
ಕೊಟ್ಟಿಗೆಹಾರ: ರಸ್ತೆ ದಾಟುತ್ತಿದ್ದಾಗ ವಾಹನ ಅಪಘಾತ ಸಂಭವಿಸಿ ಗಾಯಗೊಂಡ ನಾಗರಹಾವಿಗೆ ಉರಗ ಪ್ರೇಮಿ ಮೊಹಮ್ಮದ್ ಆರೀಫ್ ಚಿಕಿತ್ಸೆ ನೀಡಿ ರಕ್ಷಣೆ ಮಾಡಿದ್ದಾರೆ.
ನಾಗರ ಹಾವಿನ ಹೊಟ್ಟೆಯ ಬಳಿ ಗಾಯವಾಗಿದ್ದು ಬಣಕಲ್ ಪಶು ಆಸ್ಪತ್ರೆಯಲ್ಲಿ ಪಶುವೈದ್ಯೆ ಪೂಜಾ ಚಿಕಿತ್ಸೆ ನೀಡಿದ್ದಾರೆ.ಬಳಿಕ ನಾಗರ ಹಾವನ್ನು ಸುರಕ್ಷಿತವಾಗಿ ಚಾರ್ಮಾಡಿ ಘಾಟ್ ಅರಣ್ಯಕ್ಕೆ ಬಿಡಲಾಯಿತು.
ಈ ಸಂದರ್ಭದಲ್ಲಿ ಪಶು ಆರೋಗ್ಯ ಸಹಾಯಕ ಪ್ರದೀಪ್ ರಾಜ್ ಇದ್ದರು.
—-————–ಆಶಾ ಸಂತೋಷ್