ಮಂಡ್ಯ:ಕಾರ್ತಿಕ ಮಾಸದ ಪೂಜೆಗೆ ಪೋಷಕರ ಜೊತೆ ತೆರಳಿದ್ದ ಐದು ವರ್ಷದ ಬಾಲಕನ ಮೇಲೆ ಗೇಟ್ ಬಿದ್ದು ಸಾವನ್ನಪ್ಪಿರುವ ದುರ್ಘಟನೆ ಘಟನೆ ತಾಲೂಕಿನ ಹುಂಜನ ಗ್ರಾಮದ ಚನ್ನಕೇಶವ ದೇವಾಲಯದಲ್ಲಿ ನಡೆದಿದೆ.
ಗ್ರಾಮದ ಹೆಚ್.ಟಿ ಸಿದ್ದರಾಜು-ಸುಮಿತ್ರ ದಂಪತಿಗಳ ಪುತ್ರ 5 ವರ್ಷದ ಜಿಷ್ಣು ಹೆಚ್.ಎಸ್ ಸಾವನ್ನಪ್ಪಿದ ದುರ್ದೈವಿ ಬಾಲಕನಾಗಿದ್ದಾನೆ.
ಆಟವಾಡುವ ವೇಳೆ ಮಗುವಿನ ಮೇಲೆ ಕಬ್ಬಿಣದ ಗೇಟ್ ಬಿದ್ದಿದ್ದು,ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ.ಗೇಟಿನ ಕೆಳಗಡೆ ಮಗು ಸಿಲುಕಿರುವುದು ಕಂಡು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರು ಚಿಕಿತ್ಸೆ ಪಲಕಾರಿಯಾಗದೆ ಸಾವನ್ನಪ್ಪಿದೆ.
ಅರಕೆರೆ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದು,ಪೊಲೀಸರು ತನಿಖೆ ಕೈಗೊಂಡಿದ್ದಾರೆ.