ಅರಕಲಗೂಡು-ಕುಂಚಟಿಗರ ಮೀಸಲಾತಿ ಹೋರಾಟಕ್ಕೆ ನನ್ನ ಬೆಂಬಲವಿದೆ-ಕುಂಚಟಿಗರು ಒಕ್ಕಲಿಗ ಸಮುದಾಯದ ಅಂಗ-ಎ ಮಂಜು

ಅರಕಲಗೂಡು-ವಿದ್ಯಾವಂತ ಜನರಿಂದಷ್ಟೇ ದೇಶದ ಬದಲಾವಣೆ ಸಾಧ್ಯ.ರೈತರು ಇದನ್ನು ಅರಿತುಕೊಂಡು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸುವತ್ತ ಚಿತ್ತ ಹರಿಸಬೇಕು ಎಂದು ಶಾಸಕ ಎ ಮಂಜು ಸಲಹೆ ನೀಡಿದರು.

ಮುತ್ತುಗದ ಹೊಸೂರು ಗ್ರಾಮದಲ್ಲಿ ನಡೆದ ಅರಕಲಗೂಡು ತಾಲ್ಲೂಕು ಕುಂಚಟಿಗರ ಸಂಘದ 11 ನೇ ವರ್ಷದ ವಾರ್ಷಿಕೋತ್ಸವ,ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಓ.ಬಿ.ಸಿ ಮೀಸಲು ಹಕ್ಕೊತ್ತಾಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಎಲ್ಲಾ ಪೋಷಕರೂ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಿ ಅವರಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಸಮಾಜದಲ್ಲಿ ಉತ್ತಮ ನಾಗರೀಕರಾಗಿ, ಸುಸಂಸ್ಕೃತರಾಗಿ ಬಾಳುವಂತೆ ಮಾಡಬೇಕು.ಕುಂಚಿಟಿಗರಿಗೆ ಒ.ಬಿ.ಸಿ ಸವಲತ್ತುಗಳು ಸಿಕ್ಕಿಲ್ಲ. ಕುಂಚಟಿಗರು ಬುಡಕಟ್ಟು ಸಂಸ್ಕೃತಿ,ಕೃಷಿ ಹಿನ್ನೆಲೆಯಲ್ಲಿ ಬಂದಿದ್ದು,ಒಕ್ಕಲಿಗ ಸಮುದಾಯದ ಬಹುದೊಡ್ಡ ಅಂಗವೆಂದು ಕುಂಚಟಿಗ ಕುಲಶಾಸ್ತ್ರ ಅಧ್ಯಯನದಲ್ಲಿ ಸ್ಪಷ್ಟಪಡಿಸಿದ್ದರೂ ಕೇಂದ್ರದ ಒ.ಬಿ.ಸಿ ಪಟ್ಟಿಯಲ್ಲಿ ಮೀಸಲಾತಿ ಸಿಕ್ಕಿಲ್ಲ. ಇದಕ್ಕಾಗಿ ನಡೆಸುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.

ಕುಂಚಿಟಿಗರ ಸಂಘದ ಅದ್ಯಕ್ಷ ಎಂ ಟಿ ಪಾಂಡುರಂಗ ಮಾತನಾಡಿ,ಗ್ರಾಮಾಂತರ ಪ್ರದೇಶದಲ್ಲಿ ತಮ್ಮ ಜಾತಿ ದೃಢೀಕರಣ ಪತ್ರದಲ್ಲಿ ಕುಂಚಟಿಗ ಎಂದು ನಮೂದಿಸಿರುವವರಿಗೆ ಅನ್ಯಾಯವಾಗಿದೆ.ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಕುಂಚಟಿಗ ಸಮಾಜದವರು ಒಕ್ಕಲಿಗ ಎಂದು ನಮೂದಿಸಿಕೊಂಡಿದ್ದಾರೆ. ಕುಂಚಿಟಿಗ ಒಕ್ಕಲಿಗ ಎಂದು ಕರೆಯಲಾಗುತ್ತಿದ್ದು ಅವರಿಗೆ 3 ಎ ಸೌಲಭ್ಯ ದೊರೆಯುತ್ತಿದೆ ಎಂದರು.

ಸ್ವಸ್ಥ ಸಮಾಜ ನಿರ್ಮಾಣ ಸಮಿತಿ ಅಧ್ಯಕ್ಷ ಪ್ರದೀಪ್ ರಾಮಸ್ವಾಮಿ, ಹಿಂದುಳಿದಿರುವ ನಿಮ್ಮ ಸಮಾಜಕ್ಕೆ ಮೀಸಲಾತಿ ಬೇಕಿದೆ.ಅದು ನಿಮ್ಮ ಸಮಾಜದ ಹಕ್ಕಾಗಿದ್ದು ಗೊಂದಲಗಳಿಗೆ ಒಳಗಾಗುವುದು ಬೇಡ.ಇಡೀ ಸಮುದಾಯ ಮೀಸಲಾತಿ ಪಡೆಯಲು ಹೋರಾಟ ಮಾಡಬೇಕು ಎಂದರು.

ಅರಕಲಗೂಡು ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ ಆಶೀರ್ವಚನ ನೀಡಿದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಯಲ್ಲಿ ಶೇಕಡಾ 80 ಮೇಲ್ಪಟ್ಟ ಸುಮಾರು 55 ಕುಂಚಟಿಗ ಸಮುದಾಯದ ಮಕ್ಕಳು ಮತ್ತು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಮಕ್ಕಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲ್ಲೂಕು ಕುಂಚಿಟಿಗರ ಸಂಘದ ಗೌರವಾಧ್ಯಕ್ಷ ಗೋವಿಂದೇಗೌಡ,ಕೃಷ್ಣೇಗೌಡ ಹೆಚ್.ವಿ. ಚಿಕ್ಕಮಗಳೂರು ಬಿಜೆಪಿ ಅಧ್ಯಕ್ಷ ಸಿ.ಎಸ್. ರಂಗನಾಥ್ ,ಜಿ.ಪಂ ಮಾಜಿ ಅಧ್ಯಕ್ಷೆ ಭಾಗ್ಯ ಗೋವಿಂದೇಗೌಡ, ತಾಲೂಕು ಕುಂಚಿಟಿಗರ ಸಂಘದ ಉಪಾಧ್ಯಕ್ಷ ವೈ.ಟಿ. ಕುಮಾರ್,ಚಂದ್ರೇಗೌಡ,ಸತೀಶ,ವಿಶ್ವನಾಥ್, ಅಣ್ಣೇಗೌಡ, ಲತಾ ಈರೇಗೌಡ, ಕೆ .ಕೆ. ಹರೀಶ್,ಎನ್.ಕೆ.ರಾಮೇಗೌಡ,ಎನ್.ಅಸರ್.ಭಾಸ್ಕರ್, ರವಿ,ಚಂದ್ರಶೇಖರ್, ಕಾಳೇಗೌಡ ,ಶಿವಣ್ಣ, ಮುತ್ತುಗದ ಹೊಸೂರು ಗ್ರಾಮದ ಮುಖಂಡರು,ಮತ್ತಿತರರು ಇದ್ದರು.

——————–ಶಶಿಕುಮಾರ್ ಕೆಲ್ಲೂರು

Leave a Reply

Your email address will not be published. Required fields are marked *

× How can I help you?