
ಚಿಕ್ಕಮಗಳೂರು-ವಿಪರೀತ ಮಳೆಯಿಂದ ಶಾಲಾ ಕಟ್ಟಡವು ಕುಸಿದಿರುವ ಕಾರಣ ನೂತನ ಕಟ್ಟಡ ನಿರ್ಮಿಸಲು ವಿಶೇಷ ಅನುದಾನ ಒದಗಿಸಿ ಮಕ್ಕಳ ಶ್ರೇಯೋಭಿವೃಧ್ದಿಗೆ ಶ್ರಮಿಸಬೇಕು ಎಂದು ಚಂಡಗೋಡು ಗ್ರಾಮಸ್ಥರು ಬಿಎಸ್ಪಿ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್‌ಗೆ ಮನವಿ ನೀಡಿ ಒತ್ತಾಯಿಸಿದರು.
ಬಳಿಕ ಮಾತನಾಡಿದ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ, ದೊಡ್ಡಮಾಗರವಳ್ಳಿ ಗ್ರಾ. ಪಂ. ವ್ಯಾಪ್ತಿಯ ಚಂಡಗೋಡು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಅತಿಯಾದ ಮಳೆಯಿಂದ ಕುಸಿದಿರುವ ಕಾರಣ ವಿದ್ಯಾರ್ಥಿಗಳಿಗೆ ನೂತನ ಕಟ್ಟಡದ ಅವಶ್ಯಕತೆ ಬಹಳಷ್ಟಿದೆ ಎಂದು ಹೇಳಿದರು.

ಶಾಲೆಯ ನೂತನ ಕಟ್ಟಡ ನಿರ್ಮಿಸುವ ಸಂಬoಧ ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಸಚಿವ, ಜಿಲ್ಲಾಧಿಕಾರಿ, ಶಾಸಕರು ಹಾಗೂ ಸಂಬoಧಿಸಿದ ಅಧಿಕಾರಿಗಳ ವೃಂದ ಚಂಡಗೋಡು ಗ್ರಾಮಕ್ಕೆ ಭೇಟಿ ಸಲ್ಲಿಸಿ ಪರಿಶೀಲನೆ ನಡೆಸಿ ಶಾಲೆಗೆ 45 ಲಕ್ಷ ರೂ.ವೆಚ್ಚದಲ್ಲಿ ಮೂರು ಕೊಠಡಿಗಳನ್ನು ನಿರ್ಮಿಸಿಕೊಡುವ ಭರವಸೆ ವ್ಯಕ್ತಪಡಿಸಿದ್ದರು.ಆದರೀಗ ಭರವಸೆ ನೀಡಿ ಅನೇಕ ತಿಂಗಳು ಕಳೆದರೂ ಇದುವರೆಗೂ ಶಾಲೆಯ ಹೊಸ ಕಟ್ಟಡವನ್ನು ನಿರ್ಮಿಸಲು ಅನುದಾನ ಬಿಡುಗಡೆಗೊಂಡಿಲ್ಲ. ಇದರಿಂದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗುತ್ತಿದೆ.ಆ ನಿಟ್ಟಿನಲ್ಲಿ ನೂತನ ಶಾಲಾ ಕಟ್ಟಡವನ್ನು ನಿರ್ಮಿಸಲು ಅನುದಾನ ಒದಗಿಸಿ ವಿದ್ಯಾರ್ಥಿಗಳ ಕಲಿಕೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ, ವಿಧಾನಸಭಾ ಕ್ಷೇತ್ರದ ಸಂಯೋಜಕ ಕೆ.ಆರ್.ಗಂಗಾಧರ್, ಜಿಲ್ಲಾಧ್ಯಕ್ಷ ಪಿ.ಪರಮೇಶ್ವರ್, ಉಪಾಧ್ಯಕ್ಷ ಕೆ.ಎಸ್.ಮಂಜುಳಾ, ತಾಲ್ಲೂಕು ಅಧ್ಯಕ್ಷ ಹೆಚ್.ಕುಮಾರ್, ಕಚೇರಿ ಕಾರ್ಯದರ್ಶಿ ಕಲಾವತಿ, ಚಂಡಗೋಡು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರವಿ, ಆಲ್ದೂರು ಹೋಬಳಿ ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ವಸಂತ್‌ಕುಮಾರ್,ಲಕ್ಷ್ಮಣ್, ಗ್ರಾಮಸ್ಥರಾದ ಕೃಷ್ಣ, ರಘು, ಮಂಜುನಾಥ, ಕಲ್ಲೇಶ್, ಸೋಮಶೇಖರ್, ಶಿವಕುಮಾರ್, ಶಂಕರ್‌ಹುಣಸೆಮಕ್ಕಿ ಇದ್ದರು.
———ಸುರೇಶ್