ಕೊರಟಗೆರೆ:-ಕ್ಯಾಮೇನಹಳ್ಳಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಸೌಮ್ಯ ಬಿ ಜಗದೀಶ್ ಆಯ್ಕೆಯಾಗಿದ್ದಾರೆ.
ಎರಡನೇ ಅವಧಿಗೆ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಸೌಮ್ಯ ಬಿ ಜಗದೀಶ್ ರವರಿಗೆ ಪ್ರತಿಸ್ಪರ್ದಿಯಾಗಿ ಯಾರು ನಾಮಪತ್ರ ಸಲ್ಲಿಸದ ಕಾರಣ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದ ತಹಸೀಲ್ದಾರ್ ಕೆ.ಮಂಜುನಾಥ್ ಘೋಷಣೆ ಮಾಡಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಸೌಮ್ಯ.ಬಿ.ಜಗದೀಶ್, ನನ್ನ ಆಯ್ಕೆಗೆ ಸಹಕರಿಸಿದ ಸರ್ವ ಸದಸ್ಯರಿಗೂ ಹಾಗು ಡಾ ಜಿ ಪರಮೇಶ್ವರ್ ಅವರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ.ಅತಿ ಹೆಚ್ಚು ಮಹಿಳೆಯರೇ ಇರುವ ಈ ಪಂಚಾಯಿತಿಯಿಂದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ನನಗೆ ತುಂಬಾ ಸಂತೋಷ ತಂದಿದೆ.ಎಲ್ಲಾ ಸದಸ್ಯರುಗಳ ಸಲಹೆಗಳನ್ನು ಪಡೆದು ಗ್ರಾಮ ಪಂಚಾಯತಿಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಭರವಸೆಯನ್ನು ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್ ನಾರಾಯಣ ಮಾತನಾಡಿ,ಸೌಮ್ಯ ಜಗದೀಶ್ ಅವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಅಭಿನಂದನೆಗಳನ್ನು ತಿಳಿಸುತ್ತೇವೆ.ಜಿಲ್ಲಾ ಉಸ್ತುವರಿ ಸಚಿವರಾದ ಡಾ. ಜಿ. ಪರಮೇಶ್ವರ್ ಅವರ ಸಹಕಾರದೊಂದಿಗೆ ಗ್ರಾಪಂಗೆ ಸೇರುವ ಎಲ್ಲ ಹಳ್ಳಿಗಳ ಅಭಿವೃದ್ಧಿಗೆ ಅತಿ ಹೆಚ್ಚು ಅನುದಾನಗಳನ್ನ ಹಾಕಿಸಿಕೊಂಡು ಅಭಿವೃದ್ಧಿಯ ಕೆಲಸಗಳನ್ನು ಮಾಡುತ್ತೇವೆ ಎಂದರು.
ಇದೆ ಸಂದರ್ಭದಲ್ಲಿ ಗ್ರಾಪಂ ಪಿಡಿಒ ರವಿಕುಮಾರ್, ಮಾಜಿ ಅಧ್ಯಕ್ಷ ನಾಗರಾಜು, ಸದಸ್ಯರಾದ ಸಿದ್ದಗಂಗಮ್ಮ, ಹನುಮಂತರಾಜು, ಲಕ್ಷ್ಮಿನರಸಿಂಹಮೂರ್ತಿ, ಸೌಮ್ಯ, ರಾಮಕ್ಕ, ಸುನಂದ, ನಾಗಮಣಿ, ಅನುರಾಧ, ಪುಟ್ಟರಾಜು, ಹರೀಶ್ಕುಮಾರ್, ಶಿವಕುಮಾರ್, ಲಕ್ಷ್ಮಿಬಾಯಿ, ವೆಂಕಟಲಕ್ಷ್ಮಮ್ಮ, ರತ್ನಮ್ಮ ಮುಖಂಡರಾದ ಮೈಲಾರಪ್ಪ, ನಾಗಭೂಷಣ್ ,ನಾರಾಯಣಪ್ಪ, ಕಾಳಿಚರಣ್ ,ಬೈರೇಶ್, ಮಂಜುನಾಥ್, ಉಮಣ್ಣ, ನಂಜುಂಡಯ್ಯ, ನಟರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
——-ಶ್ರೀನಿವಾಸ್ ಕೊರಟಗೆರೆ