ಎಚ್.ಡಿ.ಕೋಟೆ:ಗ್ಯಾರೇಜ್ ಗೆ ಬೆಂಕಿ-ಸಮಯಕ್ಕೆ ಆಗಮಿಸದ ಅಗ್ನಿಶಾಮಕ ವಾಹನ-ರಸ್ತೆಯೇ ಕಾರಣವೆಂದು ದೂರಿದ ಗ್ರಾಮಸ್ಥರು

ಎಚ್.ಡಿ.ಕೋಟೆ:ತಾಲೂಕಿನ ಪಡುವಕೋಟೆ ಗ್ರಾಮದ ಗ್ಯಾರೇಜ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೆ ಹಲವು ದ್ವಿಚಕ್ರವಾಹನಗಳು ಬೆಂಕಿಗಾಹುತಿಯಾಗಿವೆ.

ಗ್ರಾಮದ ಯುವಕ ಅಜಿತ್ ಗೆ ಸೇರಿದ ಗ್ಯಾರೇಜ್ ನಲ್ಲಿ ತಡರಾತ್ರಿ 8:30 ರ ಸುಮಾರಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ.ಇದರಿಂದ ಬೆಂಕಿಯ ಕೆನ್ನಾಲಿಗೆ ಶೆಡ್ ತುಂಬಾ ಆವರಿಸಿದೆ. ಗ್ಯಾರೇಜ್ ಗೆ ಬಿಟ್ಟಿದ್ದ ಹಲವು ದ್ವಿಚಕ್ರವಾಹನಗಳು ಸುಟ್ಟ್ಟು ಕರಕಲಾಗಿವೆ .

ದುರ್ಘಟನೆ ಸಂಭವಿಸಿತ್ತಿದ್ದಂತೆಯೇ ಸ್ಥಳೀಯ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸರಿಯಾದ ಸಮಯಕ್ಕೆ ಅಗ್ನಿಶಾಮಕದಳ ಅಧಿಕಾರಿಗಳು ಆಗಮಿಸಿದ್ದರೆ ದೊಡ್ಡ ಮಟ್ಟದ ಅನಾಹುತ ತಪ್ಪಿಸಬಹುದಿತ್ತು, ನಾನು ಮಾಹಿತಿ ನೀಡಿದ ನಂತರ ತಡವಾಗಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಿಮಿಸಿದ್ದಾರೆ ಎಂದು ಮಾಲೀಕ ಅಜಿತ್ ಬೇಸರ ವ್ಯಕ್ತಪಡಿಸಿದ್ದಾರೆ.

ಎಚ್.ಡಿ.ಕೋಟೆ ಗದ್ದಿಗೆ ಮಾರ್ಗದ ರಸ್ತೆಯು ತೀರಾ ಹದಗೆಟ್ಟಿರುವುದರಿಂದ ಅಗ್ನಿಶಾಮಕ ವಾಹನ‌ ತಡವಾಗಿ‌ ಆಗಮಿಸಿದೆ. ಈ ಭಾಗದ ರಸ್ತೆಯಲ್ಲಿ ಗರ್ಭಿಣಿ, ಬಾಣಂತಿಯರು ಹಾಗೂ ವಯೋವೃದ್ಧರು ಸಂಚರಿಸುವುದೇ ದುಸ್ತರವಾಗಿದೆ. ಈ ಭಾಗದ ರಸ್ತೆ ಸರಿಪಡಿಸುವಂತೆ ಶಾಸಕರು ಹಾಗೂ ಅಧಿಕಾರಿಗಳಿಗೆ ಹಲವಾರು ಬಾರಿ‌ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪಡುಕೋಟೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸ್ಥಳಕ್ಕೆ ಭೇಟಿ‌‌ ನೀಡಿದ ಎಚ್.ಡಿ.ಕೋಟೆ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಶಬ್ಬೀರ್ ಹುಸೇನ್ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

—-ಶಿವು ಕೋಟೆ

Leave a Reply

Your email address will not be published. Required fields are marked *

× How can I help you?