ಕೊರಟಗೆರೆ-ವಿಶ್ವಕ್ಕೆ ಶಾಂತಿ ಅಹಿಂಸಾ ಧರ್ಮವನ್ನು ಭೋಧಿದುವ ಜೈನ ಧರ್ಮದ ಮಂತ್ರಗಳು ಭೋಧನೆ,ಪಾಠ ಪ್ರವಚನಗಳನ್ನು ನೀಡುವ ಧರ್ಮಭೂಮಿ ತೋವಿನಕೆರೆ ಯಾಗಿದ್ದು, ಇಲ್ಲಿ ನಡೆಯುತ್ತಿದ್ದ ಮಂತ್ರಗಳು, ಭೋಧನೆಗಳು, ಪ್ರವಚನಗಳು ವಿಶ್ವಮಾನವಾಗಿದ್ದು ಇದೊಂದು ಧರ್ಮಭೂಮಿಯಾಗಿದೆ ಎಂದು ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಸ್ವಸ್ತಿಶ್ರೀ ಲಕ್ಷ್ಮಿಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.
ಅವರು ತಾಲೂಕಿನ ಚನ್ನರಾಯನದುರ್ಗಾ ಹೋಬಳಿ ತೋವಿನಕೆರೆಯ ಶ್ರೀ ದಿಗಂಬರ ಜೈನ ಶ್ರೀ ಚಂದ್ರನಾಥ ಭವನದ ಉದ್ಘಾಟನಾ ಸಮಾರಂಭದ ಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು.
ಈ ಹಿಂದೆ ತೋವಿನಕೆರೆಯಲ್ಲಿ ಮಂತ್ರಗಳ ಭೋಧನೆ, ಪಾಠ ಪ್ರವಚನಗಳು ನಡೆಯುತ್ತಿದ್ದವು. ಮಾತಾಜಿಗಳು ಪ್ರವಚನ ನಿಡುತ್ತಿದ್ದರು.ಇದೊಂದು ಧರ್ಮ ಭೂಮಿಯಾಗಿದ್ದು ಧರ್ಮಕ್ಕೆ ಸಾಹಿತ್ಯಕ್ಕೆ ಹಲವಾರು ಮಹತ್ವದ ಕೊಡುಗೆಗೆಳನ್ನು ನೀಡಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ರಾಜಕೀಯದಲ್ಲಿ ಓಟ್ ಬ್ಯಾಂಕ್ ರಾಜಕೀಯಗಳು ನಡೆಯುತ್ತಿದೆ. ದೇಶದ ನಾಗರೀಕರಿಗೆ ಇಂದು ಸಂಸ್ಕೃತಿಯ ಉದ್ದಾರ ಬೇಕಿಲ್ಲ.ಭೂಮಿ,ಇತಿಹಾಸ ಬೇಡವಾಗಿದೆ ಎಂದು ವಿಷಾದಿಸಿದ ಶ್ರೀಗಳು ದೇಶ, ಮಣ್ಣು, ಗಾಳಿ, ಬೆಳಕು, ಆಹಾರಗಳನ್ನು ಜೈನರು ಸಂರಕ್ಷಿಸಿದ್ದಾರೆ. ಇಲ್ಲದಿದ್ದರೆ ಎಲ್ಲವೂ ಪರಕೀಯರ ಪಾಲಾಗುತ್ತಿತ್ತು ಎಂದರು.
ಈಗಿನ ಸರ್ಕಾರಗಳಿಗೆ ಜೈನ ಧರ್ಮದ ಕೊಡುಗೆ ಅಪಾರವಾಗಿದೆ.ಭಾರತದ ಲಾಂಛನ, ಸಿಂಹ, ಅಶೋಕ ಸ್ಥಂಭ, ತ್ರೀವರ್ಣ ದ್ವಜದ ಮಧ್ಯೆ ಚಕ್ರ ಸೇರಿದಂತೆ ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ.ಜನಪದ ತಜ್ಞ ಸಾಹಿತಿ ಡಾ.ಎಸ್.ಪಿ.ಪದ್ಮಪ್ರಸಾದ್ ಜೈನ್,ರವರ ಕನ್ನಡ ಸಾಹಿತ್ಯಕ್ಕೆ ಜೈನ ಧರ್ಮಕ್ಕೆ, ಕನ್ನಡ ಉಳಿವಿಗೆ ಕೊಡುಗೆ ಅಪಾರ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಸಿದ್ದರಬೆಟ್ಟ ರಂಭಾಪುರಿ ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯಸ್ವಾಮೀಜಿ ಆಶ್ರೀರ್ವಚನ ನೀಡಿ, ಇಂದಿನ ಸಮಾಜದಲ್ಲಿ ಯುವ ಪೀಳಿಗೆಗೆ ಧರ್ಮದ ಭೋಧನೆ ಅಗತ್ಯ.ಆತ್ಮಸ್ಥೈರ್ಯ ತುಂಬವುದು ಅಗತ್ಯ.ಜೈನ ಧರ್ಮ ಧಾರ್ಮಿಕ ಆಚರಣೆಯಲ್ಲಿ ಮಹತ್ವ ಹೊಂದಿದ್ದು ಇಂದು ಧೈರ್ಯ ಎನ್ನುವುದು ಅಗತ್ಯವಾಗಿದ್ದು, ಇದಕ್ಕೆ ಕರ್ಮವನ್ನು ನಿಗ್ರಹಿಸುವ ಶಕ್ತಿ ಇದೆ.ಧರ್ಮವನ್ನು ಆಚರಿಸಿದಾಗ ದೈರ್ಯ, ಶಕ್ತಿಬರಲಿದೆ ಎಂದ ಶ್ರೀಗಳು ಧರ್ಮದಿಂದ ಆಚಾರವಂತರಾದಾಗ ಎಲ್ಲಾ ಸಾದ್ಯವಾಗಲಿದೆ. ಪರಂಪರೆಗಳನ್ನು ಯುವ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕು.ಧರ್ಮದ ಹಾದಿಯಲ್ಲಿ ನಡೆದಾಗ ಎಲ್ಲಾ ಸಾಧ್ಯ.ಧರ್ಮದ ಆಚಾರ ವಿಚಾರಗಳನ್ನು ರೂಡಿಸಿಕೊಳ್ಳುವಂತೆ ಕರೆ ನೀಡಿದರು.
ತುಮಕೂರು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಗಳು ದಿವ್ಯ ಸಾನಿದ್ಯವಹಿಸಿ ಮಾತನಾಡಿ, ಜೈನ ಧರ್ಮದ ಅಹಿಂಸ, ಶಾಂತಿ, ಆಸ್ಮಿಯ, ಮೌಲ್ಯಗಳು ಪುರಾತನವಾದದ್ದು.ಇವುಗಳ ಸಾಧನೆಗಳನ್ನು ಪ್ರೇರೇಪಿಸುವಲ್ಲಿ ಧರ್ಮದ ಕೊಡುಗೆ ಅಪಾರ.ಸಾಧನೆ ಶಾಂತಿ, ಸಾಂಗೀಕ ಬದುಕಿಗೆ ಸಮಾಜಕ್ಕೆ ಪರಿಚಯಿಸಿದ್ದು ಹಾಲು ಜೇನು ಮಿಲನಗೊಂಡಂತಿದೆ ಎಂದು ತಿಳಿಸಿದ ಅವರು ಜೈನ ಧರ್ಮ ಹಿಂದೂ ಹಾಗೂ ಬೌದ್ದ ಧರ್ಮದಲ್ಲಿ ಒಡನಾಟ ಹೊಂದಿದೆ. ಭಾರತದ ಉಳಿವಿನಲ್ಲಿ ಜೈನ ಧರ್ಮದ ಪಾತ್ರ ಅಪಾರವಾಗಿದ್ದು ಈ ಬಗ್ಗೆ ಚಿಂತನೆ ಅಗತ್ಯ ಎಂದರು.
ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಂಸದ ವಿ.ಎನ್.ಉಗ್ರಪ್ಪ, ಧರ್ಮ ಪ್ರಚಾರಕರಿಗೆ ಮೋಕ್ಷ ಸಿಗಬೇಕು.ಮನುಕುಲದ ಅಭಿವೃದ್ದಿಯಾಗಬೇಕು.ಪಂಚ ಸಂದೇಶಗಳ ಪಾಲನೆ ಅಗತ್ಯ.ಭಾವನೆ ಬದ್ದತೆಗಳನ್ನು ವೈಜ್ಞಾನಿಕವಾಗಿ ಕೊಡಬೇಕಿದ್ದು, ಸತ್ಯ ಎನ್ನುವುದು ಕಾನೂನು, ಸನ್ಯಾಸತ್ವದಲ್ಲೂ ಇಲ್ಲ. ಸಮಾಜದಲ್ಲಿ ಇಂದು ಕಂದಕ ಹಿಂಸೆಗಳು ಹೆಚ್ಚಿದೆ ಎಂದು ವಿಷಾದಿಸಿದ ಅವರು ಗಣ್ಯರ ಸಂದೇಶ ಬಳಸಿದರೆ ಶಾಂತಿ ಸಾಧ್ಯ,ಒಳ್ಳೆ ಸಮಾಜ ಧರ್ಮದ ಹಾದಿಯಲ್ಲಿ ನಡೆದಾಗ ಮಾತ್ರ ಮಾನವೀಯತೆ ನೆಲೆಗಟ್ಟು ರೂಪಿಸಿಕೊಂಡಾಗ ಇದು ಸಾದ್ಯ,ನಾವು ಸಂಘಟಿತರಾದಾಗ ಬದುಕಿನಲ್ಲಿ ಬದಲಾವಣೆ ಅಗತ್ಯ ಎಂದರು.
ತೋವಿನಕೆರೆ ದಿಗಂಬರ ಜೈನ ಶ್ರೀ ಚಂದ್ರಪ್ರಭಾ ತೀರ್ಥಂಕರ ಜಿನಮಂದಿರ ಅಧ್ಯಕ್ಷ ಶೀತಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ವೇದಿಕೆಯಲ್ಲಿ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಉಪಾಧ್ಯಕ್ಷೆ ರತ್ನತ್ರೆಯ ಕ್ರಿಯೇಷನ್‍ನ ಡಾ.ನಿರಜಾ ನಾಗೇಂದ್ರಕುಮಾರ್, ಸಾಹಿತಿ, ಜಾನಪದ ತಜ್ಞ, ಡಾ.ಎಸ್.ಪಿ.ಪದ್ಮಪ್ರಸಾದ್ ಜೈನ್, ತೋವಿನಕೆರೆ ಗ್ರಾ.ಪಂ. ಅಧ್ಯಕ್ಷ ಗಿರಿಜಮ್ಮ, ಜೈನ ಸಮಾಜದ ಮುಖಂಡ ವಿಜಯ್ ಕುಮಾರ್, ವಿಮಲ್‍ರಾಜ್, ಚಂದ್ರಪ್ರಭ, ಸುರೇಂದ್ರಜೈನ್, ಕುರಂಕೋಟೆ ಟಿ.ಎಸ್.ಪ್ರಕಾಶ್‍ಜೈನ್, ಉದ್ಯಮಿ ಜಿ.ಪಿ.ಉಮೇಶ್ ಕುಮಾರ್, ಸನ್ಮತಿಕುಮಾರ್, ಸೆಕ್ಯೂರಿಟಿ ಸರ್ವಿಸ್ ಶೀತಲ್, ಎ.ಎನ್.ರಾಜೇಂದ್ರ ಪ್ರಸಾದ್, ಚಂದ್ರಕೀರ್ತಿ, ಧರಣೇಂದ್ರಯ್ಯ, ಸುಗಂಧರಾಜ, ಬೆಳಗುಲಿ ವಿಜಯ್‍ಕುಮಾರ್, ಅರಸಾ ಪುರ ಸಂತೋಷ್, ಡಾ.ನಾಗೇಂದ್ರ ಕುಮಾರ್ ಸೇರಿದಂತೆ ತೋವಿನಕೆರೆ ಜೈನ ಸಮಾಜದ ಮುಖಂಡರು, ಜೈನ ಮಹಿಳಾ ಸಮಾಜದ ಅಧ್ಯಕ್ಷರು ಪದಾದಿಕಾರಿಗಳು, ಜೈನ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.
————–-ಶ್ರೀನಿವಾಸ್ ಕೊರಟಗೆರೆ