ಹೊಳೆನರಸೀಪುರ-ಎಸ್ಎಲ್ಎಲ್ ಯುವಕ ಸಂಘ ನವಂಬರ್ 21 ರಿಂದ 24 ರವರೆಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ.
ಇದರ ಅಂಗವಾಗಿ ಪಟ್ಟಣದ ಕೋಟೆ, ಪೇಟೆ, ಅಂಬೇಡ್ಕರ್ ವೃತ್ತ, ಗಾಂಧೀವೃತ್ತ, ಸುಭಾಶ್ ವೃತ್ತ ಸೇರಿದಂತೆ ಪ್ರಮುಖ ವೃತ್ತ ಮತ್ತು ರಸ್ತೆಗಳನ್ನು ವಿದ್ಯುತ್ ದೀಪಾಲಂಕಾರಗಳಿಂದ ಸಿಂಗರಿಸಿದ್ದು ಹೊಳೆನರಸೀಪುರ ನವ ವಧುವಿನಂತೆ ಕಂಗೊಳಿಸುತ್ತಿದೆ