಯತ್ನವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬ್ಯಾಂಕ್ ಉಪಾಧ್ಯಕ್ಷರಾದ ಏಜಾಜ್ ಪಾಷಾ, ಬ್ಯಾಂಕಿನ ಮಾಜಿ ಅಧ್ಯಕ್ಷರಾದ ರಾಧಾ ಈಶ್ವರಪ್ರಸಾದ್, ಕಟ್ಟೆಕ್ಯಾತನಹಳ್ಳಿ ಪಾಪಣ್ಣ, ಅಗಸರಹಳ್ಳಿ ಗೋವಿಂದರಾಜು, ಮಾಜಿ ಉಪಾಧ್ಯಕ್ಷ ಬಣ್ಣೇನಹಳ್ಳಿ ಧನಂಜಯ್,ಕಾoತಾರಾಜೇಗೌಡ, ಚಂದ್ರೇಗೌಡ, ನಾಗರಾಜೇಗೌಡ, ಕಮಲಮ್ಮ, ಜಯಶೀಲ, ನಾಗೇಶ್, ನಿರ್ದೇಶಕ ಚಂದ್ರೇಗೌಡ, ಶಂಭುಲಿoಗೇಗೌಡ, ರಾಜಾನಾಯಕ್, ಬ್ಯಾಂಕಿನ ವ್ಯವಸ್ಥಾಪಕ ರವಿಕುಮಾರ್ ಸೇರಿದಂತೆ ಇತರರು ಹಾಜರಿದ್ದರು.
———–ಶ್ರೀನಿವಾಸ್ ಕೆ ಆರ್ ಪೇಟೆ