ಚಿಕ್ಕಮಗಳೂರು-ರಾಜಧಾನಿಯ ಐ.ಟಿ.-ಬಿ.ಟಿ. ಕಂಪನಿಗಳಲ್ಲಿ ಕನ್ನಡ ಭಾಷೆ ಮರೆಯಾಗುತ್ತಿದೆ.ಸ್ನೇಹಿತರು,ಸಂಬoಧಿಕರ ನಡುವೆಯು ಆಂಗ್ಲಭಾಷೆ ವ್ಯಾಮೋಹ ಹೆಚ್ಚಳಗೊಂಡ ಪರಿಣಾಮ ಮಾತೃಭಾಷೆ ಕ್ಷೀಣಿಸುತ್ತಿದೆ ಎಂದು ನಗರಸಭಾ ಪೌರಾಯುಕ್ತ ಬಿ.ಸಿ.ಬಸವರಾಜ್ ಹೇಳಿದರು.
ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಸಮೀಪ ವಂದೇ ಮಾತರಂ ಆಟೋ ನಿಲ್ದಾಣದಲ್ಲಿ ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿoದ ಏರ್ಪಡಿಸಿದ್ಧ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾನುವಾರ ಪಾಲ್ಗೊಂಡು ಅವರು ಮಾತನಾಡಿದರು.
ನಾಡಿನಾದ್ಯಂತ ಭಾಷೆಯ ಆತ್ಮಾಭಿಮಾನವನ್ನು ಇಂದಿಗೂ ಜೀವಂತ ಇರಿಸಿರುವವರು ಆಟೋ ಚಾಲಕರು. ನೂರಾರು ಪ್ರವಾಸಿಗರು, ಗ್ರಾಹಕರೊಂದಿಗೆ ಕನ್ನಡದಲ್ಲೇ ವ್ಯವಹರಿಸಿ ಮಾತೃಭಾಷೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಚಾಲಕರ ಸೇವೆ ಅವಿಸ್ಮರಣೀಯ ಎಂದು ತಿಳಿಸಿದರು.
ರಾಜ್ಯದಲ್ಲಿ ಹಲವಾರು ಜಿಲ್ಲೆಗಳಲ್ಲಿ ಕನ್ನಡವನ್ನೇ ವಿಭಿನ್ನ ಶೈಲಿಯಲ್ಲಿ ಮಾತನಾಡುವುದು ಗಮನಿಸಿದ್ದೇವೆ ಎಂದ ಅವರು ಆ ಭಾಗದ ಕನ್ನಡಿಗರು ಎಂದಿಗೂ ಕನ್ನಡಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡಿಲ್ಲ.ಆದರೆ ಆಧುನಿಕತೆ ಬೆಳೆದಂತೆ ಯುವಸಮೂಹ ಆಂಗ್ಯಭಾಷೆಯ ವ್ಯಾಮೋಹಕ್ಕೆ ಆಕರ್ಷಿತರಾಗುವುದು ಉತ್ತಮ ಬೆಳವಣಿಗೆಯಲ್ಲ ಎಂದರು.
ಇತ್ತೀಚೆಗೆ ಆಟೋ ಚಾಲಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್ ನಿಲ್ದಾಣದ ಸಮೀಪ 15 ಲಕ್ಷ ರೂ. ವೆಚ್ಚದಲ್ಲಿ ನಗರಸಭಾದಿಂದ ಸುರಕ್ಷಿತ ಆಟೋ ನಿಲ್ದಾಣ ನಿರ್ಮಿಸಿಕೊಡಲಾಗಿದೆ ಎಂದ ಅವರು ಚಾಲಕರ ಮನವಿ ಮೇರೆಗೆ ಆಟೋ ಸಂಘದ ಕಚೇರಿ ತೆರೆಯಲು ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಕನ್ನಡಾಭಿಮಾನ ಬೆಳೆಸುವಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು.ನಾಡಿನ ಕವಿಸಂತರು,ದಾರ್ಶನಿಕರ ಹಾಗೂ ಭಾಷೆಯ ಇತಿಹಾಸದ ಪುಟ ಓದಿದರೆ, ನಾಡಿನ ನೈಜ ಪರಂಪರೆ ಅರಿಯಲು ಸಾಧ್ಯ ಎಂದು ತಿಳಿಸಿದರು.
ಆಟೋ ಸಂಘದ ನಗರ ಕಾರ್ಯದರ್ಶಿ ಕೋಟೆ ಜಗದೀಶ್ ಮಾತನಾಡಿ, ನೆರೆರಾಜ್ಯದಂತೆ ಕನ್ನಡಿಗರು ಮಾತೃಭಾಷೆಯ ಬಗ್ಗೆ ವಿಶೇಷ ಅಭಿಮಾನ ಹೊಂದಬೇಕು. ಕನ್ನಡ ಸೇವೆಯಲ್ಲಿ ನಿರಂತರಾದಾಗ ಮಾತ್ರ ಕನ್ನಡವನ್ನು ಉಳಿಸಿ, ಬೆಳೆಸಲು ಸಾಧ್ಯ. ಹೀಗಾಗಿ ಚಾಲಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಕನ್ನಡಾಭಿ ಮಾನ ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಆಟೋ ಸಂಘದ ಜಿಲ್ಲಾಧ್ಯಕ್ಷ ಉದಯ್‌ಕುಮಾರ್, ನಗರಾಧ್ಯಕ್ಷ ರಾಮೇಗೌಡ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಸಹ ಕಾರ್ಯದರ್ಶಿ ಯಶ್ವಂತ್, ನಿರ್ದೇಶಕರಾದ ಅಶ್ವಥ್, ಈಶ್ವರ್, ಚಾಲಕರಾದ ವೆಂಕಟೇಶ್, ಮಿಲ್ಟ್ರಿ ಮಂಜು, ರಾಜು ಮತ್ತಿತರರಿರು ಹಾಜರಿದ್ದರು.
————————ಸುರೇಶ್