ಕೆ.ಆರ್.ಪೇಟೆ-ತಾಲ್ಲೂಕು ವಕೀಲರ ಸಂಘದ 2024-29ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಎರಡು ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ ಎಂ.ಆರ್.ನಾಗೇಗೌಡ ಅವರು ಅಧ್ಯಕ್ಷರಾಗಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಉಳಿದಂತೆ ಉಪಾಧ್ಯಕ್ಷರಾಗಿ ಪುರುಷೋತ್ತಮ್, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಜೆ.ಮಂಜೇಗೌಡ, ಖಜಾಂಚಿಯಾಗಿ ಪ್ರಸನ್ನಕುಮಾರ್, ಜಂಟಿ ಕಾರ್ಯದರ್ಶಿ ದೊಡ್ಡಯ್ಯ ಹಾಗೂ ನೂತನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಗಿರಿಜಾಜಗದೀಶ್, ಶಿವಕುಮಾರ್, ಅವಿನಾಶ್, ಪ್ರತಾಪ್, ಜನಾರ್ದನ ಹಾಗೂ ಪ್ರವೀಣ್ ಅವರು ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರಾದ ಎಂ.ಆರ್.ನಾಗೇಗೌಡ ಮಾತನಾಡಿ, ನನ್ನ ಅಭೂತಪೂರ್ವ ಗೆಲುವಿಗೆ ಕಾರಣರಾದ ಎಲ್ಲಾ ಹಿರಿಯ, ಕಿರಿಯ ವಕೀಲರು ಹಾಗೂ ನನ್ನ ಗೆಲುವಿಗೆ ಹಗಲಿರುಳು ಶ್ರಮಿಸಿದ ನನ್ನ ಹಿತೈಷಿಗಳು ಮತ್ತು ಮತದಾರ ವಕೀಲರಿಗೆ ಅನಂತ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನ್ನ ಮೇಲೆ ವಿಶ್ವಾಸವಿಟ್ಟು ನನಗೆ ಬಹು ದೊಡ್ಡ ಜವಾಬ್ದಾರಿ ಸ್ಥಾನಕ್ಕೆ ಕೂರಿಸಿದ್ದೀರಿ.ನಿಮ್ಮ ನಂಬಿಕೆಗೆ ಚ್ಯುತಿ ಬಾರದಂತೆ ಕಾರ್ಯವನ್ನು ನಿರ್ವಹಿಸುತ್ತೇನೆ ಎಂದು ತಿಳಿಸಿದರು.
ವಕೀಲರ ಸಂಘದ ಕಾರ್ಯಕಾರಿ ಮಂಡಳಿಯ ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಗಳಾಗಿ ಸತೀಶ್, ಪ್ರಶಾಂತಕುಮಾರ್ ಹಾಗೂ ಗಜೇಂದ್ರ ಕಾರ್ಯನಿರ್ವಹಿಸಿದರು.
——-—ಶ್ರೀನಿವಾಸ್ ಕೆ ಆರ್ ಪೇಟೆ