ಚಿಕ್ಕಮಗಳೂರು-ತಾಲ್ಲೂಕಿನ ಹರಿಹರದಹಳ್ಳಿ ಸಮೀಪ ಶಂಕರದೇವರ ಮಠದಲ್ಲಿ ಶ್ರೀ ಗುರು ಶಂಕರಸ್ವಾಮಿ ಕಾರ್ತೀಕ ದೀಪೋತ್ಸವ ನ.24 ರಂದು ಮಧ್ಯಾಹ್ನ 3 ಗಂಟೆಯಿoದ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಗುರು ಶಂಕರಸ್ವಾಮಿ ಸೇವಾ ಪ್ರತಿಷ್ಟಾನ ಸದಸ್ಯ ಎಂ.ಬಿ.ಅಶೋಕ್‌ಕುಮಾರ್ ತಿಳಿಸಿದ್ದಾರೆ.
ಅಂದಿನ ದೀಪೋತ್ಸವ ಕಾರ್ಯಕ್ರಮದಲ್ಲಿ ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಉದ್ಘಾಟನೆಯನ್ನು ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಸಮಿತಿ ಗೌರವಾಧ್ಯಕ್ಷ ಬಿ.ಬಿ.ರೇಣುಕಾರ್ಯ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕರಾದ ಹೆಚ್.ಡಿ.ತಮ್ಮಯ್ಯ, ನಯನ ಮೋಟಮ್ಮ, ಸಿ.ಟಿ.ರವಿ, ಎಸ್. ಎಲ್.ಬೋಜೇಗೌಡ, ಮಾಜಿ ವಿಧಾನ ಪರಿಷತ್ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ, ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರ ಅಧ್ಯಕ್ಷ ಎ.ಎನ್.ಮಹೇಶ್, ವಿವಿಧ ಮಠದ ಸ್ವಾಮೀಜಿಗಳು, ಮುಖಂಡರುಗಳು ದೀಪೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.