ತುಮಕೂರು:ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಸಂವೇದನಾಶೀಲತೆ ಮತ್ತು ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಮತ್ತು ನಿವಾರಿಸುವ ಕೋಶ ಮತ್ತು ಕಾನೂನು ಸೇವಾ ಘಟಕದಿಂದ ಇಂದು’ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ ತಡೆ ದಿನ’ವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸರ್ಕಾರಿ ಅಭಿಯೋಜಕರಾದ ಕವಿತಾ ವಿ.ಎ. ರವರು ಆಗಮಿಸಿ ಮಹಿಳಾ ದೌರ್ಜನ್ಯ ತಡೆಗಟ್ಟುವಿಕೆ ಬಗ್ಗೆ ಹಲವಾರು ವಿಚಾರಗಳನ್ನು ಮಂಡಿಸುತ್ತಾ ಕರ್ನಾಟಕದಲ್ಲಿರುವ ಮಹಿಳಾ ಹೋರಾಟಗಾರರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ. ಆಧುನಿಕ ಯುಗದಲ್ಲಿ ಮಹಿಳೆಯ ಮೇಲೆ ಆಗುವ ಲೈಂಗಿಕ ಶೋಷಣೆಯು ಕೇವಲ ಪುರುಷರಿಂದ ಅಷ್ಟೇ ಅಲ್ಲಾ ಮಹಿಳೆ-ಮಹಿಳೆಯರಿಂದಲೂ ಆಗುತ್ತಿರುವುದು ವಿಷಾದನೀಯ ಎಂದು ಹೇಳಿದರು.
ಈ ಶೋಷಣೆಯನ್ನು ತಡೆಗಟ್ಟಬೇಕಾದರೆ ಆಧುನಿಕ ಕಾಲದ ಮಹಿಳೆಯರು ತಮ್ಮ ವೈಯಕ್ತಿಕ ವಿಚಾರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬಳಸುವಾಗ ಎಚ್ಚರಿಕೆಯಿಂದ ವರ್ತಿಸಬೇಕು.ಯಾವ ವಿಚಾರ ಎಷ್ಟರ ಮಟ್ಟಿಗೆ ಹಂಚಿಕೊಳ್ಳಬೇಕೆoಬ ಬಗ್ಗೆ ಅರಿವಿರಬೇಕು ಎಂದು ಹಲವಾರು ಪ್ರಕರಣಗಳೊಂದಿಗೆ ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಸಿ.ಇ.ಓ.ಪ್ರೊ.ಕೆ.ಚಂದ್ರಣ್ಣನವರು ಅಧ್ಯಕ್ಷತೆ ವಹಿಸಿದ್ದರು. ಮ್ಯಾನೇಜಿಂಗ್ ಟ್ರಸ್ಟಿಯವರಾದ ಹೆಚ್.ಎಸ್.ರಾಜು, ಪ್ರಾಂಶುಪಾಲರಾದ ಶ್ರೀಮತಿ ಶಮಾಸೈಯದಿ,ಐಕ್ಯೂಎಸಿ ಸಂಚಾಲಕರಾದ ಕುಮಾರ್ ಎನ್.ಹೆಚ್. ಡಾ.ಮಮತಾ ಕ್ಯಾತಣ್ಣನವರ್,ಪ್ರೊ.ರಶ್ಮಿ ಬೋಧಕ ಮತ್ತು ಬೋಧಕೇತರ ನೌಕರರು ಹಾಜರಿದ್ದರು.
———–ಚಂದ್ರಚೂಡ