ಹೊಳೆನರಸೀಪುರ:ಸೆಸ್ಕ್ ಉಪ ವಿಭಾಗ ವ್ಯಾಪ್ತಿಯ ಹೊಳೆನರಸೀಪುರ. ಹಂಗರಹಳ್ಳಿ, ಅರಕಲಗೂಡು ಮತ್ತು ರಾಮನಾಥಪುರ ಉಪ ವಿಭಾಗದಲ್ಲಿ ಬೆಳಿಗ್ಗೆ 11 ಗಂಟೆಗೆ ಮಾಸಿಕ ವಿದ್ಯುತ್ ಗ್ರಾಹಕರ ಸಂವಾದ ಸಭೆಯನ್ನು ಆಯಾಯ ಉಪ ವಿಭಾಗದ ಕಚೇರಿ ಆವರಣದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ.
ಗ್ರಾಹಕರು ವಿದ್ಯುತ್ ಇಲಾಖೆಯ ಕುಂದು ಕೊರತೆ, ಬೀದಿ ದೀಪಗಳು, ಕುಡಿಯುವ ನೀರಿನ ಸ್ಥಾವರಗಳು ಹಾಗೂ ವಿದ್ಯುತ್ ಇಲಾಖೆಗೆ ಸಂಬಂಧ ಪಟ್ಟ ಇನ್ನಿತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮನವಿ ನೀಡಿ ಪರಿಹರಿಸಿಕೊಳ್ಳಿ ಎಂದು ಸೆಸ್ಕ್ನ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.