ಮೈಸೂರು-ಕೆ.ಜಿ.ಕೊಪ್ಪಲಿನ ಕನ್ನಡ ಗೆಳೆಯರ ಬಳಗದಲ್ಲಿ ಕನಕದಾಸ ಜಯಂತಿ ಆಚರಣೆ

ಮೈಸೂರು-ಕನ್ನೇಗೌಡನಕೊಪ್ಪಲಿನ ಕನ್ನಡ ಗೆಳೆಯರ ಬಳಗದಲ್ಲಿ ಇಂದು ಕನಕದಾಸ ಜಯಂತಿಯನ್ನು ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಮಾಜ ಸೇವಕ,ಕ್ರೀಡಾಪಟು ಧನಗಳ್ಳಿ ಡಿ.ಶಿವಶಂಕರ್ ಅವರು ದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮಾತನಾಡಿದರು.

ದೇವರು ಮಾನವರ ನಡುವೆ ಕಟ್ಟಿದ್ದ ಕೃತಕ ಗೋಡೆಗಳನ್ನು ಮೀರಿ,ಬೆಳೆದ ಕ್ರಾಂತಿ ಬೆಳಕು ಕನಕದಾಸರು. ಕನಕದಾಸರು ಭಕ್ತಿಯ ಶ್ರೇಷ್ಠತೆಗೆ ಹೆಸರಾದವರು. ಅವರ ಕೃತಿ ರಾಮಧಾನ್ಯದ ಕಣಕಣದಲ್ಲಿ ಶ್ರೇಷ್ಠತೆಗೆ ಹೊಸ ವೈಚಾರಿಕತೆಗೆ ಬೆಳಕನ್ನು ತೋರಿದ ಭಕ್ತ ಶ್ರೇಷ್ಠರು ಎಂದರಲ್ಲದೇ ,ಮನುಷ್ಯ ಕುಲದ ಅನಿಷ್ಠವೆಂದು ಜಾತಿಯನ್ನು ವಿರೋಧಿಸಿದವರು. ಜಾತಿ, ಮತ, ಕಾಲ, ಧರ್ಮವನ್ನು ಮೀರಿ ನಿಲ್ಲುವ ಸಾಂಸ್ಕೃತಿಕ ಸಂದೇಶ ಚಿಂತಕರಾಗಿ ದಾಸಶ್ರೇಷ್ಠರನ್ನು ಕಾಣಬಹುದು ಎಂದರು.

ಕನ್ನಡ ಗೆಳೆಯರ ಬಳಗದ ಗೌರವ ಅಧ್ಯಕ್ಷರಾದ ಬಿ.ಭೈರಪ್ಪ ಅವರು ಮಾತನಾಡಿ,ಕನಕದಾಸರ ಕೀರ್ತನೆಗಳು ಸರ್ವ ಕಾಲಗಳಿಗೂ ಶ್ರೇಷ್ಠತೆಯನ್ನು ತರುತ್ತದೆ. ದಾಸ ಸಾಹಿತ್ಯದಲ್ಲಿ ಮೆರುಗನ್ನು ತೋರಿಸಿದ ಸಂತರು ಕನಕದಾಸರು. ಯುವ ಜನಾಂಗ ಕನಕದಾಸರ ಕೀರ್ತನೆಗಳನ್ನು ಓದುವುದರ ಮೂಲಕ ಅವರ ಜೀವನದ ಆದರ್ಶಗಳನ್ನು ಅಳವಡಿಸಿ ಕೊಳ್ಳಬೇಕೆಂದು ತಿಳಿಸಿದರು.

Leave a Reply

Your email address will not be published. Required fields are marked *

× How can I help you?