ಕೆ.ಆರ್.ಪೇಟೆ-ಇದೇ ಡಿಸೆಂಬರ್ 20, 21ಮತ್ತು 22ರಂದು ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರೂಪಿಸಿರುವ ಸಾಹಿತ್ಯ ಪರಿಷತ್ ಪ್ರಚಾರ ರಥವನ್ನು ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ, ಸಾರಂಗಿ ಮತ್ತು ಸಂತೇಬಾಚಹಳ್ಳಿ, ರಂಗನಾಥಪುರ ಕ್ರಾಸ್ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ವತಿಯಿಂದ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದರು.
ನೆರೆಯ ನಾಗಮಂಗಲ ತಾಲೂಕಿನ ಮೂಲಕ ಕೆ.ಆರ್.ಪೇಟೆ ತಾಲ್ಲೂಕಿಗೆ ಆಗಮಿಸಿದ ತಾಯಿ ಭುವನೇಶ್ವರಿಯ ಪ್ರಚಾರ ರಥವನ್ನು ಪೂಜೆ ಸಲ್ಲಿಸುವ ಮೂಲಕ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಚ್.ಆರ್.ಪೂರ್ಣಚಂದ್ರತೇಜಸ್ವಿ ಬರಮಾಡಿಕೊಂಡರು.
ಕಲಾ ತಂಡಗಳ ಪ್ರದರ್ಶನದೊಂದಿಗೆ ಶಾಲಾ ವಿದ್ಯಾರ್ಥಿಗಳು ಕನ್ನಡ ಧ್ವಜವನ್ನು ಬೀಸುತ್ತಾ ತಾಯಿ ಭುವನೇಶ್ವರಿಯ ಪ್ರಚಾರ ಯಾತ್ರೆಯಲ್ಲಿ ಪಾಲ್ಗೊಂಡರು.
ಸಾರoಗಿ ಗ್ರಾಮಕ್ಕೆ ಆಗಮಿಸಿದ ಸಮ್ಮೇಳನದ ರಥಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾಕ್ಷಿ ಹೊನ್ನೇಗೌಡ ಅವರು ಭುವನೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ ಸ್ವಾಗತಿಸಿದರು. ಉಪಾಧ್ಯಕ್ಷ ಸಿ.ಎಸ್.ರಾಜು, ಸದಸ್ಯರಾದ ಎನ್.ರಮೇಶ್, ಸಿ.ಎನ್.ಸೌಭಾಗ್ಯಕುಮಾರಸ್ವಾಮಿ, ಮಮತಾಕುಮಾರ್, ಕೆ.ಕೆ.ನಂಜೇಗೌಡ,ಆನಂದ್, ಜಿ.ಎನ್.ಕಿಟ್ಟಿ, ಸಣ್ಣತಾಯಮ್ಮ, ಮಂಜುನಾಥ್(ಮoಜೇಗೌಡ), ಮಹಾದೇವಿರಮೇಶ್, ಸುಲೋಚನಾರವಿ, ಮೀನಾಕ್ಷಿ ಪುರುಷೋತ್ತಮ್, ಹೇಮಾನವೀನ್, ಬಸವರಾಜು, ಗ್ರಾಮ ಪಂಚಾಯಿತಿ ಪಿಡಿಓ ಗಣೇಶ್, ಕಾರ್ಯದರ್ಶಿ ಶಂಕರ್, ಡಿಇಓ ಹೇಮಾ, ಮನ್‌ಮುಲ್ ಮಾಜಿ ನಿರ್ದೇಶಕ ನಂಜುoಡೇಗೌಡ, ಸಾರಂಗಿ ಮೊರಾರ್ಜಿ ಶಾಲೆಯ ಪ್ರಾಂಶುಪಾಲರು, ಸಾರಂಗಿ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಸಂತೇಬಾಚಹಳ್ಳಿ ಗ್ರಾಮಕ್ಕೆ ಆಗಮಿಸಿದ ರಥವನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಗಳಾ ಮಂಜೇಗೌಡ. ಸದಸ್ಯ ಮಂಜೇಗೌಡ, ಗ್ರಾ.ಪಂ ಕಾರ್ಯದರ್ಶಿ ಕೃಷ್ಣೇಗೌಡ, ಮಹಮದ್‌ಅಲಿಂ, ಸಂತೇಬಾಚಹಳ್ಳಿ ಗೆಳೆಯರ ಬಳಗದ ಅಧ್ಯಕ್ಷ ಗೌಡ ಜಯಕುಮಾರ್, ಕಾರ್ಯದರ್ಶಿ ಕೃಷ್ಣ, ಖಜಾಂಚಿ ಉಮೇಶರಾಜು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಮೋಹನಗೌಡ, ಮೊಗಣ್ಣಗೌಡ, ಹೆತ್ತಗೋನಹಳ್ಳಿ ಸುರೇಶ್, ತಾ.ಪಂ ಮಾಜಿಸದಸ್ಯರಾದ ರಾಜಾಹುಲಿ ದಿನೇಶ್, ಬಿಲ್ಲೇನಹಳ್ಳಿ ಕುಮಾರ್, ಹೋಟೆಲ್ ದಿನೇಶ್ ಸೇರಿದಂತೆ ಗ್ರಾ.ಪಂ ಸದಸ್ಯರುಗಳು ಪ್ರಚಾರ ರಥವನ್ನು ಸ್ವಾಗತಿಸಿದರು.
ಪ್ರಚಾರ ರಥದ ನೇತೃತ್ವ ವಹಿಸಿದ್ದ ಮಾತನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, 30 ವರ್ಷಗಳ ನಂತರ ಮತೊಮ್ಮೆ ಮಂಡ್ಯ ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನಡೆಯುತ್ತಿದೆ. ಕನ್ನಡ ನುಡಿ ಹಬ್ಬವನ್ನು ಜಿಲ್ಲೆಯ ಜನ ಸಂಭ್ರಮ ಮತ್ತು ಸಡಗರದಿಂದ ಆಚರಿಸಬೇಕು. ಜಿಲ್ಲೆಯ ಸಂಸ್ಕೃತಿ ಮತ್ತು ಹಿರಿಮೆ, ಗರಿಮೆಗಳನ್ನು ಎತ್ತಿಹಿಡಿಯುವ ಮೂಲಕ ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಕಾರಣೀಭೂತರಾಗಬೇಕು. ಕನ್ನಡ ನುಡಿ ಜಾತ್ರೆಗೆ ಜಿಲ್ಲೆಯ ಜನರನ್ನು ಆಹ್ವಾನಿಸಲು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಾದ್ಯಂತ ಪ್ರಚಾರ ರಥಯಾತ್ರೆ ನಡೆಸುತ್ತಿದೆ. ನೆರೆಯ ನಾಗಮಂಗಲ ತಾಲೂಕಿನಿಂದ ಕೆ.ಆರ್.ಪೇಟೆ ತಾಲೂಕಿಗೆ ರಥ ಆಗಮಿಸಿದೆ. ನವೆಂಬರ್ 15 (ಇಂದು)ರoದು ಪ್ರಚಾರ ರಥ ಸಂತೇಬಾಚಹಳ್ಳಿ, ಸಾರಂಗಿ, ರಂಗನಾಥಪುರ ಕ್ರಾಸ್, ಭಾರತೀಪುರ ಕ್ರಾಸ್, ಮತ್ತು ಅಘಲಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಂಚರಿಸಿ ಸಮ್ಮೇಳನದ ಬಗ್ಗೆ ಅರಿವು ಮೂಡಿಸಿದೆ ಎಂದರು.
ನ.16 ರ ಶನಿವಾರ ತಾಲೂಕಿನ ಐಕನಹಳ್ಳಿ, ಆನೆಗೊಳ, ಲಕ್ಷ್ಮೀಪುರ , ಮಾದಾಪುರ, ಮಂದಗೆರೆ ಮತ್ತು ದಬ್ಬೇಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಂಚರಿಸಲಿದೆ. ನವಂಬರ್ 17ರ ಭಾನುವಾರ ಚೌಡೇನಹಳ್ಳಿ, ಕಿಕ್ಕೇರಿ, ಮಾಕವಳ್ಳಿ, ಹಿರೀಕಳಲೆ, ಅಗ್ರಹಾರಬಾಚಹಳ್ಳಿ ಮತ್ತು ಕೆ.ಆರ್.ಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ರಥ ಸಂಚಾರ ನಡೆಯಲಿದೆ. ನ.18೮ರ ಸೋಮವಾರ ತಾಲೂಕಿನ ಸಿಂಧಘಟ್ಟ, ಅಗ್ರಹಾರಬಾಚಹಳ್ಳಿ, ಹರಳಹಳ್ಳಿ, ಶೀಳನೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರಥ ಯಾತ್ರೆ ನಡೆಯಲಿದೆ. ನವಂಬರ್ 19ರ ಮಂಗಳವಾರ ತಾಲೂಕಿನ ಮುರುಕನಹಳ್ಳಿ, ತೆಂಡೇಕೆರೆ, ಐಚನಹಳ್ಳಿ, ಬೂಕನಕೆರೆ, ಬಳ್ಳೇಕೆರೆ, ವಿಠಲಾಪುರ, ಮಡುವಿನಕೋಡಿ, ಹರಿಹರಪುರ, ಬಂಡಿಹೊಳೆ ಮತ್ತು ಬೀರವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರಥ ಸಂಚರಿಸಲಿದೆ. ನ.20ರ ಬುಧವಾರ ಅಕ್ಕಿಹೆಬ್ಬಾಳು, ಆಲಂಬಾಡಿ ಕಾವಲು, ಸೋಮನಹಳ್ಳಿ, ಗಂಜೀಗೆರೆ ಮತ್ತು ಬಲ್ಲೇನಹಳ್ಳಿ ಗ್ರಾಮ ಪಂಚಾಯತಿ ಸಂಚರಿಸಲಿರುವ ಪ್ರಚಾರ ರಥ ಅನಂತರ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದ ಮೂಲಕ ಪಾಂಡವಪುರ ತಾಲೂಕನ್ನು ಪ್ರವೇಶಿಸಲಿದೆ ಎಂದು ಪೂರ್ಣಚಂದ್ರತೇಜಸ್ವಿ ತಿಳಿಸಿದರು.
ಡಿಸಂಬರ್ ಮಾಹೆಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನಿಂದ ಜನಸಾಮಾನ್ಯರು, ರೈತಬಾಂಧವರು ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಸಾಪ ಪದಾಧಿಕಾರಿಗಳು ಹಾಗೂ ಕನ್ನಡ ಭಾಷಾಭಿಮಾನಿಗಳು ಭಾಗವಹಿಸಿ ಪ್ರಚಾರ ರಥವನ್ನು ಅದ್ದೂರಿಯಾಗಿ ಸ್ವಾಗತಿಸಿದರು.
————-ಶ್ರೀನಿವಾಸ್ ಕೆ ಆರ್ ಪೇಟೆ