ಬಣಕಲ್-ಸಾವರ್ಕರ್ ಯುವ ಪ್ರತಿಷ್ಠಾನದ ವತಿಯಿಂದ ನಗರದ ಹಿಂದೂ ರುದ್ರಭೂಮಿಯಲ್ಲಿ ಸಚ್ಛತಾ ಕಾರ್ಯ ನಡೆಸಲಾಯಿತು.
ಶವಗಳ ಸಂಸ್ಕಾರದ ಸಂದರ್ಭದಲ್ಲಿ ಹೂವು ಹಾಗು ಇನ್ನಿತರ ಕರಗದ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಕಿ ಹೋಗುವ ಕಾರಣದಿಂದ ಸ್ಮಶಾನದ ಇಡೀ ಪರಿಸರವೇ ಗಬ್ಬು ನಾರುತ್ತಿತ್ತು.ಜೊತೆಗೆ ಗಿಡಗಂಟೆಗಳು ಬೆಳೆದು ವಿಷಜಂತುಗಳು ಸೇರಿಕೊಂಡು ಶವ ಸಂಸ್ಕಾರಕ್ಕೆ ಬಂದವರೇ ಅಪಾಯಕ್ಕೊಳಗಾಗುವ ಸಾಧ್ಯತೆಗಳಿದ್ದವು.
ಇದನ್ನು ಮನಗಂಡ ಸಾವರ್ಕರ್ ಯುವ ಪ್ರತಿಷ್ಠಾನದ ಪ್ರಭುದ್ಧ ಯುವಕರು ಸ್ಮಶಾನದ ಒಳಗೆ ಹಾಗು ಹೊರಗಿನಲ್ಲೂ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.
—————–ಸೂರಿ ಬಣಕಲ್