ಚಿಕ್ಕಮಗಳೂರು-ಜಾತ್ಯಾತೀತ ಹಾಗೂ ಧರ್ಮಾತೀತವಾದ ಜಾನಪದ ಸೊಗಡಿಗೆ ಎಂದಿಗೂ ಸಾವಿಲ್ಲ-ಡಾ.ಜಾನಪದ ಎಸ್.ಬಾಲಾಜಿ

ಚಿಕ್ಕಮಗಳೂರು-ಜಾತ್ಯಾತೀತ ಹಾಗೂ ಧರ್ಮಾತೀತವಾದ ಜಾನಪದ ಸೊಗಡಿಗೆ ಎಂದಿಗೂ ಸಾವಿಲ್ಲ. ನಿರಂತರ ಬದಲಾವಣೆಯತ್ತ ಹೆಜ್ಜೆ ಹಾಕುವ ಜಾನಪದ ಶಕ್ತಿ ಪ್ರಪಂಚದ ಎಲ್ಲಾ ಧರ್ಮ ದಲ್ಲಿ ವಿಭಿನ್ನವಾಗಿ ಪಸರಿಸಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಜಾನಪದ ಎಸ್.ಬಾಲಾಜಿ ಹೇಳಿದರು.

ನಗರದ ಕೆಂಪನಹಳ್ಳಿಯ ಆಶಾಕಿರಣ ಅಂಧಮಕ್ಕಳ ಪಾಠಶಾಲೆ ಸಮೀಪದ ಕನ್ನಡ ಭವನದಲ್ಲಿ ತಾಲ್ಲೂಕು ಕನ್ನಡ ಜಾನಪದ ಪರಿಷತ್ ಘಟಕ ಪದಗ್ರಹಣ ಹಾಗು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪೂರ್ವಿಕರ ಆಡುಭಾಷೆಯಲ್ಲಿ ಜನಿಸಿದ ಜಾನಪದ ಗೀತೆಗಳು, ತತ್ವಪದಗಳು ಇಂದಿನ ಕಾಲಮಾನಕ್ಕೆ ಪ್ರಸ್ತುತವಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರಚಲಿತದಲ್ಲಿರುವ ಮೊಬೈಲ್, ಕಂಪ್ಯೂಟರ್‌ನಿoದಲೂ ಜಾನಪದ ಮೂಲಬೇರನ್ನು ಅಳಿಸಲು ಸಾಧ್ಯವಿಲ್ಲ ಎಂದ ಅವರು ಬಾಲ್ಯದಲ್ಲೇ ಜಾನಪದ ಸಂಸ್ಕೃತಿಯ ಪರಿಚಯಿಸಬೇಕಷ್ಟೇ ಎಂದು ಹೇಳಿದರು.

ಹೃದಯ ಶ್ರೀಮಂತಿಕೆ, ಕೌಟುಂಬಿಕ ಸಾಮರಸ್ಯ ಸೇರಿದಂತೆ ಬದುಕಿನ ಶ್ರೀಮಂತಿಕೆಯನ್ನು ಕಟ್ಟಿಕೊಡುವ ದೇಶದ ಮೊದಲ ಮೂಲ ಪರಂಪರೆ ಜಾನಪದ ಸಾಹಿತ್ಯ ಹಾಗೂ ಸಂಸ್ಕೃತಿ. ಹೀಗಾಗಿ ಪರಂಪರೆ ಉಳಿಸಿ, ಬೆಳೆಸಿ ಅದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕಾರ್ಯ ಜಾನಪದಾಸಕ್ತರ ಮೇಲಿದೆ ಎಂದು ಎಂದು ತಿಳಿಸಿದರು.

ಜನರಿಂದ, ಜನರಿಗಾಗಿ, ಸಾಮಾನ್ಯ ಜನರೇ ರಚಿಸಿದ ಸಾಹಿತ್ಯ ಜನಪದವಾಗಿದೆ. ಬದುಕುವ ಕಲೆಯನ್ನು ಕಲಿಸಿಕೊಡುತ್ತದೆ.ಜಾನಪದ ಸಂಸ್ಕೃತಿ ಉಳಿಸಿ ಬೆಳೆಸಬೇಕು ಎಂಬ ಉದ್ದೇಶದಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ತಾಲ್ಲೂಕು, ಮಹಿಳಾ ಹಾಗೂ ಯುವ ಘಟಕಗಳನ್ನು ಸ್ಥಾಪಿಸಿ ಸ್ಥಳೀಯ ಕಲಾಸಕ್ತರನ್ನು ಪ್ರೇರೇಪಿಸಲಾಗುತ್ತಿದೆ ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಜಾನಪದ ಪರಿಚಯಿಸುವ ನಿಟ್ಟಿನಲ್ಲಿ ಸಭೆ ಅಥವಾ ಸಮಾರಂಭ ನಡೆಸಿದರೆ ಸಾಲದು. ಪ್ರತಿ ಹಳ್ಳಿಗಳಲ್ಲಿ ಗ್ರಾಮ ಸಮ್ಮೇಳನ ಆಯೋಜಿಸಿ ಸ್ಥಳೀಯ ಕಲಾವಿದರ ನ್ನು ಪ್ರೋತ್ಸಾಹಿಸಬೇಕು. ಕಲೆ ಎಂಬುದು ಮನೆಯಲ್ಲಿಟ್ಟ ಬಂಗಾರವಾಗದೇ, ಕಬ್ಬಿಣದಂತ ಕುಡುಕೋಲಾಗಿ ಎಲ್ಲೆಡೆ ಬೆಳೆಸುವ ಕಲೆಯಾಗಬೇಕು ಎಂದು ತಿಳಿಸಿದರು.

ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು ಕುಣಿತ, ಬಯಲಾಟ, ದೊಡ್ಡಾಟ ಮುಂತಾದ ವಿವಿಧ ಪ್ರಕಾರಗಳನ್ನು ನಮ್ಮ ಕನ್ನ ಡ ಜಾನಪದ ಸಂಸ್ಕೃತಿಯಲ್ಲಿ ಕಾಣಬಹುದು. ಕನ್ನಡ ಜಾನಪದ ಸಂಸ್ಕೃತಿಯು ಒಂದು ಭಾಗವಾದ ಜಾನ ಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿದೆ ಎಂದರು.

ನೂತನ ತಾಲ್ಲೂಕು ಅಧ್ಯಕ್ಷ ಅಶೋಕ್ ರಾಜರತ್ನಂ ಮಾತನಾಡಿ, ಇತ್ತೀಚೆಗೆ ಸಿನಿಮಾ ಚಿತ್ರಗೀತೆಗಳು ಸಮಾಜದಲ್ಲಿ ಪ್ರಚಲಿತದಲ್ಲಿದ್ದು ಅವುಗಳನ್ನು ಮೀರಿಸುವಂತೆ ಜಾನಪದ ಗೀತೆಗಳಿಗೆ ಒತ್ತು ಕೊಡುವ ಕೆಲಸ ವಾಗಬೇಕು. ಆ ನಿಟ್ಟಿನಲ್ಲಿ ಪೂರ್ವಿಕರ ಜಾನಪದ ತೇರನ್ನು ಮುಂದಿನ ಪೀಳಿಗೆಗೆ ಕರೆದೊಯ್ಯುವ ಜವಾ ಬ್ದಾರಿಯನ್ನು ಪ್ರತಿಯೊಬ್ಬರು ವಹಿಸಿಕೊಂಡು ಮುನ್ನೆಡೆಯಬೇಕು ಎಂದು ಹೇಳಿದರು.

ಕಜಾಪ ಜಿಲ್ಲಾ ಖಜಾಂಚಿ ಹೆಚ್.ಸಿ.ವಿಜಯ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸ್ಥಳೀಯ ಕಲಾವಿದರು, ಸಾಹಿತ್ಯಾಸಕ್ತರು, ಜಾನಪದ ಪದಗಳ ಒಳಗೊಂಡಿರುವ ವ್ಯಕ್ತಿಗಳನ್ನು ಗುರುತಿಸ ಲು ನಿರ್ಮಾಣಗೊಂಡಿರುವುದೇ ಜಾನಪದ ಪರಿಷತ್ ಎಂದ ಅವರು ಎಲ್ಲರನ್ನು ಒಗ್ಗಟ್ಟಿನಿಂದ ಸೇರಿಸಿ ಜನ ಪದವನ್ನು ನಾಡಿಗೆ ಪರಿಚಯಿಸುತ್ತಿದೆ ಎಂದರು.

ತಾಲ್ಲೂಕು ಪದಾಧಿಕಾರಿಗಳ ಆಯ್ಕೆ :

ತಾಲ್ಲೂಕು ಅಧ್ಯಕ್ಷರಾಗಿ ಅಶೋಕ್ ರಾಜರತ್ನಂ, ಕಾರ್ಯದರ್ಶಿ ಬಿ.ಜಿ.ಮಧು, ಖಜಾಂಚಿ ಎಂ.ಪಿ.ಜಯರಾಮ್, ಜಂಟಿ ಕಾರ್ಯದರ್ಶಿ ಜಿ.ಹನುಮಂತು, ಪತ್ರಿಕಾ ಕಾರ್ಯ ದರ್ಶಿ ಎ.ಶ್ರೀನಾಥ್, ಸಂಘಟನಾ ಕಾರ್ಯದರ್ಶಿ ಎನ್.ಎಂ.ಮಹೇಶ್, ಸಂಚಾಲಕ ಮಹೇಂದ್ರ, ಸದಸ್ಯರು ಗಳಾಗಿ ರಾಕೇಶ್ ಸಿಂಗ್, ಹರ್ಷಿತ್, ಸಮ್ಮಿತ್, ದೇವರಾಜು, ಕುಮಾರೇಶನ್, ದರ್ಶನ್ ಆಯ್ಕೆಯಾದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಜಾಪ ಜಿಲ್ಲಾಧ್ಯಕ್ಷ ಓಣಿತೋಟ ರತ್ನಾಕರ್ ವಹಿಸಿದ್ದರು.

ಈ ಸಂದ ರ್ಭದಲ್ಲಿ ಸಾಂಸ್ಕೃತಿಕ ರಾಯಭಾರಿ ನಾಗರಾಜ್‌ರಾವ್ ಕಲ್ಕಟ್ಟೆ, ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ವೆಂಕಟೇಶ್, ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಾಂತಮೂರ್ತಿ, ರಂಗಕರ್ಮಿ ರವಿಕುಮಾರ್, ಚಲನಚಿತ್ರ ನಿರ್ದೇಶಕ ಜಯರಾಮ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *

× How can I help you?