ನಾಗಮಂಗಲ:ಧ್ಯಾನ ಒಂದು ವೈಜ್ಞಾನಿಕ ವಿಧಾನವಾಗಿದೆ ಅದು ಯಾವುದೇ ಧರ್ಮಕ್ಕೆ ಸೀಮಿತವಲ್ಲ-ಡಾ.ಸತ್ಯನಾರಾಯಣ

ನಾಗಮಂಗಲ:ಧ್ಯಾನ ಒಂದು ವೈಜ್ಞಾನಿಕ ವಿಧಾನವಾಗಿದೆ ಅದು ಯಾವುದೇ ಧರ್ಮಕ್ಕೆ ಸೀಮಿತವಲ್ಲ.ಪ್ರತಿಯೊಬ್ಬರೂ ಪ್ರತಿ ನಿತ್ಯ ಧ್ಯಾನ ಮಾಡುವುದರಿಂದ ದೇಹದಲ್ಲಿ ಚೈತನ್ಯ ಶಕ್ತಿ ವೃದ್ಧಿಯಾಗಿ ಮನಃಶಾಂತಿ ಲಭಿಸುತ್ತದೆ ಎಂದು ಧ್ಯಾನ ಕಸ್ತೂರಿ ಮಾಸ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ.ಸತ್ಯನಾರಾಯಣ ಹೇಳಿದರು.

ಪಟ್ಟಣದ ಶಿಕ್ಷಕರ ಭವನದಲ್ಲಿ ನಡೆದ ಸಸ್ಯಾಹಾರ ಮತ್ತು ಧ್ಯಾನ ಪ್ರಚಾರ ಜನಜಾಗೃತಿ ಜಾಥಾದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,ಧ್ಯಾನ ಮಾರ್ಗ ಮೋಕ್ಷ ಸಾಧನೆಯ ಮಾರ್ಗವೂ ಹೌದು. ಬ್ರಹ್ಮರ್ಷಿ ಡಾ.ಸುಭಾಷ್ ಪತ್ರೀಜಿಯವರು ಧ್ಯಾನದ ಮಹತ್ವವನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಿ ಲಕ್ಷಾಂತರ ಜನರನ್ನು ಧ್ಯಾನ ಮಾರ್ಗಕ್ಕೆ ಪರಿವರ್ತಿಸಿದ್ದಾರೆ. ದೇಶ ವಿದೇಶಗಳಲ್ಲಿ ಅವರು ಅನುಯಾಯಿಗಳನ್ನು ಹೊಂದಿದ್ದಾರೆ.ನಾಗಮಂಗಲದಲ್ಲೂ ನೂರಾರು ಜನರು ಧ್ಯಾನದಲ್ಲಿ ತೊಡಗಿಕೊಳ್ಳುವಂತಾಗಬೇಕು.ಧ್ಯಾನ ಸಾಧನೆಗೆ ಸಸ್ಯಾಹಾರ ಪೂರಕವಾಗಿದ್ದು ಪ್ರತಿಯೊಬ್ಬರೂ ಸಸ್ಯಾಹಾರವನ್ನು ರೂಢಿಸಿಕೊಂಡು ಧ್ಯಾನ ಮಾರ್ಗದಲ್ಲಿ ಮುಂದುವರಿಯಿರಿ ಎಂದರು.

ಕಾರ್ಯಕ್ರಮಕ್ಕೂ ಮೊದಲು,ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯದ ಮುಂಭಾಗ ಗಿಡವನ್ನು ನೆಟ್ಟು ಹೊರಟ ಸಸ್ಯಾಹಾರ ಜನಜಾಗೃತಿ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ಘೋಷಣೆ ಮತ್ತು ಬಿತ್ತಿ ಪತ್ರಗಳ ಮೂಲಕ ಜನಜಾಗೃತಿ ಮೂಡಿಸುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದ ಜಾಥ ಟಿ.ಬಿ.ಬಡಾವಣೆ ಮಾರ್ಗವಾಗಿ ಶಿಕ್ಷಕರ ಭವನಕ್ಕೆ ತಲುಪಿ ಅಂತಿಮವಾಗಿ ಧ್ಯಾನ ಮಾಡಿ ಜಾಥಾವನ್ನು ಮುಕ್ತಾಯ ಗೊಳಿಸಲಾಯಿತು.

ಜಾಥಾಕ್ಕೆ ನಿವೃತ್ತ ಸಂಸ್ಕೃತ ಶಿಕ್ಷಕರಾದ ಬಾಸ್ಕರ್ ಭಟ್ಟರು ಜಾಲನೆ ನೀಡಿದರು.

ಜೆ.ವೈ. ಮಂಜುನಾಥ, ಡಾ.ಸುಮಂಗಳ ಸಾಲಿಮಠ, ಲಕ್ಷ್ಮಣ್ ಜೀ, ಹೊನ್ನೇನಹಳ್ಳಿ ಕೃಷ್ಣೇಗೌಡ ಸೇರಿದಂತೆ ಇನ್ನೂ ಹಲವರು ಜಾಥಾದಲ್ಲಿ ಹೆಜ್ಜೆ ಹಾಕಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊನ್ನೇನಹಳ್ಳಿ ಕೃಷ್ಣೇಗೌಡರು ವಹಿಸಿದ್ದರು.

ತಾಲ್ಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಎಸ್.ಎಸ್.ಮಂಜುನಾಥ, ಮಂಜುಳಾ ಸುರೇಶ್, ಡಿ.ಎಸ್. ಪ್ರಕಾಶ್, ಪ್ರಭಾವತಿ, ನಿವೃತ್ತ ಪ್ರೊಫೆಸರ್ ಬೈರೇಗೌಡರು, ನಾಗರಾಜು.ಬಿ, ಶಿಕ್ಷಕರಾದ ಶಿವನಂಜಪ್ಪ ಇ. ಶ್ರೀಮತಿ ಜಯಂತಿ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.

—————–-ರವಿ ಬಿ ಹೆಚ್ ನಾಗಮಂಗಲ

Leave a Reply

Your email address will not be published. Required fields are marked *

× How can I help you?