ಚಿಕ್ಕಮಗಳೂರು-ಆಟೋ ಚಾಲಕರ ಸಂಘದ ವತಿಯಿಂದ ಅಬಲರಿಗೆ ಅನ್ನದಾನ-ಶ್ರೇಷ್ಠ ಕಾರ್ಯವೆಂದು ಬಣ್ಣಿಸಿದ-ಮೊಹಮ್ಮದ್ ನಯಾಜ್

ಚಿಕ್ಕಮಗಳೂರು-ಅನ್ನದಾನ ಜಗತ್ತಿನಲ್ಲೇ ಶ್ರೇಷ್ಟದಾನ.ವೃಧ್ದರು,ಅಸಹಾಯಕರು ಹಾಗೂ ವಿಕಲಚೇತನ ಮಕ್ಕಳಿಗೆ ಭೋಜದ ವ್ಯವಸ್ಥೆ ಕಲ್ಪಿಸುವ ಮೂಲಕ ಆಟೋ ಚಾಲಕರು ಮಹತ್ತರ ಕಾರ್ಯ ಮಾಡಿದ್ದಾರೆ ಎಂದು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ನಯಾಜ್ ಹೇಳಿದರು.

ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿoದ 69ನೇ ಕನ್ನಡ ರಾಜ್ಯೋತ್ಸವ ಆಚರಣೆ ಸಂಬoಧ ಶನಿವಾರ ಆದಿಶಕ್ತಿನಗರ ಸಮೀಪದ ಜೀವನ ಸಂಧ್ಯಾ ವೃದ್ದಾಶ್ರಮದಲ್ಲಿ ಏರ್ಪಡಿಸಿದ್ಧ ಭೋಜನದ ವ್ಯವಸ್ಥೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವೃದ್ದಾಪ್ಯದ ಬದುಕು ಸಾಗಿಸುತ್ತಿರುವ ಹಿರಿಯ ಜೀವಗಳಿಗೆ ರಾಜ್ಯೋತ್ಸವ ಪ್ರಯುಕ್ತ ವಿಶೇಷ ಭೋಜನ ವ್ಯವಸ್ಥೆ ಕಲ್ಪಿಸಿರುವುದು ಉತ್ತಮವಾದುದು. ಮನೆಯ ಪಾಲಕರಂತೆಯೇ ವೃದ್ದಾಶ್ರಮದ ವೃಧ್ದರಿಗೆ ಸ್ಪಂದಿಸುವ ಗುಣ ಸಾರ್ವಜನಿಕರು ಮೈಗೂಡಿಸಿಕೊಂಡಾಗ ಮಾತ್ರ ಅವರು ಸಂತೋಷದಿoದ ಕಳೆಯಲು ಸಾಧ್ಯ ಎಂದು ಹೇಳಿದರು.

ಸಮಾಜಮುಖಿ ಕಾರ್ಯದಲ್ಲಿ ಹಲವು ಸಂಘ-ಸoಸ್ಥೆಗಳು, ದಾನಿಗಳು ವೃದ್ದಾಶ್ರಮ ಸೇರಿದಂತೆ ಅಶಕ್ತರಿಗೆ ಸಹಾಯಹಸ್ತ ಚಾಚಿ ಮುನ್ನೆಡೆದರೆ ಮಾತ್ರ ಯಶಸ್ವಿ ವ್ಯಕ್ತಿಯಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬಹುದು. ಹೀಗಾಗಿ ದುಡಿಮೆಯ ಇಂತಿಷ್ಟು ಹಣವನ್ನು ಅಸಹಾಯಕರಿಗೆ ವ್ಯಯಿಸುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.

ಆಟೋ ಚಾಲಕರ ಸಂಘದ ನಗರ ಕಾರ್ಯದರ್ಶಿ ಜಗದೀಶ್ ಕೋಟೆ ಮಾತನಾಡಿ, ದಿನನಿತ್ಯ ಕೂಲಿ ಕಾರ್ಮಿಕರಾಗಿ ದುಡಿಯುವ ಆಟೋ ಚಾಲಕರ ಸಹಕಾರದಿಂದ ಪ್ರತಿ ವರ್ಷ ರಾಜ್ಯೋತ್ಸವದಂದು ಅಂಧ ಮಕ್ಕಳ ಶಾಲೆ, ವೃದ್ದಾಶ್ರಮಗಳಿಗೆ ಭೋಜದ ವ್ಯವಸ್ಥೆ ಕಲ್ಪಿಸಿ ಸಹಕರಿಸಲಾಗುತ್ತಿದೆ ಎಂದು ಹೇಳಿದರು.

ಆಟೋ ವೃತ್ತಿಯಲ್ಲಿ ವಿದ್ಯಾವಂತರು, ಅವಿದ್ಯಾವಂತರು ಸೇರಿದಂತೆ ಎಲ್ಲಾ ವರ್ಗದವರು ಬದುಕು ಕಟ್ಟಿ ಕೊಂಡಿದ್ದಾರೆ. ಚಾಲಕರಲ್ಲಿ ಸೇವೆ ಹಾಗೂ ದುಡಿಮೆ ಮನೋಭಾವದ ತತ್ವವನ್ನು ಒಳಗೊಂಡಿದೆ. ದುಡಿಮೆ ಕುಟುಂಬವನ್ನು ಸುಧಾರಿಸಿದರೆ, ಸೇವೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮುನ್ನೆಡೆಯುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ಅಂಧಮಕ್ಕಳಶಾಲೆ, ಅನ್ನಪೂರ್ಣವೃಧ್ದಾಶ್ರಮ ಹಾಗೂ ಜೀವನ ಸಂಧ್ಯಾ ಮೂರು ಕಡೆಗಳಲ್ಲಿ ಭೋಜನದ ವ್ಯವಸ್ಥೆ ಕಲ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಆಟೋ ಸಂಘದ ನಿರ್ದೇಶಕ ಈಶ್ವರ್, ಚಾಲಕರಾದ ವಿಜಯ್, ರಮೇಶ್, ಪೂರ್ಣೇಶ್, ಸಂದೀಪ್, ಸುನೀಲ್, ನವೀನ್, ದಯಾನಂದ್, ಚೇತನ್ ಮತ್ತಿತರರಿರು ಇದ್ದರು.

Leave a Reply

Your email address will not be published. Required fields are marked *

× How can I help you?