ಮೈಸೂರು-ಪ್ರತಿವರ್ಷ ಮಕ್ಕಳ ದಿನಾಚರಣೆಯನ್ನು ನೆಹರೂರವರ ಹುಟ್ಟುಹಬ್ಬದ ದಿನ ಆಚರಿಸುತ್ತೇವೆ.ಇದು ನೆಹರು ಅವರಿಗಿರುವ ಮಕ್ಕಳ ಮೇಲಿನ ಪ್ರೀತಿಯನ್ನು ತೋರಿಸುತ್ತದೆ. ಮಕ್ಕಳು ಪ್ರತಿ ವರ್ಷವೂ ಮಕ್ಕಳ ದಿನಾಚರಣೆ ಬಂದಾಗ ನೆಹರೂರವರನ್ನ ಸ್ಮರಿಸಲೇಬೇಕು ಎಂದು ಮೂಡ ಮಾಜಿ ಅಧ್ಯಕ್ಷ ಎಚ್ ವಿ ರಾಜೀವ್ ತಿಳಿಸಿದರು.
ಕುವೆಂಪು ನಗರದ ಸರ್ಕಾರಿ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನೆಹರೂರವರು ಮಾಡಿದಂತಹ ಒಳ್ಳೆಯ ಕಾರ್ಯಗಳನ್ನು ಮಕ್ಕಳಿಗೆ ಮನದಟ್ಟು ಮಾಡಿಕೊಡಬೇಕಾಗಿರುವುದು ನಮ್ಮ ಜವಾಬ್ದಾರಿ.ಹಾಗೆಯೇ ಪರಿಸರ ಪ್ರೀತಿಯನ್ನು ಮಕ್ಕಳಿಗೆ ಪಸರಿಸುವ ಕಾರಣದಿಂದ ಒಂದು ಗಿಡವನ್ನು ನೆಟ್ಟು ಅದನ್ನು ಪೋಷಿಸುವ ಜವಾಬ್ದಾರಿಯನ್ನು ಮಕ್ಕಳಿಗೆ ಕೊಡಬೇಕೆಂಬ ಉದ್ದೇಶದಿಂದ ಒಂದು ಹಣ್ಣಿನ ಗಿಡವನ್ನು ಈ ಸುದಿನದಂದು ನೆಡಲಾಗಿದೆ.ನೀವು ಕುಡಿಯಲು ತರುವ ನೀರು ಉಳಿದರೆ ಅದನ್ನು ಗಿಡಕ್ಕೆ ಹಾಕಿ ಪರಿಸರ ಪ್ರೀತಿಯನ್ನು ತೋರಿಸಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಎಚ್ ವಿ ರಾಜೀವ್ ಸ್ನೇಹ ಬಳಗದ ಆರ್ ಕುಮಾರ್, ಶಿಕ್ಷಕ ವೃಂದದವರು, ಪುಟ್ಟ ಮಕ್ಕಳು ಉಪಸ್ಥಿತರಿದ್ದರು.