ಕೆ.ಆರ್.ಪೇಟೆ-ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಧರ್ಮಸ್ಥಳ ಸಂಸ್ಥೆ ರಾಜ್ಯಾದ್ಯಂತ ಮದ್ಯ ವರ್ಜನ ಶಿಬಿರ ಆಯೋಜಿಸಿ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದೆ.ಬೂಕನಕೆರೆ ಗ್ರಾಮಸ್ಥರು ಇದರ ಸದುಪಯೋಗ ಪಡಿಸಿಕೊಂಡು ಮದ್ಯಪಾನ ಸೇವನೆಯನ್ನು ತ್ಯಜಿಸಿ ಕುಟುಂಬದ ಸದಸ್ಯರ ಜೊತೆ ಅನೋನ್ಯವಾಗಿ ಜೀವನ ನೆಡೆಸುವಂತೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಸಲಹೆ ನೀಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೆ.ಆರ್.ಪೇಟೆ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 1887ನೇ ಮದ್ಯವರ್ಜನ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮದ್ಯವರ್ಜನ ಶಿಭಿರಗಳ ಮೂಲಕ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಜನಸಾಮಾನ್ಯರ ಬದುಕುಗಳನ್ನು ಹಸನಾಗಿಸಲು ಪ್ರಯತ್ನಿಸುತ್ತಿರುವುದು ಶ್ಲಾಘನೀಯವಾದದ್ದು ಎಂದರು.
ಜಿಲ್ಲಾ ನಿರ್ದೇಶಕರಾದ ಕೇಶವ ದೇವಾಂಗ ರವರು ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರ ಆರ್ಥಿಕ ಸ್ಥಿತಿ ಉತ್ತಮಗೊಳಿಸಿ ಸ್ವಾವಲಂಬನೆ ಜೀವನ ನಡೆಸುವಂತೆ ಮಾಡಲು ಶ್ರಮ ವಹಿಸುತ್ತಿದೆ.
ಮದ್ಯದ ಚಟದಿಂದ ಹಲವಾರು ಸಂಸಾರಗಳು ಕಷ್ಟದ ಪರಿಸ್ಥಿತಿಯಲ್ಲಿವೆ. ಇದನ್ನು ಮದ್ಯವರ್ಜನ ಶಿಬಿರದಂತಹ ಕಾರ್ಯಕ್ರಮ ನಡೆಸಿ ಕುಡಿತವನ್ನು ಬಿಡಿಸುವ ಕಾರ್ಯಕ್ಕೆ ಮುಂದಾಗಿರುವುದಾಗಿ ಶಿಬಿರದ ಉದ್ದೇಶಗಳನ್ನು ತಿಳಿಸಿದರು.
ಸಮಾಜ ಸೇವಕರು ಹಾಗೂ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ಆರ್. ಟಿ. ಓ. ಮಲ್ಲಿಕಾರ್ಜುನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ದುಶ್ಚಟಗಳು ಮನುಷ್ಯನನ್ನು ಆರ್ಥಿಕವಾಗಿ ಹಾಳು ಮಾಡುವ ಜೊತೆಗೆ ದುಶ್ಚಟಕ್ಕೆ ದಾಸನಾದ ವ್ಯಕ್ತಿಗಳ ಆರೋಗ್ಯವನ್ನು ಕುಂದಿಸುತ್ತದೆ.ಸಂಸಾರದ ಬಗ್ಗೆ, ಹೆಂಡತಿ,ಮಕ್ಕಳ ಬಗ್ಗೆ,ತಮ್ಮ ವೃದ್ದ ತಂದೆ ತಾಯಿಗಳ ಬಗ್ಗೆ ಯೋಚನೆ ಮಾಡಿದರೆ ನೀವು ಯಾವುದೇ ಕಾರಣಕ್ಕೂ ಮಧ್ಯಪಾನ ಮಾಡುವುದಿಲ್ಲ. ಪ್ರತಿ ಯೊಬ್ಬರೂ ಮಧ್ಯಪಾನ, ಧೂಮಪಾನದಿಂದ ದೂರವಿರಬೇಕು. ಈ ಮೂಲಕ ನಿಮ್ಮ ಹಾಗೂ ಕುಟುಂಬ ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಆರ್.ಟಿ.ಓ. ಮಲ್ಲಿಕಾರ್ಜುನ್ ತಿಳಿಸಿದರು.
1887ನೇ ಮದ್ಯ ವರ್ಜನ ಶಿಭಿರವನ್ನು ಶಿಬಿರ ವ್ಯವಸ್ಥಾಪನಾ ಸಮಿತಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್(ರಿ),ಕೆ.ಆರ್.ಪೇಟೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ), ಬೆಳ್ತಂಗಡಿ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಚನ್ನರಾಯಪಟ್ಟಣ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ ಉಜಿರೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮಪಂಚಾಯತಿ ಅಧ್ಯಕ್ಷರಾದ ಬಿ.ಆರ್.ಶ್ಯಾಮ್ ಪ್ರಸಾದ್ ವಹಿಸಿದ್ದರು ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ.ಆರ್. ಶ್ಯಾಂಪ್ರಸಾದ್,ಬಿ.ಟಿ. ವೆಂಕಟೇಶ್, ಬಿ.ಜವರಾಯಿಗೌಡ, ಹುಲ್ಲೇಗೌಡ, ಗ್ರಾಮಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ಕೇಶವ್ ದೇವಾಂಗ,ಶೀಳನೆರೆ ಅಂಬರೀಷ್, ಯೋಜನಾಧಿಕಾರಿಗಳಾದ ತಿಲಕ್ ರಾಜ್,ಡಾ.ವೆಂಕಟೇಶ್, ಕೆ.ಎನ್.ರಾಜೇಶ್ ನಿಕಟಪೂರ್ವ ಅಧ್ಯಕ್ಷರು ಜನಜಾಗೃತಿ ವೇದಿಕೆ, ಸದಸ್ಯರಾದ ಪದ್ಮ, ನರಸಿಂಹರಾಜು,ಪ್ರಕಾಶ್ ಆಚಾರ್ಯ, ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ಅಧ್ಯಕ್ಷ ಗಂಜಿಗೆರೆ ಮಹೇಶ್, ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಆರ್.ಟಿ.ಓ. ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ಸ್ವಯಂ ಸೇವಕರು, ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಗಳು, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಗ್ರಾಮಸ್ಥರು ಸೇರಿದಂತೆ ಮತ್ತಿತರು ಭಾಗವಹಿಸಿದ್ದರು.
—————ಶ್ರೀನಿವಾಸ್ ಕೆ ಆರ್ ಪೇಟೆ