ತುಮಕೂರು-ಕಾಲೇಜು ಗ್ರಂಥಾಲಯವು ಎಲ್ಲ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು ಶಾಂತಿಯ ಕೇಂದ್ರಸ್ಥಳ. ನಿಶ್ಯಬ್ಧವಾದ ವಾತಾವರಣದಲ್ಲಿ ಭೋದಕರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಗ್ರಂಥಾಲಯದಲ್ಲಿರುವ ವಿವಿಧ ವಿಷಯಗಳ ಪುಸ್ತಕಗಳನ್ನು ಅಧ್ಯಯನ ಮಾಡುವ ಮೂಲಕ ತಮ್ಮ ಜ್ಞಾನಭಂಡಾರವನ್ನು ಹೆಚ್ಚಿಸಿಕೊಳ್ಳಬೇಕು.ದಿನದಲ್ಲಿ ಕನಿಷ್ಟ ಅರ್ಧಗಂಟೆಯಾದರೂ ಗ್ರಂಥಾಲಯ ಬಳಕೆ ಮಾಡಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಟಿ.ಬಿ.ನಿಜಲಿಂಗಪ್ಪನವರು ತಿಳಿಸಿದರು.
ಅವರು ಇಂದು ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಗ್ರಂಥಾಲಯದಲ್ಲಿ ಆಯೋಜಿಸಿದ್ದ ಗ್ರಂಥಾಲಯ ಸಪ್ತಾಹ ದಿನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಥಿತಿಗಳಾಗಿ ಆಗಮಿಸಿದ್ದ ಹಿರಿಯ ನಿವೃತ್ತ ಗ್ರಂಥಪಾಲಕರಾದ ಎಂ.ಸಿ.ಪಾಟೀಲ್‌ರವರು ಮಾತನಾಡುತ್ತಾ ನಮ್ಮ ಗ್ರಂಥಾಲಯ ಪ್ರತಿ ಗುರುವಾರ ವಿದ್ಯಾರ್ಥಿಗಳಿಗೆ ವೇದಿಕೆ ಕೊಟ್ಟು ‘ಮನದಾಳದ ಮಾತು’ ಎಂಬ ಕಾರ್ಯಕ್ರಮವನ್ನು ನಡೆಸುತ್ತಿದ್ದು ಇದರಿಂದ ಗ್ರಂಥಾಲಯ ನ್ಯಾಕ್ ಶ್ರೇಣಿಯಲ್ಲಿ ಬೆಸ್ಟ್ ಪ್ರಾಕ್ಟೀಸ್ ಎಂಬ ಹೆಗ್ಗಳಿಕೆಗೆ
ಪಾತ್ರವಾಗಿದೆ.
ಹಾಗೆಯೇ ಗ್ರಂಥಾಲಯದ ಪ್ರತಿಯೊಬ್ಬ ನುರಿತ ಸಿಬ್ಬಂದಿ ಒಳ್ಳೆ ಸೇವೆಯನ್ನು ನೀಡುತ್ತಿದ್ದಾರೆ. ಪ್ರತಿವರ್ಷ ನವಂಬರ್ 14ರಿಂದ 25ರವರೆಗೆ ಗ್ರಂಥಾಲಯ ಸಪ್ತಾಹ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದೇವೆ ಎಂದು ತಿಳಿಸಿದರು.
ಪ್ರಥಮ ವರ್ಷದ ಬಿ.ಎಸ್.ಸಿ. ವಿದ್ಯಾರ್ಥಿ ಸನಾಉಲ್ಲಾ ಎನ್.ಎಂ.ರವರು ಗುರುವಾರದ ಮನದಾಳದ ಮಾತು ಕಾರ್ಯಕ್ರಮದಲ್ಲಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಂರವರನ್ನು ಕುರಿತು ಮಾತನಾಡಿದರು.
ಐ.ಕ್ಯೂ.ಎ.ಸಿ. ಸಂಯೋಜಕರಾದ ಶ್ರೀಮತಿ ಸರ್ವಮಂಗಳ, ಐ.ಕ್ಯೂ.ಎ.ಸಿ.ಸಲಹೆಗಾರರಾದ ಪ್ರೊ. ಸಿ.ಎಸ್. ಸೋಮಶೇಖರಯ್ಯ, ಸಿ.ಪಿ.ಆರ್. ಪರಿಸರ ವಿಜ್ಞಾನ ಯೋಜನಾಧಿಕಾರಿಗಳಾದ ರವಿಶಂಕರ್ ಎಸ್. ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು.
ಕಾಲೇಜಿನ ಭೋದಕ, ಭೋದಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಗ್ರಂಥಪಾಲಕರಾದ ಬಿ.ಎನ್.ಪರಿಮಳ ಸ್ವಾಗತಿಸಿದರು, ಗ್ರಂಥಾಲಯ ಹಿರಿಯ ಅಧಿಕಾರಿಗಳಾದ ಬಸವಣ್ಣ ಬಿ.ಎಂ. ವಂದಿಸಿದರು. ಗ್ರಂಥಪಾಲಕರಾದ ಬಿ.ಎನ್.ಪರಿಮಳ ಸ್ವಾಗತಿಸಿದರು,ಗ್ರಂಥಾಲಯ ಸಿಬ್ಬಂದಿಗಳಾದ ಕಿರಣ್‌ಕುಮಾರ್ ಎಲ್. ಮತ್ತು ಸರೋಜರವರು ಕಾರ್ಯಕ್ರಮ ನಿರ್ವಹಿಸಿದರು