ಮೈಸೂರು-ಶಾರದಾ ವಿಲಾಸ ಪದವಿ ಪೂರ್ವ ಕಾಲೇಜಿನಲ್ಲಿ ಸಂತ ಶ್ರೇಷ್ಠ ಭಕ್ತ ಕನಕದಾಸರ 537ನೇ ಜಯಂತೋತ್ಸವ ಆಚರಣೆ

ಮೈಸೂರು-ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಪದವಿ ಪೂರ್ವ ಕಾಲೇಜಿನಲ್ಲಿ ಸಂತ ಶ್ರೇಷ್ಠ ಭಕ್ತ ಕನಕದಾಸರ 537ನೇ ಜಯಂತೋತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಸಿ.ಕೆ.ಅಶೋಕ ಕುಮಾರ್ ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಸಾರ್ವಕಾಲಿಕ ಸತ್ಯವನ್ನು ಸಾರಿದ ಮಹಾನ್ ಶ್ರೇಷ್ಠ ಭಕ್ತರು ಕನಕದಾಸರು. ಭಕ್ತಿಯ ಪರಕಾಷ್ಠೆಯನ್ನು ಮೆರೆದ ಸಂತರಲ್ಲಿ ಕನಕದಾಸರು ಮೊದಲಿಗರು.

ಕನಕದಾಸರು ಹರಿದಾಸ ಸಾಹಿತ್ಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದವರು. ಅಂದಿನ ಕಾಲದಲ್ಲಿಯೇ ಜಾತಿ, ಮೂಢನಂಬಿಕೆ ಹೋಗಲಾಡಿಸಲು ಕೀರ್ತನೆಗಳ ಮೂಲಕ ಜಾಗೃತಿ ಮೂಡಿಸಿದ ಮಹಾನ್ ಚೇತನ ಎಂದು ಬಣ್ಣಿಸಿದರು.

ಕಾಲೇಜಿನ ಕನ್ನಡ ಉಪನ್ಯಾಸಕರಾದ ರಾಜೇಂದ್ರಪ್ರಸಾದ್ ಹೊನ್ನಲಗೆರೆ ಅವರು ಮಾತನಾಡಿ, ಕನಕದಾಸರು ರಚಿಸಿದ ರಾಮಧಾನ್ಯ ಚರಿತೆ, ಹರಿಭಕ್ತಿ ಸಾರ, ಮೋಹನ ತರಂಗಿಣಿ, ನಳ ಚರಿತೆ ಎಂದೆoದಿಗೂ ಅಮರವಾದ ಅನನ್ಯ ಕೃತಿಗಳು.ಸಮಾಜದಲ್ಲಿ ಸಮಾನತೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಕನಕದಾಸರು ಕುಲವನ್ನು ಖಂಡಿಸುವಲ್ಲಿ ಬಸವೇಶ್ವರರು ಹಾಗೂ ಸರ್ವಜ್ಞರಷ್ಟೇ ಧೈರ್ಯವನ್ನು ತೋರಿಸಿದ್ದಾರೆ.

ಕುಲಾಚಾರವನ್ನು ಮಾಡುವ ಹೀನ ಮನಸ್ಸಿನವರಿಗೆ ಕುಲ ಕುಲವೆಂದು ಹೊಡೆದಾಡದಿರಿ ಎಂದು ಎಚ್ಚರಿಸಿದ್ದಾರೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಹಿರಿಯ ಉಪನ್ಯಾಸಕರಾದ ಜಿ.ವೆಂಕಟರಾಮು, ಶಿಲ್ಪ,ಡಾ.ಡಿ.ಸಿ.ಉಮೇಶ್, ಡಾ.ಲಾವಣ್ಯ, ಮುಷೀರ್, ಪ್ರವೀಣ್ ಕುಮಾರ್, ವಿಂದ್ಯಾ ಬಿ.ಪ್ರಸಾದ್, ಮಧುರ, ಶಶಿಕಲಾ, ಪ್ರವೀಣ್ ಕುಮಾರ್, ಹೆಗಡೆ, ದೀಪಿಕ, ಭೂಮಿಕಾ, ಮಂಜುನಾಥ್, ಪ್ರಕಾಶ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?