ಮೈಸೂರು-ಕಲಾಭೂಮಿ ಪ್ರತಿಷ್ಠಾನ, ಪತ್ರಕರ್ತ,ಒಂದು ಹೆಜ್ಜೆ ರಕ್ತ ದಾನಿಗಳ ಬಳಗ ಸಂಸ್ಥಾಪಕ ರಕ್ತದಾನಿ ಮಂಜು ರವರಿಗೆ ‘ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ-2024 ‘ ನೀಡಿ ಗೌರವಿಸಲು ತೀರ್ಮಾನಿಸಿದೆ ಎಂದು ಪ್ರತಿಷ್ಠಾನದ ಮುಖ್ಯಸ್ಥ ಆಸ್ಕರ್ ಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುಣಸೂರ ತಾಲೂಕು ಚೊಳೇನಹಳ್ಳಿ ಗ್ರಾಮದವರಾದ ರಕ್ತದಾನಿ ಮಂಜು ಇಲ್ಲಿಯವರೆಗೂ ತಮ್ಮ ‘ಒಂದು ಹೆಜ್ಜೆ ರಕ್ತ ದಾನಿಗಳ ಬಳಗ’ದ ವತಿಯಿಂದ 2680 ಜನ ರೋಗಿಗಳಿಗೆ ರಕ್ತದಾನ ಮಾಡಿಸುವುದರ ಜೊತೆಗೆ ಸ್ವತಃ 33 ಬಾರಿ ರಕ್ತದಾನ ಮಾಡಿ ಬಹಳಷ್ಟು ಜನರ ಜೀವಗಳನ್ನು ಉಳಿಸಿದ್ದಾರೆ.ಅವರ ಈ ಮಹತ್ತರ ಸೇವೆಯನ್ನು ಗುರುತಿಸಿ ನಮ್ಮ ಕಲಾಭೂಮಿ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ-2024 ‘ಗೆ ಆಯ್ಕೆ ಮಾಡಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಈ ಪ್ರಶಸ್ತಿಯನ್ನು ಇದೆ ತಿಂಗಳ 29 ನೇ ತಾರೀಖಿನಂದು ಬೆಂಗಳೂರಿನ ಕಲಾ ಗ್ರಾಮದ ಸಾಂಸ್ಕೃತಿಕ ಸಮುಚ್ಚಾಲಯದಲ್ಲಿ ಪ್ರಧಾನ ಮಾಡಲಾಗುವುದೆಂದು ತಿಳಿಸಿದ್ದಾರೆ.
——–——-ಮಧುಕುಮಾರ್