ತುಮಕೂರು:ನಗರದ ವೈಶ್ಯ ಕೋ-ಆಪರೇಟೀವ್ ಬ್ಯಾಂಕ್ ನೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಂಗಳವಾರ ಬ್ಯಾoಕಿಗೆ ಭೇಟಿ ನೀಡಿ ಆಡಳಿತ ಮಂಡಳಿಗೆ ಶುಭ ಕೋರಿದರು.
ಈ ವೇಳೆ ಆಡಳಿತ ಮಂಡಳಿಯಿoದ ಸಚಿವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಂತರ ಮಾತನಾಡಿದ ಸಚಿವ ವಿ.ಸೋಮಣ್ಣ, ಆಡಳಿತ ಮಂಡಳಿಯ ಕಾಳಜಿ, ಶಿಸ್ತಿನ ವ್ಯವಹಾರ, ಶ್ರಮ, ಸದಸ್ಯರು ಹಾಗೂ ಸಿಬ್ಬಂದಿಯ ಸೇವಾ ಸಹಕಾರದಿಂದ ಬ್ಯಾಂಕ್ ಯಶಸ್ವಿಯಾಗಿ ನೂರು ವರ್ಷ ಪೂರೈಸಿದೆ. ಸಹಕಾರಿ ಸಂಸ್ಥೆಯೊoದರ ಈ ಬೆಳವಣಿಗೆ
ಆಶಾದಾಯಕ ಎಂದರು.
100 ವರ್ಷ ಅಂದರೆ ಸುಮ್ಮನೆ ಮಾತಲ್ಲ,ವ್ಯಾಪಾರ, ವ್ಯವಹಾರ ವೃತ್ತಿ ಮಾಡಿಕೊಂಡು ಬಂದಿರುವ ವೈಶ್ಯ ಸಮಾಜವು ನಾಡಿನ ಆರ್ಥಿಕ ಚಟುವಟಿಕೆ ಬೆಳೆಯಲು ಸಹಕಾರಿಯಾಗಿದೆ. ವ್ಯವಹಾರದ ಜೊತೆಗೆ ಸಮಾಜ ಸೇವಾ ಕಾರ್ಯಗಳಲ್ಲೂ ತೊಡಗಿರುವ ಆರ್ಯವೈಶ್ಯರು, ದಾನಧರ್ಮದ ಮೂಲಕ ಸಮಾಜಕ್ಕೆ ನೆರವಾಗಿದ್ದಾರೆ ಎಂದರು.
ಬ್ಯಾoಕಿನ ಅಧ್ಯಕ್ಷ ಕೆ.ಎನ್.ಗೋವಿಂದರಾಜು,ಉಪಾಧ್ಯಕ್ಷ ಕೆ.ಎಸ್.ರಾಮಮೂರ್ತಿ, ನಿರ್ದೇಶಕರಾದ ಬಿ.ಎ.ಲಕ್ಷ್ಮಿ ಕಾಂತ ಶೆಟ್ಟಿ,ಎನ್.ವಿ.ಬಾಲಾಜಿ, ಟಿ.ಎ.ಪಾರ್ಥಸಾರಥಿ, ಪ್ರಸೂನ್ ಮಾಕಂ, ಎಂ.ನಾಗಸುoದರ್,ಸಿ.ಎಸ್.ಸoಜಯ್, ಬಿ.ಎಸ್.ಲೋಕನಾಥ್, ಟಿ.ನರಸಿಂಹಮೂರ್ತಿ, ಕನಕಲಕ್ಷ್ಮಿ , ಗೀತಾಬಾಲರಾಜ್, ಎನ್.ಎ.ಅರುಣ್‌ಕುಮಾರ್,ಡಿ.ಎಲ್.ಲಕ್ಷ್ಮಿಪತಿ, ಸಿಇಓ ಎಸ್.ಸುಮ, ನಿರ್ವಹಣಾ ಸಮಿತಿಯ ರಾಧಾಕೃಷ್ಣಗುಪ್ತ, ಜಯಕುಮಾರ್, ಜಿ.ಆರ್.ಮನು ಹಾಗೂ ಬ್ಯಾಂಕಿನ ಸಿಬ್ಬಂದಿ ಹಾಜರಿದ್ದರು.