ಕೆ.ಆರ್.ಪೇಟೆ-ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ದಿವಾಕರ್ ಅವರ ತೋಟದ ಬಲೆಯಲ್ಲಿ ಸಿಕ್ಕಿಬಿದ್ದಿದ್ದ ಹೆಬ್ಬಾವನ್ನು ಉರಗ ರಕ್ಷಕ ಕುಮಾರ್ ಸಂರಕ್ಷಣೆ ಮಾಡಿ ನಾರಾಯಣದುರ್ಗ ಅರಣ್ಯ ಪ್ರದೇಶದಲ್ಲಿ ಪ್ರಕೃತಿಯ ಮಡಿಲಿಗೆ ಬಿಟ್ಟರು.
ಸುಮಾರು 6ಅಡಿ ಉದ್ದವಿರುವ 3ವರ್ಷ ಪ್ರಾಯದ 12 ಕೆ.ಜಿ ತೂಕವಿದ್ದ ಈ ಹೆಬ್ಬಾವು ತೋಟದ ಸುತ್ತ ಅಳವಡಿಸಿದ್ದ ಸುರಕ್ಷತಾ ಬಲೆಗೆ ಸಿಕ್ಕಿಬಿದ್ದು ಬಿಡಿಸಿಕೊಳ್ಳಲಾಗದೇ ಒದ್ದಾಡುತ್ತಿತ್ತು. ಕೂಡಲೇ ದಿವಾಕರ್ ಅವರು ಉರಗತಜ್ಞ ಕೋಬ್ರಾ ಕುಮಾರ್ ಅವರಿಗೆ ಸುದ್ದಿ ಮುಟ್ಟಿಸಿದಾಗ ಸ್ಥಳಕ್ಕೆ ಆಗಮಿಸಿದ ಅವರು ಹೆಬ್ಬಾವನ್ನು ಹಿಡಿದು ಕೃಷ್ಣರಾಜಪೇಟೆ ತಾಲೂಕು ವಲಯ ಅರಣ್ಯ ಅಧಿಕಾರಿ ಅನಿತಾಪ್ರವೀಣ್ ಅವರ ಗಮನಕ್ಕೆ ತಂದು ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಮಕ್ಷಮದಲ್ಲಿ ನಾರಾಯಣದುರ್ಗ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟರು.
————ಶ್ರೀನಿವಾಸ್ ಕೆ.ಆರ್ ಪೇಟೆ