ಮೂಡಿಗೆರೆ/ಗೋಣಿಬೀಡು-ಬಾಯಲ್ಲಿ ನೂರು ಭಾಷೆ ಇದ್ದರೂ ಹೃದಯದ ಭಾಷೆ ಕನ್ನಡವಾಗಿರಲಿ-ಶಿವಾನಂದಸ್ವಾಮಿ

ಮೂಡಿಗೆರೆ-ಬಾಯಲ್ಲಿ ನೂರು ಭಾಷೆ ಇದ್ದರೂ ಹೃದಯದ ಭಾಷೆ ಒಂದೇ ಅದು ಕನ್ನಡ ಎಂಬ ಕವಿವಾಣಿಯಂತೆ, ನಮ್ಮ ವ್ಯವಹಾರಕ್ಕೆ ಅನೇಕ ಭಾಷೆ ಬಳಸಬಹುದು. ಆದರೆ ನಮ್ಮ ಹೃದಯ ಕ್ಕೆ ಸಂಸ್ಕಾರ ನೀಡುವುದು ನಮ್ಮ ಮಾತೃಭಾಷೆ ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನoದಸ್ವಾಮಿ ಹೇಳಿದರು.

ತಾಲ್ಲೂಕಿನಲ್ಲಿ ಗೋಣಿಬೀಡು ಹೊಯ್ಸಳ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಸಿರಿಗನ್ನಡ ವೇದಿಕೆ ಆಶ್ರಯದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ “ನುಡಿನಿತ್ಯೋತ್ಸವ ಹಾಗೂ ಕನ್ನಡ ಗೀತ ಗಾಯನ “ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡಕ್ಕೆ 2500ವರ್ಷಗಳ ಪ್ರಾಚೀನ ಇತಿಹಾಸವಿದೆ. ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ಅದು ನಮ್ಮ ಕನ್ನಡ ಎಂದರು.

ಮೈಸೂರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ರವರು ಅಭಿನಂದನೆ ಸ್ವೀಕರಿಸಿ ಮಾತನಾಡಿ, ನಮ್ಮ ಮನಸ್ಸಿನಲ್ಲಿ ಕನ್ನಡ ಉಳಿಸಿಕೊಳ್ಳುವ ಇತರ ಭಾಷೆ ಗಳನ್ನು ಗೌರವಿಸುವ ರೂಢಿ ಯನ್ನು ಬೆಳಸಿಕೊಂಡಾಗ ಮಾತ್ರ ಕನ್ನಡ ಭಾಷೆಯ ಅಸ್ಮಿತೆ ಉಳಿಯುತ್ತದೆ ಎಂದು ತಿಳಿಸಿದರು.

ಸಿರಿಗನ್ನಡ ವೇದಿಕೆ ಪ್ರಧಾನ ಕಾರ್ಯದರ್ಶಿ ಡಾ.ಮೋಹನ್ ರಾಜಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಬೇಕಾದರೆ ಕನ್ನಡ ಸಾಹಿತ್ಯ ವನ್ನು ಪ್ರತಿಯೊಬ್ಬ ಕನ್ನಡಿಗನೂ ಓದಬೇಕು. ಕಲೆಗಳಿಗೆ ಪ್ರೋತ್ಸಾಹ ನೀಡಬೇಕು. ಈ ಮೂರು ಕೆಲಸಗಳನ್ನು ಮಾಡಿದಾಗ ಮಾತ್ರವೇ ಸಾವಿರಾರು ವರ್ಷ ಇತಿಹಾಸ ಹೊಂದಿರುವ ಕನ್ನಡ ಭಾಷೆ ಬೆಳೆಯಲು ಸಾಧ್ಯ ಎಂದರು.

ಚಲನಚಿತ್ರ ನಟ ಧರ್ಮೆಂದ್ರ ಕನ್ನಡ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ ಮಾತನಾಡಿದರು.ನಂತರ ಇವರಿಗೆ “ಹೊಯ್ಸಳ ಪುಷ್ಪ ಕನ್ನಡ ರತ್ನ “ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಕುಂದೂರು ಅಶೋಕ್ ಕರ್ನಾಟಕದ ಹಿರಿಮೆ ಹಾಗೂ ಕನ್ನಡ ನಮ್ಮ ಹೆಮ್ಮೆ ಬಗ್ಗೆ ಉಪನ್ಯಾಸ ನೀಡಿದರು.

ಜಿಲ್ಲಾ ಸಿರಿಗನ್ನಡ ವೇದಿಕೆ ಅಧ್ಯಕ್ಷ ಎಂ.ಆರ್.ಪ್ರಕಾಶ್, ತಾಲ್ಲೂಕು ಅಧ್ಯಕ್ಷ ಎಂ. ಆರ್.ಪೂರ್ಣೇಶ್, ಸಾಹಿತಿ.ಡಿ. ಎಂ.ಮoಜುನಾಥ್‌ಸ್ವಾಮಿ, ಜೇಸಿಐ ಗೋಣಿಬೀಡು ಹೊಯ್ಸಳ ಅಧ್ಯಕ್ಷ ಹೆಚ್.ಜಿ.ಆದರ್ಶ್, ಕಾರ್ಯದರ್ಶಿ ಬಿ.ಎಂ.ಜಗತ್. ಮಾತನಾಡಿದರು.

ಈ ಸಂದರ್ಭದಲಿ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ್ಷೆ ಉಮಾ ಮೋಹನ್, ಟ್ರಸ್ಟಿ ರಾಜಣ್ಣ, ಬಕ್ಕಿ ಮಂಜುನಾಥ್, ಶಿಕ್ಷಕಿ ಯಾಸ್ಮಿನ್ ಸುಲ್ತಾನ್, ಹೊಯ್ಸಳ ಪ್ರೌಢ ಶಾಲೆ ಶಿಕ್ಷಕರಾದ ಜಗನ್ನಾಥ್, ವೇಣಿ ಚಂದ್ರಶೇಖರ್, ಗಂಗಾಧರಪ್ಪ, ಮಂಜುನಾಥ್ ಮುಖಂಡರುಗಳಾದ ಶಿವಕುಮಾರ್, ಹರೀಶ್, ಮಂಜು ನಾಥ್, ಕು|| ಆಶಿಕಾ ಹಾಗೂ ಮುಂತಾ ದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?