ಚಿಕ್ಕಮಗಳೂರು-ಬಹುಜನ ಸಮಾಜ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿ ಜಾಕೀರ್ ಹುಸೇನ್, ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ, ಕಾರ್ಯದರ್ಶಿಗಳಾಗಿ ಪಿ.ವೇಲಾಯುಧನ್, ಕೆ.ಟಿ. ಸುಧಾ ಹಾಗೂ ಜಿಲ್ಲಾಧ್ಯಕ್ಷರಾಗಿ ಪಿ.ಪರಮೇಶ್ವರ್ ನೂತನವಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯಲ್ಲಿ ಈಚೆಗೆ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಬಿ.ಎಸ್ಪಿ ಉಪಾಧ್ಯಕ್ಷೆ ಮಂಜುಳಾ, ಪ್ರಧಾನ ಕಾರ್ಯದರ್ಶಿ ಆರ್.ವಸಂತ್, ತಾಲ್ಲೂಕು ಅಧ್ಯಕ್ಷ ಹೆಚ್.ಕುಮಾರ್, ಉಪಾಧ್ಯಕ್ಷ ಸಿದ್ದಯ್ಯ, ಹೊನ್ನಪ್ಪ, ಉಡುಪಿ-ಚಿಕ್ಕಮಗಳೂರು ಉಸ್ತುವಾ ರಿ ಗಂಗಾಧರ್, ಕಚೇರಿ ಕಾರ್ಯದರ್ಶಿ ತಂಬನ್ ಮತ್ತಿತರರಿದ್ದರು.