ಹೊಳೆನರಸೀಪುರ:ವಿದ್ಯಾರ್ಥಿಗಳು ಅತ್ಯುತ್ತಮ ಹಾಗೂ ಉನ್ನತ ವಿದ್ಯಾಭಾಸದಿಂದ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು.ನಮ್ಮ ಕಾಲೇಜಿನಲ್ಲಿ ಅತ್ಯುತ್ತಮವಾಗಿ ಬೋಧಿಸುವ ಪ್ರಾಧ್ಯಾಪಕರಿದ್ದು ಫಲಿತಾಂಶ ಕೂಡ ಚೆನ್ನಾಗಿದೆ.ನೀವೆಲ್ಲಾ ಉತ್ತಮವಾಗಿ ವ್ಯಾಸಂಗ ಮಾಡಿ ಒಳ್ಳೆಯ ಬದುಕನ್ನು ರೊಪಿಸಿಕೊಳ್ಳಿ ಎಂದು ಪುರಸಭಾಧ್ಯಕ್ಷ ಕೆ.ಶ್ರೀಧರ್ ಸಲಹೆ ನೀಡಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಾಂಸ್ಕೃತಿಕ ವೇದಿಕೆ, ಕ್ರೀಡೆ, ಎನ್.ಎಸ್.ಎಸ್,ಎನ್.ಸಿ.ಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದಾಗ ಈ ಕಾಲೇಜನ್ನು ಇಲ್ಲಿಗೆ ತಂದರು. ಅಂದಿನಿಂದ ಇಂದಿನವರೆಗೆ ನಮ್ಮ ಕಾಲೇಜು ಉತ್ತಮ ಫಲಿತಾಂಶ ಪಡೆಯುತ್ತಿದೆ ಎಂದರು.
ಮುಖ್ಯಭಾಷಣಕಾರರಾಗಿ ಆಗಮಿಸಿದ್ದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಶಿವಕುಮಾರಾಚಾರ್ ಮಾತನಾಡಿ, ನಮ್ಮ ನಾಡಿನ ಕನ್ನಡ ಭಾಷೆ 2500 ವರ್ಷದಷ್ಟು ಪುರಾತನವಾದ್ದದ್ದು. ನಮ್ಮ ಈ ಭಾಷೆಯನ್ನು ಲಾಂಗ್ವೇಜ್ ಎಂದು ಹೇಳುವುದಿಲ್ಲ.ಇದು ಲಾಂಗ್ ಏಜ್ ಹೊಂದಿರುವ ಭಾಷೆ. ದ.ರಾ ಬೇಂದ್ರೆ ಅವರು ನನ್ನ ಶರೀರವೇ ಕನ್ನಡ ಎಂದಾಗ ಅದು ಹೇಗೆ ಎಂದು ಪ್ರಶ್ನಿಸಿದ ವ್ಯಕ್ತಿಗೆ ನನ್ನ ಕೂದಲು, ಕಣ್ಣು, ಕನ್ನಡಕ, ಕುತ್ತಿಗೆ, ಕೈ, ಕಾಲು,ಕರಳು, ಕುರ್ತಾ ಎಲ್ಲವೂ ಕ ಅಕ್ಷರದಿಂದಲೇ ಪ್ರಾರಂಭಾಗುತ್ತದೆ. ಆದ್ದರಿಂದ ನಾನೇ ಕನ್ನಡ ಎಂದು
ಕನ್ನಡಾಭಿಮಾನವನ್ನು ವ್ಯಕ್ತಪಡಿಸಿದ್ದರು.
ಕೆಲವರು ಇಂಗ್ಲೀಷ್ ಭಾಷೆ ಕಲಿಯರಿದ್ದರೆ ಬದುಕೇ ಇಲ್ಲ ಎನ್ನುವ ಭ್ರಮೆಯಲ್ಲಿದ್ದಾರೆ. ಇಂತಹ ಭ್ರಮೆಯಿಂದ ಹೊರಬಂದು ಕನ್ನಡಿಗರಾಗಿ ಉತ್ತಮ ಬದುಕು ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.
ಪ್ರಾಂಶುಪಾಲ ಎಸ್.ಆರ್. ಮೂರ್ತಿ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ. ನಮ್ಮ ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಂತಿದ್ದಾರೆ. ನಾವು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆಧ್ಯತೆ ನೀಡುತ್ತಿದ್ದು ಈ ದಿನ ಸಾಂಸ್ಕೃತಿಕ ವೇದಿಕೆ, ಕ್ರೀಡೆ, ಎನ್ಎಸ್ಎಸ್, ಎನ್.ಸಿ.ಸಿ ಘಟಕಗಳನ್ನು ಉದ್ಘಾಟಿಸಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಮೈಸೂರು ಯುವ ದಸರಾದಲ್ಲಿ ಉತ್ತಮ ಪ್ರದರ್ಶನ ನೀಡಿ ಪಾರಿತೋಷಕ ಪಡೆದ ಹಾಗೂ ಹಾಸನಾಂಭ ದೇವಾಲಯದಲ್ಲಿ ಉತ್ತಮ ಸೇವೆ ನೀಡಿದ ವಿದ್ಯಾರ್ಥಿಗಳಿಗೆ ನೀಡಿದ ಪ್ರಶಂಶನ ಪತ್ರವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಪ್ರಾಧ್ಯಾಪಕರಾದ ಎಚ್.ವಿ.ಪೂರ್ಣಿಮಾ,ಲೆಫ್ಟಿನೆಂಟ್ ಜಯಣ್ಣ,ಸಿದ್ದರಾಮು,ಉಮೇಶ್,ಎಂ, ಉದಯಕುಮಾರ್,ವಿ.ಮನೋಹರ್,ಭಾಗವಹಿಸಿದ್ದರು.
ರಾಗಿಣಿ ಅವರ ನಿರೂಪಣೆ ಅಚ್ಚುಕಟ್ಟಾಗಿದ್ದು ಸಭಿಕರ ಪ್ರಶಂಶೆಗೆ ಪಾತ್ರವಾಯಿತು.ವಿದ್ಯಾರ್ಥಿ, ವಿದ್ಯಾರ್ಥಿನಿಯರು ,ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.
———–ವಸಂತ್ ಕುಮಾರ್