ಕೊರಟಗೆರೆ:ತುಮಕೂರು ಹಾಲು ಉತ್ಪಾದಕರ ಸಂಘದ ಚುನಾವಣೆಯಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಸ್ಥಾನಕ್ಕೆಎನ್ ಡಿ ಎ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ವಿ.ಸಿದ್ಧಗಂಗಯ್ಯ ರವರು ತಮ್ಮ ಪರವಾಗಿ ಮತ ಹಾಕಿರುವ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ನಾನು ಅಂದುಕೊಂಡಕ್ಕಿಂತ ನಿರೀಕ್ಷೆ ಮೀರಿ ಮತದಾನ ನಡೆದಿದೆ. ಮತದಾನ ಮಾಡಿದ ಎಲ್ಲ ಮತದಾರ ಪ್ರಭುಗಳಿಗೂ ನನ್ನ ಧನ್ಯವಾದಗಳು. ನಾನು ಮೊದಲೇ ಹೇಳಿದ ಹಾಗೆ ನಾನು ನಿರ್ದೇಶಕನಾದ ಮರುಕ್ಷಣದಿಂದ ಕ್ಷೇತ್ರದ ಪ್ರತಿ ಗ್ರಾಮಗಳಿಗೆ ಹಾಲಿನ ಡೈರಿ ಕೇಂದ್ರವನ್ನು ಕೊಡುವುದೇ ನನ್ನ ಮೊದಲ ಆದ್ಯತೆ.ಪ್ರತಿ ಮನೆಯ ಮಹಿಳೆಯರು ಹೈನುಗಾರಿಕೆಯಲ್ಲಿ ತೊಡಗಬೇಕು.ಸ್ವಾವಲಂಬಿಗಳಾಗಿ ಬದುಕಬೇಕು.ಅವರ ದುಡಿಮೆಯಿಂದ ಅವರು ಮುಂದೆ ಬರಬೇಕು.
ಯಾವ ಪುರುಷರ ಮೇಲು ಅವಲಂಬನೆ ಆಗಬಾರದು. ಅದಕ್ಕಾಗಿ ಸಾಕು ಪ್ರಾಣಿಗಳ ಸಾಲ ಶೀಘ್ರವಾಗಿ ಸುಲಭ ಕಂತುಗಳಲ್ಲಿ ಅವರ ಕೈ ಸೇರುವಂತೆ ಮಾಡುವುದೇ ನನ್ನ ದೂರ ದೃಷ್ಟಿ ಯೋಜನೆಯಾಗಿದೆ ಎಂದರು.
ಹಿಂದೆ ಲೋಕಸಭಾ ಚುನಾವಣೆಯಲ್ಲಿ ಎನ್ ಡಿ ಎ ಅಭ್ಯರ್ಥಿಯಾಗಿದ್ದ ವಿ. ಸೋಮಣ್ಣನವರಿಗೆ ಕೊರಟಗೆರೆ ಕ್ಷೇತ್ರದ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಉತ್ತಮವಾಗಿ ಕೆಲಸ ಮಾಡಿ ಅತಿ ಹೆಚ್ಚು ಲೀಡ್ ಬರುವಂತೆ ಮಾಡಿದ್ದು,ಹಾಗೆಯೇ ನನಗಾಗಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಬೆಳಗ್ಗೆ ರಾತ್ರಿ ಎನ್ನದೆ ಶ್ರಮಿಸಿದ್ದಾರೆ. ನನಗೆ ಸಹಕಾರ ಮಾಡಿದ ಎಲ್ಲಾ ಕಾರ್ಯಕರ್ತರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಹೇಳಿದರು.
———————ನರಸಿಂಹಯ್ಯ ಕೋಳಾಲ