
ಮೈಸೂರು-ನಗರದ ಗೋಕುಲಂ 1ನೇ ಹಂತ ಮುಖ್ಯರಸ್ತೆ, ವಿ.ವಿ.ಮೊಹಲ್ಲಾದಲ್ಲಿರುವ ಶ್ರೀರಾಮ ಮಂದಿರದಲ್ಲಿ ನ.27 ರ0ದು ಬುಧವಾರ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಬಲಮುರಿ ಗಣಪತಿ ಪ್ರಾಣ ಪ್ರತಿಷ್ಠಾಪನೆಯನ್ನು ಹಮ್ಮಿಕೊಳ್ಳಲಾಗಿದೆ.
ಇದರ ಸಲುವಾಗಿ ಬೆಳಿಗ್ಗೆ 10ಕ್ಕೆ ಗಣಹೋಮ, ನವಗ್ರಹ ಹೋಮ,10.30ಕ್ಕೆ ಕುಂಭಾಭಿಷೇಕ ಹಾಗೂ 11.30ರಿಂದ 12 ಗಂಟೆಗೆ ಮಹಾಮoಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗವಿರುತ್ತದೆ.

ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಬಲಮುರಿ ಗಣಪತಿ ಹಾಗೂ ಶ್ರೀರಾಮ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.