ಚಿಕ್ಕಮಗಳೂರು-ನೇಚರ್ ಕನ್ಸರ್‌ವೇಷನ್ ಟ್ರಸ್ಟ್ ವತಿಯಿಂದ ನ.17 ರಂದು ಉಚಿತ ನೇತ್ರ,ದಂತಕ್ಷಯ ತಪಾಸಣಾ ಶಿಬಿರ

ಚಿಕ್ಕಮಗಳೂರು-ಪ್ರಸಾದ್ ನೇತ್ರಾಲಯ,ಉಡುಪಿ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ,ನೇಚರ್ ಕನ್ಸರ್‌ವೇಷನ್ ಟ್ರಸ್ಟ್ ವತಿಯಿಂದ ನ.17 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಅಂಡೆಛತ್ರ ಸಮೀಪದ ಸಾಯಿ ಡೆಂಟಲ್ ಕೇರ್‌ನಲ್ಲಿ ಉಚಿತ ನೇತ್ರ, ದಂತಕ್ಷಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಡಾ|| ಕೆ.ಸುಂದರಗೌಡ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಪಡುವ ರೋಗಿಗಳು ಶಿಬಿರದಲ್ಲಿ ತಪಾಸಣಾ ದಿನದಂದೇ ವೈದ್ಯರ ಜೊತೆಯಲ್ಲಿ ಹೋಗಲು ಸಿದ್ಧರಿರಬೇಕು.ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದ ಫಲಾನುಭವಿಗಳಿಗೆ ಉಚಿತ ಊಟ, ಸಾರಿಗೆ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಿ ವಾಪಸ್ ಕರೆದುಕೊಂಡು ಬರಲಾಗುವುದು ಎಂದರು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ : 9448186237, 9449896761,9945642669 ಯನ್ನು ಸಂಪರ್ಕಿಸಬಹುದಾಗಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

× How can I help you?