ಬೇಲೂರು-ಶ್ರೀ ಲಕ್ಷ್ಮೀ ಮಂಗಳವಾದ್ಯ ಮತ್ತು ಸಂಗೀತ ಕಲಾ ಸೇವಾ ಟ್ರಸ್ಟ್ ನ ವಿದ್ಯಾರ್ಥಿ ನಂದೀಶ್ ರಿಗೆ ಜಿಲ್ಲಾಮಟ್ಟದ ಪ್ರಶಸ್ತಿ-ರಾಜ್ಯಮ ಟ್ಟಕ್ಕೆ ಆಯ್ಕೆ

ಬೇಲೂರು-ಶ್ರೀ ಲಕ್ಷ್ಮೀ ಮಂಗಳವಾದ್ಯ ಮತ್ತು ಸಂಗೀತ ಕಲಾ ಸೇವಾ ಟ್ರಸ್ಟ್ ನಲ್ಲಿ ವಾದ್ಯ ಸಂಗೀತ ಶಿಕ್ಷಣವನ್ನು ಪಡೆಯುತ್ತಿರುವ ನಂದೀಶ್ ಮಕ್ಕಳ ದಿನಾಚರಣೆ ಅಂಗವಾಗಿ,ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಸನ ರವರ ವತಿಯಿಂದ ನಡೆದ ಜಿಲ್ಲಾಮಟ್ಟದ ವಾದ್ಯ ಸಂಗೀತ ಸ್ಪರ್ಧೆಯ ಸ್ಯಾಕ್ಸಾಫೋನ್ ವಾದನ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಸಿಕೊಳ್ಳುವುದರ ಜೊತೆಗೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಶ್ರೀ ಲಕ್ಷ್ಮೀ ಮಂಗಳವಾದ್ಯ ಮತ್ತು ಸಂಗೀತ ಕಲಾ ಸೇವಾ ಟ್ರಸ್ಟ್ ನ ಅಧ್ಯಕ್ಷ ನರಸಿಂಹಸ್ವಾಮಿ ಮಾತನಾಡಿ,ನಮ್ಮ ಟ್ರಸ್ಟ್ ವತಿಯಿಂದ ವಾದ್ಯ ಸಂಗೀತ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿ ನಂದೀಶ ರವರಿಗೆ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ದೊರಕಿರುವುದು ಸಂತಸ ತಂದಿದೆ.ಅತ್ಯಂತ ಶ್ರದ್ದೆಯಿಂದ ಯಾವುದೇ ಕಲೆಯನ್ನು ಅಭ್ಯಾಸ ಮಾಡಿದರೆ ಅದರಲ್ಲಿ ಯಶಸ್ಸು ಪಡೆಯಬಹುದು ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ.ಮುಂದಿನ ದಿನಗಳಲ್ಲಿ ನಂದೀಶ್ ರಿಂದ ಇನ್ನು ಹೆಚ್ಚಿನ ಸಾದನೆಗಳು ಆಗಲಿ ಎಂದು ಹಾರೈಸಿದ್ದಾರೆ.

ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಸಿ.ಕೆ.ಪುರ ಗ್ರಾಮದ ನಂದೀಶ್ ಬೇಲೂರಿನ ಸರಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಓದಿನ ಜೊತೆಗೆ ಸಂಗೀತದ ಮೇಲು ಆಸಕ್ತಿ ಬೆಳೆಸಿಕೊಂಡ ಈತ ಕಳೆದ ನಾಲ್ಕು ವರ್ಷಗಳಿಂದ ನರಸಿಂಹಸ್ವಾಮಿ ಯವರ ಗರಡಿಯಲ್ಲಿ ಸ್ಯಾಕ್ಸಾಫೋನ್ ಅಭ್ಯಾಸ ನಡೆಸುತ್ತಿದ್ದು ವಿವಿಧ ಪ್ರಕಾರಗಳನ್ನು ನುಡಿಸುವಲ್ಲಿ ಪಾಂಡಿತ್ಯ ಪಡೆದುಕೊಂಡಿದ್ದಾರೆ.

ಜಿಲ್ಲಾ ಮಕ್ಕಳ ಮತ್ತು ಅಭಿವೃದ್ಧಿ ಇಲಾಖೆಯ ನಿರ್ದೇಶಕರಾದ ಧರಣಿ ಕುಮಾರ್ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಿ ಗೌರವಿಸಿದ್ದಾರೆ.

Leave a Reply

Your email address will not be published. Required fields are marked *

× How can I help you?